BUNTS NEWS,ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್
ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಟ್ರಸ್ಟ್
ವಿಶ್ವದಾದ್ಯಂತ ಪ್ರಸಿದ್ಧಿಯಾಗಲು ಕಾರಣೀಕರ್ತರಾದ ಎಲ್ಲಾ ಯಕ್ಷ ಕಲಾಭಿಮಾನಿಗಳಿಗೆ,
ವಿವಿಧ ಘಟಕದ ಪದಾಧಿಕಾರಿಗಳಿಗೆ, ಟ್ರಸ್ಟ್ನ ಕಾರ್ಯಕ್ರರ್ತರಿಗೆ ಹಾಗೂ
ದಾನಿಗಳಿಗೆ ಟ್ರಸ್ಟ್ನ ಸ್ಥಾಪಕಾಧ್ಯಕ್ಷ
ಪಟ್ಲ ಸತೀಶ್ ಶೆಟ್ಟಿ ಕೃತಜ್ಞತೆಯನ್ನು
ಸಲ್ಲಿಸಿದರು.
ಎಂಪಾರ್ಮಾಲ್ನಲ್ಲಿರುವ ಯಕ್ಷಧ್ರುವ
ಪಟ್ಲ ಪೌಂಡೇಶನ್
ಟ್ರಸ್ಟ್ನ ಕಚೇರಿಯಲ್ಲಿ ನಡೆದ
ಸಭೆಯಲ್ಲಿ ಅಧ್ಯಕ್ಷತೆವಹಿಸಿ ಪಟ್ಲ ಸತೀಶ್ ಶೆಟ್ಟಿ
ಮಾತನಾಡಿದರು. ಟ್ರಸ್ಟ್ ಕೈಗೊಂಡ ಯೋಜನೆಗಳನ್ನು
ವಿವರಿಸಿದ ಅವರು ಟ್ರಸ್ಟ್ ಈಗ
ಎಲ್ಲಾ ಕಡೆ ವಿಸ್ತಾರವಾಗಿ ಬೆಳೆಯುತ್ತಿದೆ.
ಘಟಕಗಳ ರಚನೆಯಾಗುತ್ತಿದೆ. ಯಕ್ಷರಂಗದಲ್ಲಿ ತೀರಾ ಬಡತನದಲ್ಲಿರುವ ಮತ್ತು
ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರ
ಬದುಕಿಗೆ ಟ್ರಸ್ಟ್ ಸಹಾಯಹಸ್ತ ನೀಡುವುದಾಗಿ ತಿಳಿಸಿದರು.
ಕಲಾವಿದರ ವಸತಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ಸೆ.25ರಂದು ದೆಹಲಿಯಲ್ಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ದೆಹಲಿ ಘಟಕ ಉದ್ಘಾಟನೆಗೊಳ್ಳಲಿದೆ ಎಂದು ಸತೀಶ ಶೆಟ್ಟಿ ತಿಳಿಸಿದರು.
-------------------------------------------------------------------------------------------------------------------------