BUNTS NEWS, ಮಂಗಳೂರು: ಬಂಟರ ಮಾತೃಸಂಘವು ತನ್ನ 13ನೇ ವರ್ಷದ ಗಣೇಶೋತ್ಸವದ
ಪೂರ್ವಭಾವಿಯಾಗಿ ಸೆ.3ರಂದು “ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಉದ್ಘಾಟಿಸಿದರು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಮಾಲಾಡಿ ಅಜಿತ್ ಕುಮಾರ್ ರೈ ವಹಿಸಿದ್ದರು. ನಿಕೇತ್ ರಾಜ್ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಬಂಟರ ಮಾತೃಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿ.ಎ ಶಾಂತಾರಾಮ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಕೆಂಚನೂರು
ಸೋಮನಾಥ ಶೆಟ್ಟಿ, ಶಾಸಕ ಮೊಯ್ದಿನ್ ಬಾವಾ, ಮಂಗಳೂರು ಕಮೀಷನರ್ ಚಂದ್ರಶೇಖರ್, ಕಾವು ಹೇಮನಾಥ ಶೆಟ್ಟಿ,
ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಜಯರಾಮ ಸಾಂತ, ಮನಮೋಹನ ಶೆಟ್ಟಿ, ನಿವೃತ್ತ ಬ್ರಿಗೇಡಿಯರ್ ಐಎನ್
ರೈ, ಕರ್ನಲ್ ನಿಟ್ಟೆಗುತ್ತು ಶರತ್ ಚಂದ್ರ ಶೆಟ್ಟಿ, ಲೆಫ್ಟಿನೆಂಟ್ ಕಮಾಂಡರ್ ಜಿ.ಪಿ ಮಸ್ಕರೇನಸ್, ಸಿಎ ಗಣಪತಿ, ಲಕ್ಷಣ ಹೆಚ್ ಮತ್ತಿತರ
ಗಣ್ಯರು ಇದ್ದರು.