ಪೆನ್ಸಿಲ್ ಸ್ಕೇಚ್’ನಲ್ಲಿ ಪರಿಣಿತ ಕಲಾವಿದ ನವೀನ್ ಶೆಟ್ಟಿ ದುಬೈ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪೆನ್ಸಿಲ್ ಸ್ಕೇಚ್’ನಲ್ಲಿ ಪರಿಣಿತ ಕಲಾವಿದ ನವೀನ್ ಶೆಟ್ಟಿ ದುಬೈ

Share This
BUNTS NEWS, ಮಂಗಳೂರು: ಕಲೆ ಎಂಬುದು ಕೆಲವರಿಗೆ ಪರಿಶ್ರಮದಿಂದ ಒಲಿದು ಬಂದರೆ ಇನ್ನು ಕೆಲವರಿಗೆ ಹುಟ್ಟಿನಿಂದಲೇ ಸಿದ್ಧಿಯಾಗಿರುತ್ತದೆ. ಅಂತಹ ಅಪೂರ್ವ ಕಲೆಗಾರರಲ್ಲಿ ನವೀನ್ ಶೆಟ್ಟಿ ಒಬ್ಬರಾಗಿದ್ದಾರೆ.

ಕಾವೂರಿನ ಪಂಜಿಮೊಗೆರು ನಿವಾಸಿಯಾಗಿರುವ ನವೀನ್ ಶೆಟ್ಟಿ ಅವರು ಬಿಡಿಸಿದ ಪೆನ್ಸಿಲ್ ಸ್ಕೇಚ್ ಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದೆ. ಬಾಲ್ಯದಿಂದಲೂ ಚಿತ್ರಕಲೆ ಬಗ್ಗೆ ಒಲವು ಹೊಂದಿರುವ ನವೀನ್ ಶೆಟ್ಟಿ ಅವರು ತನ್ನ ಬಿಡುವಿನ ಸಮಯದಲ್ಲಿ ಚಿತ್ರ ಬರೆಯುವ ಹವ್ಯಾಸ ಹೊಂದಿದ್ದಾರೆ.  ಅವರು ಬಿಡಿಸಿರುವ ಕೆಲವೊಂದು ಪೆನ್ಸಿಲ್ ಸ್ಕೇಚ್ ಚಿತ್ರಗಳನ್ನು ನೀವಿಲ್ಲಿ ಕಾಣಬಹುದಾಗಿದೆ.


ಪ್ರಸ್ತುತ ದುಬೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಚಾರ ಬಯಸದ ನವೀನ್ ಶೆಟ್ಟಿ ಅವರ ಅಪೂರ್ವ ಕಲೆಯು ಕೇವಲ ಅವರಲ್ಲೆ ಉಳಿಯುವ ಬದಲು ಸಮಸ್ತರಿಗೆ ತಿಳಿಸುವ ಉದ್ದೇಶದಿಂದ ಬಂಟ್ಸ್ ನ್ಯೂಸ್.ಕಾಂ ಈ ಲೇಖನ ಪ್ರಕಟಿಸಿದೆ. 
-------------------------------------------------------------------------------------------------

Pages