ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ
ದೇವಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ
ನಿಂದನಾತ್ಮಕ ಹಾಗೂ ಅವಹೇಳನಕಾರಿ ಬರಹಗಳನ್ನು
ಪ್ರಕಟಿಸಿ, ಅಶ್ಲೀಲವಾಗಿ ನಿಂದಿಸಿ ಕ್ಷೇತ್ರದ ಭಕ್ತರ
ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದ ಕಿಡಿಗೇಡಿಗಳ ಕೃತ್ಯವನ್ನು
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್
(ರಿ) ಮಂಗಳೂರು ಖಂಡಿಸಿದೆ.
ಸರ್ವ ಧರ್ಮಿಯರ ಆರಾಧ್ಯ ದೇವತೆಯಾದ
ಕಟೀಲಿನ ತಾಯಿಯ ಚಿತ್ರಗಳನ್ನು ಅಶ್ಲೀಲವಾಗಿ
ಚಿತ್ರಿಸಿ, ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದರಿಂದ ಆಸ್ತಿಕ ಬಂಧುಗಳ ಭಾವನೆಗಳನ್ನು
ಕೆರಳಿಸುವುದರೊಂದಿಗೆ ತೀವ್ರ ನೋವನ್ನುಂಟು ಮಾಡಿದೆ.
ಇಂತಹ ದುಷ್ಕøತ್ಯಗಳಿಂದ ಸಮಾಜದಲ್ಲಿ
ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ.ಇಂತಹ ಮನನೋಯಿಸುವ ಘಟನೆಗಳನ್ನು ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ ಈ ಘಟನೆಗೆ ಕಾರಣರಾದವರನ್ನು ಶೀಘ್ರವಾಗಿ ಬಂಧಿಸಿ ಮುಂದೆ ಇಂತಹ ಕುಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ತಿಳಿಸಿದ್ದಾರೆ. ಟ್ರಸ್ಟ್ನ ಕಛೇರಿಯಲ್ಲಿ ನಡೆದ ಖಂಡನಾ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಪದಾಧಿಕಾರಿಗಳಾದ ರಾಜೀವ ಪೂಜಾರಿ ಕೈಕಂಬ, ಸಿಎ ಸುದೇಶ್ ಕುಮಾರ್, ಕದ್ರಿ ನವನೀತ ಶೆಟ್ಟಿ, ಡಾ. ಮನು ಮೊದಲಾದವರು ಉಪಸ್ಥಿತರಿದ್ದರು.