ವಡೋದರದ ಇಂಡಿಯಾ
ಬುಲ್ಸ್ ಮೆಗಾ ಮಾಲ್‘ನಲ್ಲಿ ಪದ್ಮ ವಿಭೂಷಣ ಡಾ.ಡಿ. ವಿರೇಂದ್ರ ಹೆಗ್ಡೆ ಅವರ ಆರ್ಶಿವಾದದೊಂದಿಗೆ ತುಳು
ಚಾವಡಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕದ ಮೀನುಗಾರಿಕಾ ಹಾಗೂ
ಕ್ರೀಡಾಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ವಡೋದರದ ಮೇಯರ್ ಭಾರತ್ ಡನ್ಗೇರ್,
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ದಕ ಜಿಲ್ಲಾ ಬಿಜೆಪಿ ಯುವಮೋರ್ಚಾ
ಅಧ್ಯಕ್ಷ ಹರೀಶ್ ಪೂಂಜಾ, ಕರ್ನಾಟಕ ಮಲ್ಲ ಪತ್ರಿಕೆಯ ಹಿರಿಯ ಉಪಸಂಪಾದಕ ಶ್ರೀನಿವಾಸ್ ಜೋಕಟ್ಟೆ, ಉದಯವಾಣಿ
ಮುಂಬೈಯ ಹಿರಿಯ ಉಪಸಂಪಾದಕ ಡಾ.ದಿನೇಶ್ ಶೆಟ್ಟಿ ರೆಂಜಾಳ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ
ವಿಶ್ವನಾಥ ಶೆಟ್ಟಿ, ಮುಂಬೈ ಉದ್ಯಮಿ – ಸಮಾಜ ಸೇವಕ ಕೆ.ಡಿ ಶೆಟ್ಟಿ, ಸೂರತ್ ಉದ್ಯಮಿ – ಸಮಾಜ ಸೇವಕ
ರಾಧಾಕೃಷ್ಣ ಶೆಟ್ಟಿ, ವಡೋದರ ಪಾಲಿಕೆ ಕೊರ್ಪೊರೇಟರ್ ಮನೀಷ್ ಪಾಗರ್ ಹಾಗೂ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ
ಎಸ್.ಕೆ. ಹಳೆಯಂಗಡಿ ಅವರ ‘ಸುಖದ ಗುಟ್ಟು’ ಪುಸ್ತಕ ಬಿಡುಗಡೆಗೊಳ್ಳಲಿದೆ. ಕಿನ್ನಿಗೊಳಿಯ ವಿಜಯ ಕಲಾವಿದರಿಂದ
‘ಲೆಕ್ಕ ತತ್ತಿ ಬೊಕ್ಕ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.
© www.buntsnews.com
-----------------------------------------------------------------------------------------------------------------------