BUNTS NEWS, ಸುರತ್ಕಲ್: ಮಾನವೀಯ ಮೌಲ್ಯವನ್ನು ಸಾಮಾಜಿಕ
ಸೇವಾ ಸಂಸ್ಥೆಗಳು ತಮ್ಮ ಸಂಸ್ಥೆಯ ಕಾರ್ಯಸೂಚಿಯಲ್ಲಿ
ಅಳವಡಿಸಿ ಕೊಳ್ಳಬೇಕು ಎಂದು
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್
ಶೆಟ್ಟಿ ಬಾಳ ನುಡಿದರು.
ಅವರು ಸುರತ್ಕಲ್ ಜೇಸಿಐ ಸಪ್ತಾಹದ ಸಮಾರೋಪ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೇಸಿಸ್ ಸಪ್ತಾಹದಂತಹ
ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಕುರಿತು
ಚಟುವಟಿಕೆಗಳು ನಡೆಯುತ್ತಿರುವುದು, ಅರ್ಹರಿಗೆ ಸಹಾಯ ಲಭಿಸುತ್ತಿರುವುದು ಸಮಾಜದ
ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದರ ಹಿಂದಿರುವ ಲಾಭವನ್ನು
ಪಡೆದು ಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು
ಮತ್ತು ಆ ಮೂಲಕ ನಾವು
ಬೆಳೆದು ಇತರರನ್ನು ಬೆಳೆಸಲು ಮುಂದಾಗಬೇಕು. ಜೇಸಿಸ್
ಚಟುವಟಿಕೆಗಳು ಸೀಮಿತವಾಗಿರದೆ ಕಲೆ, ಭಾಷೆ, ವಿವಿಧ
ರೀತಿಯ ಪ್ರತಿಭೆಗಳು, ಸಮಾಜ ಸೇವೆ ಸ್ವ
ಉದ್ಯೋಗ ಮುಂತಾದ ಹಲವು ರಂಗಗಳಲ್ಲಿ ನಡೆಯುತ್ತಿವೆ.
ಇದು ಶ್ರೀಮಂತರ ಸಂಘಟನೆ ಎಂಬ ಮಾತು
ಕೇಳಿ ಬರುತ್ತಿದ್ದರೂ, ಅದಕ್ಕಿಂತಲೂ ಮುಖ್ಯವಾಗಿ ಇದು ಶ್ರೀಮಂತ ಹೃದಯ ಇರುವವರ ಸಂಘಟನೆ
ಎಂದು ಹೇಳುವುದು ಸೂಕ್ತ ಎಂದರು.
ಸುರತ್ಕಲ್
ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ
ಶೆಟ್ಟಿ ಮಾತನಾಡಿ, ಸರಕಾರಿ ಯೋಜನೆಗಳು ಸಮರ್ಪಕವಾಗಿ
ಸಾರ್ವಜನಿಕರಿಗೆ ತಲುಪುವಲ್ಲಿ ಸೇವಾ ಸಂಸ್ಥೆಗಳು ತನ್ನ
ವಿಶಿಷ್ಠ ಕೊಡುಗೆಯನ್ನು
ನೀಡಬೇಕು ಎಂದರು. ಜೇಸಿಐ ವಲಯ
15ರ ವಲಯಾಧಿಕಾರಿ ಪೀಟರ್ ಪಿಂಟೋ ಮಾತನಾಡಿ
ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಹಾಗೂ ಸಾಮಾಜಿಕ
ಹೊಣೆಗಾರಿಕೆ ಹೆಚ್ಚಿಸುವಲ್ಲಿ ಜೇಸಿಸ್ ಸಂಸ್ಥೆ ತನ್ನದೇ ಅದ
ವಿಶಿಷ್ಟ ಕೊಡುಗೆ ನೀಡುತ್ತದೆ ಎಂದರು.
ಸುರತ್ಕಲ್
ಜೇಸಿಐ ಅಧ್ಯಕ್ಷ ವಿನೀತ್ ಶೆಟ್ಟಿ,
ಅಧ್ಯಕ್ಷತೆ ವಹಿಸಿದ್ದರು. ಜೇಸಿ
ಸಪ್ತಾಹದ ಅಧ್ಯಕ್ಷೆ ಚೇತನಾ ದತ್ತಾತ್ರೇಯ, ಪೂರ್ವಾಧ್ಯಕ್ಷ
ಎಂ.ಜಿ. ರಾಮಚಂದ್ರ ರಾವ್,
ಗುಣವತಿ ರಮೇಶ್, ಜಯೇಶ್ ಗೋವಿಂದ್,
ದತ್ತಾತ್ರೇಯ, ಸೀತಾರಾಮ ರೈ, ಪುಷ್ಪರಾಜ್
ಶೆಟ್ಟಿ, ಶ್ರೀಧರ ಶೆಟ್ಟಿ, ಯೋಗೀಶ್
ನಾಯಕ್, ನಿರಂಜನ್ ಕೆ. ಜಯರಾಮ
ಶೆಟ್ಟಿ, ಕಾರ್ಯದರ್ಶಿ ಸುಜೀರ್ ಶೆಟ್ಟಿ, ಉಪಾಧ್ಯಕ್ಷ
ಪ್ರವೀಣ್ ಶೆಟ್ಟಿ, ಅಶೋಕ್
ರೈ, ನಿರಂಜನ್, ಶಶಿ ಕುಮಾರ್, ಮೀನುಗಾರಿಕಾ
ಇಲಾಖೆಯ ಯೋಗೀಶ್ ಪಡುಪದವು, ಜೇಸಿರೆಟ್
ಅಧ್ಯಕ್ಷೆ ಪ್ರೀತಿ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ: ಕೃಷಿ ಕ್ಷೇತ್ರದಲ್ಲಿ ದಿವಾಕರ್
ಶೆಟ್ಟಿ ಕುಲ್ಲಾಂಗಲ್ರವರನ್ನು ಸಮ್ಮಾನಿಸಲಾಯಿತು. ಯೋಗೀಶ್
ನಾಯಕ್ರವರಿಗೆ ಜೇಸಿ ಕಮಲಪತ್ರ
ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತರಾದ ದP್ಷÁ ಅಶೋಕ್
ರೈ, ಸಿಂಧೂರಾ ಎ.ಜಿ.
ರಾಮಚಂದ್ರ ರಾವ್, ಬಿಂದ್ಯಾ ಲೀಲಾಧರ
ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
© www.buntsnews.com
------------------------------------------------------------------------------------------------
------------------------------------------------------------------------------------------------