ಬೆಂಗಳೂರು ಬಂಟರ ಸಂಘದ “ಸ್ವಚ್ಛ ಭಾರತಕ್ಕಾಗಿ ಅರಿವಿನ ನಡಿಗೆ” : 300ಕ್ಕೂ ಹೆಚ್ಚು ಮಂದಿ ಭಾಗಿ - BUNTS NEWS WORLD

ಬೆಂಗಳೂರು ಬಂಟರ ಸಂಘದ “ಸ್ವಚ್ಛ ಭಾರತಕ್ಕಾಗಿ ಅರಿವಿನ ನಡಿಗೆ” : 300ಕ್ಕೂ ಹೆಚ್ಚು ಮಂದಿ ಭಾಗಿ

Share This
BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ ಯುವ ಘಟಕ ಹಾಗೂ ಸಮಾಜ ಸೇವಾ ಘಟಕದ ಆಯೋಜನೆಯಲ್ಲಿ ಗಾಂಧಿಜಯಂತಿಯ ಅಂಗವಾಗಿ “ಸ್ವಚ್ಛ ಭಾರತಕ್ಕಾಗಿ ಅರಿವಿನ ನಡಿಗೆ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ಮುಂಜಾನೆ 7ಕ್ಕೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ ಬಗ್ಗೆ ಜನತೆಗೆ ಅರಿವು ಮೂಡಿಸುವ ಘೋಷಣಾ ವ್ಯಾಕವನ್ನು ಮೆರವಣಿಗೆಯುದ್ದಕ್ಕೂ ಹೇಳಿದರು. ಜತೆಗೆ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದರು.

ಕಾರ್ಯಕ್ರಮಕ್ಕೆ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ ರೈ, ಗೋವಿಂದರಾಜ ನಗರ ವಾರ್ಡ್ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ ಹಾಗೂ ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು ಪ್ರಶಾಂತ್ ರೈ ಜಂಟಿಯಾಗಿ ಚಾಲನೆ ನೀಡಿದರು.

ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಪ್ರೇಮ್’ಪ್ರಸಾದ್ ಶೆಟ್ಟಿ, ಸಮಾಜ ಸೇವಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಗೌರವ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಜೆ., ಜತೆ ಕಾರ್ಯದರ್ಶಿ ಕಾಂತಿ ಶೆಟ್ಟಿ, ಕೋಶಾಧಿಕಾರಿ ಆನಂದರಾಮ್ ಶೆಟ್ಟಿ, ನಟ ಶಿವಧ್ವಜ್ ಶೆಟ್ಟಿ, ಸುರೇಂದ್ರ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
---------------------------------------------------------------------------------------------------------------------

Pages