ಮಂಗಳೂರು: ನಿಲುಮೆ ಫೌಂಡೇಶನ್ ಸಂಸ್ಥೆಯಡಿಯಲ್ಲಿ
ಪುಸ್ತಕ ಪ್ರಕಾಶನ,ವೆಬ್ ತಾಣ
ಮತ್ತು ಸಾಮಾಜಿಕ ಜಾಲತಾಣದ ಗುಂಪುಗಳು
ಕಾರ್ಯ ನಿರ್ವಹಿಸುತ್ತಿವೆ.ನಿಲುಮೆ ಪ್ರಸಿದ್ದ ಜಾಲತಾಣಗಳಲ್ಲೊಂದಾಗಿದ್ದು
ಸಾಂಸ್ಕೃತಿಕ, ಬೌದ್ಧಿಕಮತ್ತು ರಾಷ್ಟ್ರೀಯ ವಿಚಾರಧಾರೆಯ ಲೇಖನ,ಸಂವಾದಗಳಿಗೆ ಪ್ರಮುಖ
ವೇದಿಕೆಯಾಗಿದೆ.ತನ್ನ ಜಾಲತಾಣದ ವೇದಿಕೆಯ
ಮೂಲಕ ನಿಲುಮೆ ಇಂದು 29500ಕ್ಕೂ
ಹೆಚ್ಚು ಜನರನ್ನು ತಲುಪುತ್ತಿದೆ.
ಇತ್ತೀಚೆಗೆ,ಜಮ್ಮು-ಕಾಶ್ಮೀರ ರಾಜ್ಯ
ಭಾರತದ ಒಕ್ಕೂಟಕ್ಕೆ ಸೇರಿದ ಕುರಿತು ಸಮಾಜದಲ್ಲಿ
ತಪ್ಪು ಮಾಹಿತಿಗಳನ್ನು ತೀವ್ರ ಗತಿಯಲ್ಲಿ ಹರಡುತ್ತ,ದೇಶ ವಿರೋಧಿ ಭಾವನೆಗಳನ್ನು
ಯುವಕರಲ್ಲಿ ತುಂಬುವಂತಹ ಘಟನೆಗಳುನಡೆಯುತ್ತಿವೆ.ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ರಾಜ್ಯವು ಭಾರತದ
ಒಕ್ಕೂಟಕ್ಕೆ ಸೇರುವ ಸಮಯದ ಐತಿಹಾಸಿಕ
ಸತ್ಯಗಳ ಕುರಿತು ಬೆಳಕು ಚೆಲ್ಲುವ
ಮೂಲಕ ಈ ದೇಶ ವಿರೋಧಿ
ಶಕ್ತಿಗಳ ಸುಳ್ಳಿನ ಪ್ರಚಾರವನ್ನುತಡೆಯುವ ಹಾಗೂ
ಯುವಕರಿಗೆ ಈ ದೇಶದ ನೈಜ
ಇತಿಹಾಸವನ್ನು ತಲುಪಿಸುವ ಸದುದ್ದೇಶದಿಂದ ನಿಲುಮೆ ಫೌಂಡೇಶನ್ ಸಂಸ್ಥೆ
" ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ
ತಲ್ಲಣಗಳು"ಎಂಬ ವಿಷಯದ ಕುರಿತ
ವಿಚಾರ ಸಂಕಿರಣ ಮತ್ತು ಸಂವಾದ
ಕಾರ್ಯಕ್ರಮವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ
ಆಯೋಜಿಸಲು ನಿರ್ಧರಿಸಿದೆ.
ಇದರ ಅಂಗವಾಗಿ, ಮುಂದಿನ ಭಾನುವಾರ, ಸೆಪ್ಟಂಬರ್
18 ನೇ ತಾರೀಖು ಮಂಗಳೂರಿನ ಮಣ್ಣಗುಡ್ಡದಲ್ಲಿರುವ
"ಸಂಘನಿಕೇತನ" ದಲ್ಲಿ ಬೆಳಗ್ಗೆ 10 ರಿಂದ
1.30 ರವರೆಗೆ ಕಾರ್ಯಕ್ರಮವನ್ನು ಮಂಥನ ಮಂಗಳೂರು ಇದರ
ಸಹಯೋಗದೊಂದಿಗೆ ಆಯೋಜಿಸಿದ್ದೇವೆ..ಕಾರ್ಯಕ್ರಮದ ಉದ್ಘಾಟನೆಯನ್ನು ಆಳ್ವಾಸ್
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು
ಮಾಡಲಿದ್ದಾರೆ.ಅಂಕಣಕಾರ,ಅಂತರಾಷ್ಟ್ರೀಯ ವಿದ್ಯಾಮಾನಗಳ
ಪರಿಣಿತರಾದ ಪ್ರೊ.ಪ್ರೇಮಶೇಖರ ಹಾಗೂ
ಅಂಕಣಕಾರ, ಪ್ರಖರವಾಗ್ಮಿ ಶ್ರೀ.ಚಕ್ರವರ್ತಿ ಸೂಲಿಬೆಲೆಯವರು
ವಿಷಯ ಮಂಡನೆಮಾಡಲಿದ್ದಾರೆ.
ತಾವು ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು
ಎಂಬುದು ನಮ್ಮ ಅಪೇಕ್ಷೆ. ಕಾರ್ಯಕ್ರಮದ
ವರದಿಯನ್ನು ನಿಮ್ಮ ಮಾಧ್ಯಮದ ಮೂಲಕ
ನಾಡಿನ ಜನರಿಗೆ ತಲುಪಿಸಿ ಎಂದು
ಕೇಳಿಕೊಳ್ಳುತ್ತೇವೆ. ಕಾರ್ಯಕ್ರಮದಕುರಿತು ಏನಾದರೂ ಮಾಹಿತಿಗಾಗಿ ನಮ್ಮ
ಮೊಬೈಲ್ ನಂಬರ್ ಹೀಗಿದೆ :ಸಂದೀಪ್
- 8147953299
--------------------------------------------------------------------------------------------------------------------------
--------------------------------------------------------------------------------------------------------------------------