ರಾಷ್ಟ್ರವೇ ಮೆಚ್ಚಿದ ಅಪ್ರತಿಮ ನೃತ್ಯ ಕಲಾವಿದೆ ಅದ್ವಿಕಾ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಷ್ಟ್ರವೇ ಮೆಚ್ಚಿದ ಅಪ್ರತಿಮ ನೃತ್ಯ ಕಲಾವಿದೆ ಅದ್ವಿಕಾ ಶೆಟ್ಟಿ

Share This
BUNTS NEWS, ಮಂಗಳೂರು: ತನ್ನ ಅಸಾಧಾರಣ ಪ್ರತಿಭೆಯಿಂದ ಎಳೆಯ ವಯಸ್ಸಿನಲ್ಲಿಯೇ ರಾಷ್ಟ್ರದೆಲ್ಲೆಡೆ ಮೆಚ್ಚುಗೆ ಪಡೆದ ತುಳುನಾಡ ಅಪ್ರತಿಮ ಕಲಾವಿದೆ ಅದ್ವಿಕಾ ಶೆಟ್ಟಿ.
ಅದ್ವಿಕಾ ಮೂಲತಃ ಮಂಗಳೂರಿನ ಹೊರವಲಯದ ಸುರತ್ಕಲ್’ನ ವೇಣುಗೋಪಾಲ್ ಶೆಟ್ಟಿ ಮತ್ತು ಅರ್ಪಿತಾ ವಿ.ಶೆಟ್ಟಿ ದಂಪತಿಯ ಮುದ್ದಿನ ಮಗಳು. ಬಾಲ್ಯದಿಂದಲೂ ನೃತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಅದ್ವಿಕಾಗೆ ಅವರ ತಂದೆ ತಾಯಿಯ ಪ್ರೋತ್ಸಾಹದಿಂದ ಇಂದು ಅಪ್ರತಿಮ ನೃತ್ಯ ಕಲಾವಿದೆಯಾಗಲು ಸಾಧ್ಯವಾಗಿದೆ.

ಅದ್ವಿಕಾ ತನ್ನ ಕಿರು ವಯಸ್ಸಿನಲ್ಲಿಯೆ ದೇಶದ ಪ್ರಮುಖ ಹಿಂದಿ ಮನೋರಂಜನ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಅಲ್ಲದೆ ಕರ್ನಾಟಕದ ಕಲರ್ಸ್ ಕನ್ನಡ ವಾಹಿನಿ ನಡೆಸಿದ ಡ್ಯಾನ್ಸಿಂಗ್ ಸ್ಟಾರ್’ನಲ್ಲಿ ತನ್ನ ಅಮೋಘ ನೃತ್ಯದಿಂದ ಎಲ್ಲರ ಮನೆ ಮಾತಾಗಿದ್ದಳು. ಅದ್ವಿಕಾಳ ಪ್ರತಿಭೆಗೆ ಜನ ಎಷ್ಟೊಂದು ಮನ ಸೋತ್ತಿದ್ದಾರೆಂದರೆ ಇಂದು ಅವಳದೇ ಆದ ಅಭಿಮಾನಿ ಬಳಗವು ಹುಟ್ಟಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಕರಾವಳಿಯ ಗಂಡುಕಲೆ ಯಕ್ಷಗಾನ, ಭರತನಾಟ್ಯದಲ್ಲೂ ಅದ್ವಿಕಾ ಮುಂದಿದ್ದು ಚಿತ್ರಕಲೆ, ಫ್ಯಾಷನ್ ಡಿಸೈನ್, ಕಾರ್ಯಕ್ರಮ ನಿರೂಪಣೆಗಳಲ್ಲೂ ಹಿಡಿತ ಸಾಧಿಸಿದ್ದಾಳೆ. ಕೇರಳ, ಬೆಂಗಳೂರು, ಮುಂಬೈಗಳಲ್ಲೂ ಪ್ರದರ್ಶನ ನೀಡಿರುವ ಅದ್ವಿಕಾ ಇದುವರೆಗೂ ಸರಿ ಸುಮಾರು 700ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿದ್ದಾಳೆ. ಅದ್ವಿಕಾ ಕಲಾಪ್ರತಿಭೆಗೆ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ಸುರಭಾ ಪ್ರತಿಭಾ ಪುರಸ್ಕಾರ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರಮುಖ ಪ್ರಶಸ್ತಿಗಳ ಜತೆ ನೂರಾರು ಇತರ ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾಳೆ.

ಇಂತಹ ಅಪೂರ್ವ ಕಲಾವಿದೆ ಅದ್ವಿಕಾ ಶೆಟ್ಟಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಅವರ ಪ್ರತಿಭೆಯು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಬಂಟ್ಸ್ ನ್ಯೂಸ್.ಕಾಂ ಹಾರೈಸುತ್ತದೆ.
-------------------------------------------------------------------------------------------------

Pages