ಮಾಡಾವು ಡಾ.ಹರ್ಷಕುಮಾರ ರೈ ದೇಶಾಭಿಮಾನಕ್ಕೆ ವಿಹಿಂಪ ಗೌರವ ಅಭಿನಂಧನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾಡಾವು ಡಾ.ಹರ್ಷಕುಮಾರ ರೈ ದೇಶಾಭಿಮಾನಕ್ಕೆ ವಿಹಿಂಪ ಗೌರವ ಅಭಿನಂಧನೆ

Share This
BUNTS NEWS, ದೆಹಲಿ: ಇತ್ತೀಚೆಗೆ ಬಿಡುಗಡೆಗೊಂಡ ಡಾ.ಹರ್ಷಕುಮಾರ ರೈ ಮಾಡಾವು ಅವರ ನಿರ್ಮಾಣದ ದೇಶಾಭಿಮಾನದ ‘ಭಾರತ್ ಮಾತಾ ಕೀ ಜೈ" ಕಿರುಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ  ವಿಶ್ವ ಹಿಂದೂ ಪರಿಷತ್ ತನ್ನ ದೆಹಲಿಯ ಕೇಂದ್ರೀಯ ಕಚೇರಿಯಲ್ಲಿ ಅಭಿನಂದಿಸಿದೆ.
ಈ ಸಂದರ್ಭ ವಿಹಿಂಪ ಅಂತರಾಷ್ಟ್ರೀಯ ಸಂಚಾಲಕ ಚಂಪತ್ ರಾಯ್, ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಪ್ರಶಾಂತ್, ಜಾಗತಿಕ ಹಿಂದೂ ಒಕ್ಕೂಟದ ಮುಖ್ಯಸ್ಥ ಸ್ವಾಮಿ ವಿಗ್ಯಾನಂದ, ಹಿಂದೂ ಹೆರಿಟೇಜ್ ಪೌಂಡೇಶನ್ ಕಾರ್ಯದರ್ಶಿ  ಸಂಜೀವ ಸ್ವಾಮಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


“ಭಾರತ್ ಮಾತಾ ಕೀ ಜೈ ಕಿರುಚಿತ್ರದ ಹಿನ್ನೆಲೆ: ಜನ್ಮ ಕ್ರಿಯೇಷನ್ಸ್ ಮೂಲಕ ಡಾ.ಹರ್ಷಕುಮಾರ ರೈ ಮಾಡಾವು ನಿರ್ಮಾಣದ ದೇಶಭಕ್ತಿ ಆಧಾರಿತ ಹಿಂದಿ ಕಿರುಚಿತ್ರ “ಭಾರತ್ ಮಾತಾ ಕೀ ಜೈ ಅಗಸ್ಟ್ 15ರ ಸ್ವಾತಂತ್ರ್ಯ ದಿನದಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಬಿಡುಗಡೆಗೊಳಿಸಿದ್ದರು.
ಕೇಂದ್ರ ಸಚಿವ ರಾಜನಾಥ ಸಿಂಗ್ ಅವರಿಂದ "ಭಾರತ್ ಮಾತಾ ಕೀ ಜೈ" ಕಿರುಚಿತ್ರ ಬಿಡುಗಡೆ ಸಂದರ್ಭ

ಭಾರತ್ ಮಾತಾ ಕೀ ಜೈ ಕಿರುಚಿತ್ರದಲ್ಲಿ ಪ್ರಮಿತ್ ರಾಜ್ ಕಟ್ಟತ್ತಾರ್ ಇವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇದ್ದು ಈ ಕಿರುಚಿತ್ರವನ್ನು ಮುಸ್ಸಂಜೆ ಮಾತು ಖ್ಯಾತಿಯ ನವೀನ್ ನೇರಳ್ತೋಡಿ ನಿರ್ದೇಶನ ಮಾಡಿದ್ದಾರೆ. ಪುತ್ತೂರಿನ ಅರುಣ್ ರೈ ಛಾಯಾಗ್ರಾಹಣದಲ್ಲಿ ಸುಂದರವಾಗಿ ಮೂಡಿ ಬಂದಿರುವ ಭಾರತ್ ಮಾತಾ ಕೀ ಜೈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಶಿವಂ ಕ್ರಿಯೇಷನ್ಸ್ ಕುಂಬ್ಲೆ ವಹಿಸಿದ್ದರು.
“ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ ಹುಟ್ಟಿ ಬೆಳೆದು ಬಂದ ನಮಗೆ ಭಾರತಮಾತೆಗೆ ಎಲ್ಲಿಯಾದರೂ ಹಾನಿವುಂಟಾದಾಗ ನಮ್ಮಲ್ಲಿರುವ ಶಾಂತಿ, ಸಹನೆ ಹಾಗೂ ಪ್ರೀತಿ ಎಲ್ಲವೂ ಕ್ರಾಂತಿ ರೂಪ ತಳೆದು ಹೋರಾಟದ ಹಾದಿ ಹಿಡಿಯಲು ಹಿಂಜರಿಯುವುದಿಲ್ಲ” ಎನ್ನುವುದೇ ಈ ಕಿರುಚಿತ್ರದ ಸಾರಾಂಶ.

ಚಿತ್ರದಲ್ಲಿ ಮಾ.ಆಯುಷ್, ಕು.ಕಾರ್ತಿಕಾ ರೈ ಪ್ರದಾನ ಪಾತ್ರದಲ್ಲಿ ನಟಿಸಿರುವ ಈ ಕಿರುಚಿತ್ರದಲ್ಲಿ ಕಲಾವಿದರಾದ ನರೇಶ್ ಕುಲಾಲ್, ಶೋಭಿತ್ ಶೆಟ್ಟಿ, ಬಾಲಕೃಷ್ಣ, ಕೀರ್ತಿರಾಜ್ ಸೇರಿದಂತೆ ಹಲವಾರು ಮಂದಿ ಅಭಿನಯಿಸಿದ್ದಾರೆ. ಮಂಗಳೂರಿನ ಸುತ್ತಮುತ್ತಲು ಚಿತ್ರೀಕರಣ ಮಾಡಿರುವ ದೇಶಾಭಿಮಾನದ ಈ ಕಿರುಚಿತ್ರದಲ್ಲಿ ದೇಶಾಭಿಮಾನಕ್ಕೆ ಸಂಬಂಧಿಸಿದಂತೆ ಸಮಾಜಕ್ಕೆ ಉತ್ತಮ ಸಂದೇಶವಿದ್ದು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pages