ತುಳು ನಾಟಕ ಕಲಾವಿದರ ಒಕ್ಕೂಟದ ಮಹಾಸಭೆ - BUNTS NEWS WORLD

 

ತುಳು ನಾಟಕ ಕಲಾವಿದರ ಒಕ್ಕೂಟದ ಮಹಾಸಭೆ

Share This
BUNTS NEWS,ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ಕದ್ರಿ ದೇವಸ್ಥಾನದ ಬಳಿ ಇರುವ ಗೋಕುಲ್ ಸಭಾಭವನದಲ್ಲಿ . ಕಿಶೋರ್ ಡಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತ್ತು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್ ರವರು 15-16 ವರದಿ ಹಾಗೂ ಲೆಕ್ಕಪತ್ರಗಳನ್ನು ಮಹಾ ಸಭೆಯಲ್ಲಿ ಮಂಡಿಸಿದರು
ತುಳು ನಾಟಕ ರಂಗದ ಹಿರಿಯ ಕಲಾವಿದರಾದ ರಾಘವ ಎಸ್ ಉಚ್ಚಿಲ್ರವರು ಇತ್ತೀಚೆಗೆ ನಿಧನ ಹೊಂದಿರುವ ಬಗ್ಗೆ ಹಾಗೂ ಇನ್ನೋರ್ವ ತುಳು ನಾಟಕ  ಚಲನಚಿತ್ರ ಕಲಾವಿದರಾದ ರಾಜೇಶ್ ಬಂಟ್ವಾಳರವರು ಅಕಾಲಿಕ ನಿಧನ ಹೊಂದಿರುವ ಬಗ್ಗೆ ಮಹಾಸಭೆಯು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದರು


ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದುಷ್ಕರ್ಮಿಗಳು ಅವಾಚ್ಯ ಹಾಗೂ ಅವಹೇಳನಕಾರಿಯಾಗಿ ಬರೆದು ಪ್ರಚುರ ಪಡಿಸಿರುವ ಬಗ್ಗೆ ಒಕ್ಕೂಟವು ಸಾಮೂಹಿಕವಾಗಿ ಖಂಡಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಅಗ್ರಹಿಸಲಾಯಿತು.

ಹಿರಿಯ ಸದಸ್ಯರಾದ ವಿ.ಜಿ.ಪಾಲ್, ಕೆ.ಕೆ. ಗಟ್ಟಿ, ತಮ್ಮ ಲಕ್ಷ್ಮಣ, ಭಾಸ್ಕರ್ ಕುಲಾಲ್, ಭೋಜರಾಜ ವಾಮಂಜೂರು, ಶೇಖರ ಶೆಟ್ಟಿ ಹೊೈಗೆಕಲ್ಲು, ತಮ್ಮ ಅಭಿಪ್ರಾಯವನ್ನು ಮಹಾಸಭೆಯಲ್ಲಿ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ಗೋಕುಲ್ ಕದ್ರಿ, ವಸಂತಿ ಜೆ. ಪೂಜಾರಿ, ಸರೋಜಿನಿ ಶೆಟ್ಟಿ, ಜಯಶೀಲ, ಶೋಭ ಶೆಟ್ಟಿ, ಕ್ಯಾಲಿ ಡಿ. ಎಸ್. ನಾಗೇಶ್ ದೇವಾಡಿಗ ಕದ್ರಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಆರ್ಥಿಕ ನೇರವು: ಕಲಾವಿದರ ಒಕ್ಕೂಟದಿಂದ ಸಂಕಷ್ಟಗೊಳಗಾದ ಕಲಾವಿದರಿಗೆ ಕ್ಷೇಮ ನಿಧಿಯ ಮೂಲಕ ಆರ್ಥಿಕ ನೆರವು ನೀಡುವುದರೊಂದಿಗೆ ಕಲಾವಿದರ ಮಕ್ಕಳ ವಿದ್ಯಾಭ್ಯಾಸ, ಮಂಗಳಕಾರ್ಯ, ಅನಾರೋಗ್ಯ ಮುಂತಾದ ಸಂರ್ಭಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ. ಸಾಮೂಹಿಕ ಆರೋಗ್ಯ ವಿಮೆಯು ಸೌಲಭ್ಯವನ್ನು ಜಾರಿಗೆ ತಂದಿದ್ದು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆಯೂ ಒಕ್ಕೂಟದಿಂದ ಕಲಾವಿದರ ಶ್ರೇಯೋಭಿವೃದ್ಧಿಗೆ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಅಧ್ಯಕ್ಷರ ಭಾಷಣದಲ್ಲಿ ಕಿಶೋರ್ ಡಿ. ಶೆಟ್ಟಿಯವರು ತಿಳಿಸಿದರು.

ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ನಿಧನರಾದ ರಾಜೇಶ್ ಬಂಟ್ವಾಳ್ರವರ ಕುಟುಂಬಕ್ಕೆ ಒಕ್ಕೂಟದ ಅಧ್ಯಕ್ಷರ ನೆಲೆಯಲ್ಲಿ ರೂ. 50.000 ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಒಕ್ಕೂಟದ ಕೋಶಾಧಿಕಾರಿ ಮೋಹನ ಕೊಪ್ಪಳ ಕದ್ರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ವಂದಿಸಿದರು.
--------------------------------------------------------------------------------------------------------------------------

Pages