ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ - ಆಯ್ಕೆ ಅಕ್ಟೋಬರ್ 15ಕ್ಕೆ - BUNTS NEWS WORLD

ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ - ಆಯ್ಕೆ ಅಕ್ಟೋಬರ್ 15ಕ್ಕೆ

Share This
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆ – ಆಯ್ಕೆ ಪ್ರಕ್ರಿಯೆಯು ಮುಂದಿನ ತಿಂಗಳು ಅಕ್ಟೋಬರ್ 15ಕ್ಕೆ ನಡೆಯಲಿದೆ.
ಈ ಕುರಿತಂತೆ ಬಂಟರ ಯಾನೆ ಮಾತೃಸಂಘವು ಪ್ರತಿಕಾ ಪ್ರಕಟಣಾ ಜಾಹೀರಾತನ್ನು ನೀಡಿದೆ. ಈ ಪ್ರತಿಕಾ ಪ್ರಕಟಣೆಯ ಪ್ರಕಾರ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರ ಚುನಾವಣೆ – ಆಯ್ಕೆ ಪ್ರಕ್ರಿಯೆಯು 15-10-2016 ರಂದು ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ನಡೆಯಲಿದೆ.

ಉಳಿದ ತಾಲೂಕುವಾರು ಕೇಂದ್ರ ಸಮಿತಿ ಸದಸ್ಯರ ಚುನಾವಣೆ-ಆಯ್ಕೆ ಪ್ರಕ್ರಿಯೆಯು 21-10-2016 ರಂದು ಆಯಾಯ ತಾಲೂಕುಗಳಲ್ಲಿ ನಡೆಯಲಿದೆ. ಮುಖ್ಯ ಚುನಾವಣಾಧಿಕಾರಿ ಯಾಗಿ ಹಿರಿಯ ವಕೀಲರಾದ ಪ್ರಥ್ವಿರಾಜ್ ರೈ, ಉಮೇಶ್ ರೈ ಚುನಾವಣಾಧಿಕಾರಿಯಾಗಿ ವಕೀಲರಾದ ನವೀನ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದಾಗಿ ಪ್ರಕಟಣೆ ತಿಳಿಸಿದೆ.
------------------------------------------------------------------------------------------------

Pages