ಅಕ್ಟೊಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಬಂಟ್ವಾಳದ ಸುಸಜ್ಜಿತ 'ಬಂಟರ ಭವನ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಕ್ಟೊಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಬಂಟ್ವಾಳದ ಸುಸಜ್ಜಿತ 'ಬಂಟರ ಭವನ'

Share This
BUNTS NEWS, ಬಂಟ್ವಾಳ: ತುಳುನಾಡಿನ ಪ್ರತಿಷ್ಠಿತ ಬಂಟ ಸಮಾಜದ ಹಿರಿಮೆಗೆ ಮತ್ತೊಂದು ಗರಿ. ಬಂಟವಾಳದ ಬಂಟರ ಸಂಘ ಸುಮಾರು ದಶಕಗಳ ಹಿಂದೆ 2003ನೇ ಇಸವಿಯಲ್ಲಿ ಹರೀಶ್ ಶೆಟ್ಟಿ ಬಂಟ್ವಾಳ ಇವರ ಸಾರಥ್ಯದಲ್ಲಿ ಯುವ ಬಂಟರ ಸಂಘ ಬಂಟ್ವಾಳ ಎಂದು ಕಾರ್ಯಗತಗೊಂಡು ನಂತರ 2005ರಲ್ಲಿ ಕಿರಣ್ ಹೆಗ್ಡೆ ಅನಂತಾಡಿ  ಸ್ಥಾಪಕಾಧ್ಯಕ್ಷರಾಗಿ, ನಡುಮೊಗರು ಗುತ್ತು ಶಿವರಾಮ ಶೆಟ್ರು ಗೌರವಾಧ್ಯಕ್ಷರಾಗಿ ಉದ್ಘಾಟನೆಗೊಂಡ ಬಂಟ್ವಾಳ ಬಂಟರ ಸಂಘವು ಇದೀಗ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದೀಗ ತಾಲೂಕಿನ ಬಂಟರ ಹಿರಿಮೆಯ ಭವ್ಯವಾದ ಬಂಟರ ಭವನವು ಅಕ್ಟೊಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲು ಸಜ್ಜಾಗಿರುವುದು ಬಂಟ ಸಮಾಜಕ್ಕೆ ನಿಜಕ್ಕೂ ಹೆಮ್ಮೆಯ ವಿಷಯ.

ಬಂಟರ ಭವನದ ವಿಶೇಷತೆಗಳು: ರಾಷ್ಟ್ರೀಯ ಹೆದ್ದಾರಿ ಬಿ ಸಿ ರೋಡಿನಿಂದ ಮಂಗಳೂರಿಗೆ ಹೋಗುವ ದಾರಿ ಮದ್ಯೆ ಬ್ರಹ್ಮರಕೊಟ್ಲು ಎಂಬಲ್ಲಿ 2.10 ಎಕರೆ ವಿಸ್ತೀರ್ಣದ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ 3 ಅಂತಸ್ತಿನ ಕಟ್ಟಡವು  ನಿರ್ಮಾಣದ ಹಂತದಲ್ಲಿದೆ. ವಿಶೇಷವೆಂದರೆ ಈ ಕಟ್ಟಡವು ಬಂಟರ ಹಿರಿಮೆಯ ಗುತ್ತು ಮನೆತನವನ್ನು ಹೋಲುತ್ತದೆ.
2011 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿ.ಬೋಳಂತೂರು ಗುತ್ತು ಗಂಗಾಧರ ರೈ ಯವರು 65 ಸೆಂಟ್ಸ್ ಜಾಗವನ್ನು ಸಂಘಕ್ಕೆ ದಾನವಾಗಿ ಕೊಟ್ಟರು ಅವರ ಹೆಸರನ್ನೇ ಸಂಕೀರ್ಣಕ್ಕೆ ಬೋಳಂತೂರು ಗುತ್ತು ಗಂಗಾಧರ ರೈ ಸಂಕೀರ್ಣ ಎಂದು ಹೆಸರಿಡಲಾಗಿದೆ. ಪ್ರಸ್ತುತ  ಲೋಕಾರ್ಪಣೆಗೊಳ್ಳುತ್ತಿರುವ ಸುಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನಗ್ರಿಗುತ್ತು ವಿವೇಕ್ ಶೆಟ್ಟಿಯವರು ಅಧ್ಯಕ್ಷರಾಗಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಕಾರ್ಯದರ್ಶಿಯಾಗಿ ಚಂದ್ರಹಾಸ್ ರೈ ಬಲಾಜಿಬೈಲ್ ಸಂಘಟನಾ ಕಾರ್ಯದರ್ಶಿ ಯಾಗಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು ಜೊತೆ ಕಾರ್ಯದರ್ಶಿ ಯಾಗಿ ಜಗದೀಶ್ ಶೆಟ್ಟಿ ಇರಾಗುತ್ತು ಕೋಶಾಧಿಕಾರಿಯಾಗಿ ಈಗಲೇ ಕಾರ್ಯೋನ್ಮುಕರಾಗಿದ್ದಾರೆ.

ಪ್ರಸ್ತುತ ಸಂಘವು 140 ಜನ ನಿರ್ದೇಶಕರನ್ನು ಹೊಂದಿದ್ದು ಈ ಕಟ್ಟಡದ ಖರ್ಚುವೆಚ್ಚ ಸರಿ ಸುಮಾರು 17 ಕೋಟಿ ರೂ. ಎಂದು ಅಂದಾಜಿಸಲಗಿದೆ. ಏಕಕಾಲದಲ್ಲಿ ಸುಮಾರು 500 ಕಾರ್ ಪಾರ್ಕಿಂಗ್ ವುಳ್ಳ ಸುಸ್ಸಜ್ಜಿತವಾದ ಕಟ್ಟಡವು 4 ಹವಾನಿಯಂತ್ರಿತ ಹಾಲ್ ಹಾಗೂ ಹೊರಾಂಗಣ ವೇದಿಕೆ ಯನ್ನು ಹೋಂದಿದೆ. ಮುಂದಿನ ಅಕ್ಟೊಬರ್ ತಿಂಗಳಲ್ಲಿ ಲೋಕಾರ್ಪಣೆಯಾಗಳಿರುವ ಬಂಟ್ವಾಳ ಬಂಟರ ಭವನವು ಬಂಟರ ಹಿರಿಮೆಗೆ ಪಾತ್ರರಾಗಲಿ. ಮಾಹಿತಿ ಕೃಪೆ: ಸೂರ್ಯಕಾಂತ್ ಶೆಟ್ಟಿ ಬೆಲ್ಲೂರ್ ಕಟ್ಟೆಮಾರ್

Pages