BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಚುನಾವಣೆಯು ಅಕ್ಟೋಬರ್ 15ರ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ
5ವರೆಗೆ ಬಂಟ್ಸ್ ಹಾಸ್ಟೆಲ್’ನ ಶ್ರೀ ರಾಮಕೃಷ್ಣ ಶಾಲೆಯಲ್ಲಿ
ನಡೆಯಲಿದೆ ಎಂಬುದಾಗಿ ಸಂಘದ ಪ್ರಕಟಣೆ ತಿಳಿಸಿದೆ.
ಸೆ.26ರಿಂದ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ನಾಮಪತ್ರ ಲಭ್ಯತೆ: ಅಧ್ಯಕ್ಷ, ಕೇಂದ್ರ ಕಾರ್ಯಕಾರಿ
ಸಮಿತಿ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅರ್ಜಿಯನ್ನು ಚುನಾವಣಾ ಆಯೋಗ ಕಚೇರಿಯಿಂದ
ಸೆ.26ರಂದು ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಪಡೆಯಬಹುದು.
ಅಕ್ಟೋಬರ್ 1 ರಿಂದ 3 ವರೆಗೆ ಅರ್ಜಿ ಯನ್ನು ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡದ 3ನೇ ಮಹಡಿ ಚುನಾವಣಾ ಆಯೋಗ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.ಅಕ್ಟೋಬರ್ 4ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಪ್ರಕಟಣೆಯು ಚುನಾವಣಾ ಆಯೋಗ ಕಚೇರಿಯಲ್ಲಿ ನಡೆಯಲಿದೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಅಕ್ಟೋಬರ್ 5ರ ಸಂಜೆ 4ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅದೇ ದಿನ ಸಂಜೆ 5.15ಕ್ಕೆ ಚುನಾವಣಾ ಆಯೋಗದ ಕಛೇರಿ ನೋಟಿಸು ಬೋರ್ಡಿನಲ್ಲಿ ಅಂತಿಮ ಕಣದಲ್ಲಿರುವ ಅಧ್ಯಕ್ಷರ ಪಟ್ಟಿ ಪ್ರಕಟಗೊಳ್ಳಲಿದೆ. ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಅಭ್ಯರ್ಥಿಗಳ ನಾಮಪತ್ರವನ್ನು ಅಕ್ಟೋಬರ್ 11 ರಂದು ಸಂಜೆ 4 ಗಂಟೆ ಒಳಗೆ ಹಿಂಪಡೆಯಬಹುದು. ಅಂದೇ ಅಂತಿಮ ಕಣದಲ್ಲಿ ಇರುವ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರ ಅಭ್ಯರ್ಥಿಗಳ ಪಟ್ಟಿಯನ್ನು ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲಾಗುವುದು.
ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಚುನಾವಣೆಯು ಅಕ್ಟೋಬರ್ 15 ರಂದು ಶನಿವಾರ ಬೆಳಗ್ಗೆ 9ರಿಂದ ಸಂಜೆ 5 ರ ವರೆಗೆ ಶ್ರೀ ರಾಮಕೃಷ್ಣ ಶಾಲೆ ಬಂಟ್ಸ್ ಹಾಸ್ಟೆಲ್ನಲ್ಲಿ ಅಧ್ಯಕ್ಷ ಚುನಾವಣೆ ನಡೆಯಲಿದ್ದು ಅಂದೇ ಸಂಜೆ 5 ರ ನಂತರ ಮತ ಎಣಿಕೆ, ಆಯ್ಕೆಯ ಘೋಷಣೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
------------------------------------------------------------------------------------------------