BUNTS
NEWES, ಮಂಗಳೂರು: ಬಹುಭಾಷಾ ನಟಿ ‘ಮೊಹೆಂಜೊದಾರೊ’ ಸಿನಿಮಾ ಖ್ಯಾತಿಯ ನಟಿ ಪೂಜಾ
ಹೆಗ್ಡೆ ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಂಟ್ಸ್ ಹಾಸ್ಟೆಲ್ ಸಿದ್ದಿವಿನಾಯಕ ಪ್ರತಿಷ್ಠಾನದ ಮೂಲಕ ಓಂಕಾರ ನಗರದಲ್ಲಿ
ನಡೆಯುವ 13ನೇ ವರ್ಷದ ಗಣೇಶೋತ್ಸವದ ಸೆ.6ರ ಕಾರ್ಯಕ್ರಮದಲ್ಲಿ ನಟಿ ಪೂಜಾ ಹೆಗ್ಡೆ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ತೆರೆ ಕಂಡಿದ್ದ ಮೊಹೆಂಜೊದಾರೊ ಸಿನಿಮಾದಲ್ಲಿ ನಟ ಹೃತಿಕ್ ರೋಷನ್
ಜೊತೆಗೆ ಅಭಿನಯಿಸಿರುವ ಪೂಜಾ ಹೆಗ್ಡೆ ತಮ್ಮ ಅಪೂರ್ವ ನಟನೆ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಈ ಹಿಂದೆ ಪೂಜಾ ಹೆಗ್ಡೆ ಅವರು ತೆಲುಗಿನ ಒಕಲೈಲಾ ಕೊಸಮ್, ಮುಕಂದ್ ಹಾಗೂ ತಮಿಳಿನ ಮುಗಮುಡಿ ಸಿನಿಮಾದಲ್ಲೂ
ನಟಿಸಿದ್ದರು.