BUNTS NEWS, ಮಂಗಳೂರು: ಜ್ಞಾನ ಹಾಗೂ ಸಮೃದ್ಧಿಯ
ಸಂಕೇತನಾಗಿರುವ ಹಾಗೂ ನಮ್ಮೆಲ್ಲರ ಅಂತರಂಗದಲ್ಲಿ
ನೆಲೆಗೊಳ್ಳುವ ದೇವರಾಗಿರುವ ಶ್ರೀ ಗಣೇಶನ ಆರಾಧನೆಯಿಂದ
ಸಮಸ್ತ ಸಮಾಜಕ್ಕೆ ಒಳಿತಾಗುತ್ತದೆ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ
ಶ್ರೀಕುಮಾರ್ ಅವರು ಹೇಳಿದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ
ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ
ಬಂಟ್ಸ್ ಹಾಸ್ಟೆಲ್ನ ಓಂಕಾರನಗರದಲ್ಲಿ ನಡೆಯುತ್ತಿರುವ 13ನೇ
ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ
ಮೊದಲ ದಿನ ನಡೆದ ಧಾರ್ಮಿಕ
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು
ಮಾತನಾಡಿದರು.
ಮಂಗಳೂರಿನ
ಸಹಾಯಕ ಪೊಲೀಸ್ ಕಮಿಶನರ್
ಶಾಂತರಾಜು ಅವರು ಮಾತನಾಡಿ, ಪ್ರಸಿದ್ಧ
ದೇವಾಲಯಗಳ ನಾಡಾಗಿರುವ ದ.ಕ.ಜಿಲ್ಲೆ
ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಇಡೀ
ರಾಜ್ಯಕ್ಕೆ ಮೇಲ್ಪಂಕ್ತಿಯಾಗಿದೆ ಎಂದರು.
ಕೊಂಕಣಿ
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ
ಅವರು ಮಾತನಾಡಿ, ಶ್ರೀ ಗಣೇಶನು ತನ್ನ
ವೈಶಿಷ್ಟ್ಯಪೂರ್ಣ ರೂಪದಿಂದಾಗಿ ಹಿಂದುವೇತರ ಧರ್ಮದವರಿಗೂ ಬಹಳ ಆಪ್ತನಾಗಿದ್ದಾನೆ ಎಂದು
ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಶಶಿಧರ ಅಡಪ,
ಎಂ.ಪಿ.ನೊರೋನ್ಹ, ಗಂಗಾಧರ
ಹೊಸಬೆಟ್ಟು, ಸಾಹುಲ್ ಹಮೀದ್, ವಿಜಯಲಕ್ಷ್ಮಿ
ಶಿಬರೂರು, ನೇಹಾ ಶೆಟ್ಟಿ ಅವರನ್ನು
ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ
ಪತ್ರಕರ್ತೆ ಅವರು ಮಾತನಾಡಿ, ದ.ಕ.ಜಿಲ್ಲೆ ಸಾಮರಸ್ಯದ
ನೆಲೆವೀಡು ಆಗಲಿ ಎಂದು ಶುಭಹಾರೈಸಿದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ
ಶಾಂತಾರಾಮ ಶೆಟ್ಟಿ, ಕೋಶಾಧಿಕಾರಿ ಕೃಷ್ಣರಾಜ
ಸುಲಾಯ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ,
ಕೃಷ್ಣ ಪ್ರಸಾದ್ ರೈ, ಡಾ|ಆಶಾಜ್ಯೋತಿ ರೈ, ಬೆಳ್ಳಿಬೆಟ್ಟು
ಗುತ್ತು ಬಾಲಕೃಷ್ಣ ಶೆಟ್ಟಿ , ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬಂಟರ
ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು
ಸೋಮಶೇಖರ್ ಶೆಟ್ಟಿ, ಕೋಶಾಧಿಕಾರಿ ಸಿಎ
ಮನಮೋಹನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ
ಸಂಘದ ಅಧ್ಯಕ್ಷ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ
ಆಡಳಿತ ಟ್ರಸ್ಟಿ ಕೆ.ಅಜಿತ್
ಕುಮಾರ್ ರೈ ಮಾಲಾಡಿ ಅವರು
ಸ್ವಾಗತಿಸಿ, ಪ್ರಸ್ತಾವನೆಗೈದರು. ಪುರುಶೋತ್ತಮ
ಭಂಡಾರಿ ಅಡ್ಯಾರು ಅವರು ಕಾರ್ಯಕ್ರಮ
ನಿರ್ವಹಿಸಿದರು. ಸಮಿತಿಯ
ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರುಗುತ್ತು
ವಂದಿಸಿದರು.
ವರದಿ: ಜಗನ್ನಾಥ ಶೆಟ್ಟಿ ಬಾಳ
www.buntsnews.com