ನಿಷ್ಠೆ, ಕಾರ್ಯದಕ್ಷತೆಯ ಮೂಲಕ ಜನಮನ ಗೆದ್ದ ಪೊಲೀಸ್ ಇಲಾಖೆಯ ಪ್ರವೀಣ್ ರೈ - BUNTS NEWS WORLD

ನಿಷ್ಠೆ, ಕಾರ್ಯದಕ್ಷತೆಯ ಮೂಲಕ ಜನಮನ ಗೆದ್ದ ಪೊಲೀಸ್ ಇಲಾಖೆಯ ಪ್ರವೀಣ್ ರೈ

Share This
BUNTS NEWS, ಪುತ್ತೂರು: ಇಂದು ಅಧಿಕಾರ ಸಿಕ್ಕ ಕೂಡಲೇ ತಮ್ಮ ಕಾರ್ಯ ಮರೆತು ನಿರಂಕುಶರಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಗಳ ನಡುವೆ ಪೊಲೀಸ್ ಇಲಾಖೆಯ ಪ್ರವೀಣ್ ರೈ ಅವರು ತನ್ನ ನಿಷ್ಠಾವಂತ ದಕ್ಷ ಸೇವೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರವೀಣ್ ರೈ ಅವರು ಮೂಲತಃ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದವರು. ತಮ್ಮ ಪಿಯುಸಿ ವಿದ್ಯಾಭ್ಯಾಸದ ಮೂಲಕ 2008ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್’ಸ್ಟೇಬಲ್ ಹುದ್ದೆಗೆ ಸೇಪರ್ಡೆಗೊಂಡರು. ಪ್ರವೀಣ್ ರೈ ಅವರು ತಾವು ಸೇವೆಗೆ ಸೇರಿದ ಅವಧಿಯಿಂದ ಇಂದಿನವರೆಗೆಗೂ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ಪ್ರಜ್ಞೆ ಹಾಗೂ ನಿಷ್ಠೆಯಿಂದ ಕರ್ತವ್ಯ ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಪ್ರಶಂಸಸೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ತಮ್ಮ ದಕ್ಷ ಸೇವೆಯ ಮೂಲಕ ದ.ಕ ಜಿಲ್ಲಾ ಪೊಲೀಸ್ ಇಲಾಖೆಗೂ ಅಪಾರ ಗೌರವ ಹಾಗೂ ಶ್ಲಾಘನೆಯನ್ನು ತಂದು ಕೊಟ್ಟಿದ್ದಾರೆ.
ಕಳೆದ ಒಂದು ವರ್ಷದಿಂದ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವಾಹನ ಕಳವು, ಹಟ್ಟಿಯಲ್ಲಿದ್ದ ದನಗಳ ಕಳವು ಹಾಗೂ ಸಾಕು ಪ್ರಾಣಿಗಳಿಗೆ ವಿಷವುಣಿಸಿ ಮನೆಯಲ್ಲಿ ಶೇಖರಿಸಿದ್ದ ಅಡಿಕೆ ಕಳವು ಮತ್ತಿತರ ಹಲವು ಪ್ರಕರಣಗಳ ಪತ್ತೆಗೆ ಕಠಿಣ ಶ್ರಮವಹಿಸಿ ಪ್ರಮುಖ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪ್ರವೀಣ್ ರೈ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರವೀಣ್ ರೈ ಅವರ ದಕ್ಷತೆ ಹಾಗೂ ನಿಷ್ಠಾವಂತ ಸೇವೆಗಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಟಿ.ಮಡಿಯಾಲ್ ಅವರಿಂದ ಅಭಿನಂದನಾ ಪತ್ರ, ಮಾಜಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಶರಣಪ್ಪ ಎಸ್.ಡಿ ಐಪಿಎಸ್ ಅವರಿಂದ ಪ್ರಶಂಸನಾ ಪತ್ರ, ಮಾಜಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಅಭಿಷೇಕ್ ಗೋಯಲ್ ಅವರಿಂದ ಪ್ರಶಂಸನಾ ಪತ್ರ ಹಾಗೂ ಪ್ರಸ್ತುತ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿರುವ ಭೂಷಣ್ ಗುಲಾಬರಾವ್ ಬೊರಸೆ ಐಪಿಎಸ್ ಅವರಿಂದಲೂ ಪ್ರಶಂಸನಾ ಪತ್ರವನ್ನು ಪಡೆದಿದ್ದಾರೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.
ಪ್ರಸ್ತುತ ವಿಟ್ಲ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರವೀಣ್ ರೈ ಅವರು ತಮ್ಮ ರಜಾ ದಿನಗಳಲ್ಲಿ ಸಮಾಜ ಸೇವೆಯಂತಹ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಇಂತಹ ನಿಷ್ಟಾವಂತ ಪೊಲೀಸ್ ಸಿಬ್ಬಂದಿ ಪ್ರವೀಣ್ ರೈ ಅವರು ಮುಂದಿನ ದಿನಗಳಲ್ಲಿ ತಮ್ಮ ದಕ್ಷ ಸೇವೆಯ ಮೂಲಕ ಇಲಾಖೆಯ ಉನ್ನತ ಹುದ್ದೆಗೆ ಭಡ್ತಿ ಪಡೆಯಲಿ ಎಂದು ಬಂಟ್ಸ್ ನ್ಯೂಸ್.ಕಾಂ ಹಾರೈಸುತ್ತದೆ. © www.buntsnews.com
--------------------------------------------------------------------------------------------------------------------

Pages