ಸೆ.5ರಿಂದ 7ರ ವರೆಗೆ ಬಂಟ್ಸ್ ಹಾಸ್ಟೆಲ್‍ನ ಸಾರ್ವಜನಿಕ ಶ್ರೀ ಗಣೇಶೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸೆ.5ರಿಂದ 7ರ ವರೆಗೆ ಬಂಟ್ಸ್ ಹಾಸ್ಟೆಲ್‍ನ ಸಾರ್ವಜನಿಕ ಶ್ರೀ ಗಣೇಶೋತ್ಸವ

Share This
BUNTS NEWS, ಮಂಗಳೂರು: ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಸೆ.5ರಿಂದ 7 ವರೆಗೆ ಸಾರ್ವಜನಿಕ ಶ್ರೀಗಣೇಶೋತ್ಸವ  ಸಮಾರಂಭ ಜರಗಲಿದೆ.
ಬಂಟರ ಯಾನೆ ನಾಡವರ ಸಂಘ ಹಾಗೂ ಅದರ ಮಂಗಳೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಮಂಗಳೂರು, ಉಡುಪಿ, ., ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ, ಇತರ ಸಂಘ-ಸಂಸ್ಥೆಗಳ, ಎಲ್ಲಾ ಜಾತಿ ಮತ ಬಾಂಧವರ, ಸಹಕಾರ, ಸಹಬಾಗಿತ್ವದಿಂದ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗವನ್ನು ಶ್ರದ್ಧಾಭಕ್ತಿಯೊಂದಿಗೆ ಕಳೆದ 12 ವರುಷಗಳಿಂದ ಆಚರಿಸಿಕೊಂಡು ಬಂದಿರುವುದರ ಜೊತೆಗೆ, ಎಲ್ಲಾ ಜಾತಿ ಮತ ಬಾಂದವರೊಂದಿಗೆ ಸಾಮರಸ್ಯದ ಸಹಜೀವನವನ್ನು ನಡೆಸುವ, ಬಾಂಧವ್ಯವನ್ನು ಬೆಸೆಯುವ ಚಿಂತನೆಗಳನ್ನು ಹಂಚಿಕೊಳ್ಳುತ್ತಾ ಧಾರ್ಮಿಕ, ಸಾಮಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಶ್ರೀ ಗಣೇಶೋತ್ಸವದ ಅಂಗವಾಗಿ ಆಚರಿಸಿಕೊಂಡು ಬಂದಿರುತ್ತೇವೆ.

ಸೆಫ್ಟಂಬರ್ 3 ರಂದು ಶ್ರೀ ಗಣೇಶೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ ಕಾರ್ಯಕ್ರಮ ಸಂಜೆ 4 ಗಂಟೆಗೆ  ಓಂಕಾರ ನಗರದಲ್ಲಿ ನಡೆಯಲಿದೆಹದಿಮೂರನೆಯ ವರುಷದ ಶ್ರೀ ಗಣೇಶೋತ್ಸವನ್ನು ಸೆಫ್ಟಂಬರ್5ರಿಂದ 7ರವರೆಗೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಸೆಫ್ಟಂಬರ್ 3ನೇ ಶನಿವಾರದಂದು ಸಂಜೆ 4 ಗಂಟೆಗೆ "ನಮ್ಮ ರಾಷ್ಟ್ರರಕ್ಷಕರ ಜೊತೆಗೆ ಒಂದು ಸುಂದರ ಸಂಜೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಜೀವನವನ್ನೇ ಪಣವಾಗಿಟ್ಟು ಸೇನೆಯಲ್ಲಿ ವೀರ ಯೋಧರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸೇನೆಯಿಂದ ನಿವೃತ್ತರಾದ ಅವರ ಸಾಂಗತ್ಯದಲ್ಲಿ ನಾವು, ನಮ್ಮ ತರುಣರು ಸೇರಿ ಒಂದು ಸಂಜೆ ಜೊತೆ ಜೊತೆಯಾಗಿ ಕಲೆಯಬೇಕೆನ್ನುವುದು ನಮ್ಮ ಆಶಯವಾಗಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವತಂತ್ರರಾಗಿ, ಭಯಮುಕ್ತರಾಗಿ ಬಾಳಲು ನಮ್ಮ ರಕ್ಷಣಾಪಡೆಗಳ ವೀರ ಯೋಧರ ಅಚಲ ದೇಶ ಪ್ರೇಮ, ಧೈರ್ಯ, ಸ್ಥೈರ್ಯತ್ಯಾಗ, ಬಲಿದಾನಗಳೇ ಕಾರಣವೆಂದು ಹೇಳಲು ಹೆಮ್ಮೆ ಪಡುತ್ತೇವೆ. ತಮ್ಮ ಚಿಕ್ಕ ಪ್ರಾಯದಲ್ಲಿ ಸೇನೆ ಸೇರಿ ಜೀವನದ ಅಮೂಲ್ಯ ವರುಷಗಳನ್ನು ಸೇನೆಯಲ್ಲಿಯೇ ಸವೆಸಿ, ತಮ್ಮ ಸರ್ವಸ್ವವನ್ನೂ ದೇಶ ಸೇವೆಗೆ ಮುಡಿಪಾಗಿಟ್ಟ ನಮ್ಮ ಯೋಧರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇವೆ.

ದಿನಾಂಕ 04-09-2016 ನೇ ರವಿವಾರ ಸಂಜೆ 5-00 ಘಂಟೆಗೆ ಶ್ರೀಶರವು ದೇವಸ್ಥಾನದ ಬಳಿಯಿರುವ ಶ್ರೀ ರಾಧಾಕೃಷ್ಣ ದೇವಾಸ್ಥಾನದಲ್ಲಿ ಪ್ರಾರ್ಥಿಸಿ ಶ್ರೀ ರಾಮದಾಸ ಆಚಾರ್ ರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿ ವಿನಾಯಕ ವಿಗ್ರಹವನ್ನು ಭವ್ಯ ಮೆರವಣಿಗೆಯೊಂದಿಗೆ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಬರಮಾಡಿಕೊಳ್ಳಲಾಗುವುದು.

ದಿನಾಂಕ 05-09-2016ರಂದು 9-15 ಕ್ಕೆ ದ್ವಜಾರೋಹಣದೊಂದಿಗೆ ಶ್ರೀ ಗಣೇಶೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ತೆನೆ ವಿತರಣೆ, ಶ್ರೀ ಸಿದ್ಧಿವಿನಾಯಕ ಮೂರ್ತಿ ಪ್ರತಿಷ್ಠೆ, ಗಣ ಹೋಮ, ಭಜನಾ ಸೇವೆಯೊಂದಿಗೆ ಮಧ್ಯಾಹ್ನ 12-00 ಘಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ. ಅಪರಾಹ್ನ 12-30 ರಿಂದ ಸುಗಮ ಸಂಗೀತ, 3-00 ಘಂಟೆಗೆ ತಾಳಮದ್ದಲೆ. ಸಂಜೆ 5-00 ರಿಂದ 7-00 ಧಾರ್ಮಿಕ ಸಭೆಯು ಜರಗಲಿದ್ದು. 7-30 ರಿಂದ ರಂಗಪೂಜೆ, ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ " ಶ್ರೀ ಕೃಷ್ಣ ಪಾರಿಜಾತ" ನಡೆಯಲಿರುವುದು.

ದಿನಾಂಕ 06-09-2016 ಮಂಗಳವಾರ ಬೆಳಿಗ್ಗೆ 9-00 ಪ್ರಾತಃಕಾಲ ಪೂಜೆಯ ನಂತರ ಭಕ್ತಿಗಾನಸುಧೆ. 10-00 ಘಂಟೆಗೆ ಭಜನಾ ಸೇವೆ, 11-00 ಮೂಡಪ್ಪ ಸೇವೆ, 12-00 ಮಹಾ ಪೂಜೆ, ಪ್ರಸಾದ ವಿತರಣೆ ನಂತರ ಸಂಗೀತ ಗಾನ ಸಂಗಮ ಕಾರ್ಯಕ್ರಮ. ಸಂಜೆ 4-30 ಕ್ಕೆ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ. ಸಂಜೆ 5-00 ರಿಂದ 7-00 ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ7-30 ಕ್ಕೆ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, 8-00 ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು.

ದಿನಾಂಕ 07-09-2016 ಬುಧವಾರ ಬೆಳಿಗ್ಗೆ 8-00 ಪ್ರಾತಃಕಾಲ ಪೂಜೆ, 8-30ಕ್ಕೆ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭ, ನಂತರ ಭಜನಾ ಸೇವೆಯೊಂದಿಗೆ 11-00 ಘಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಮಹಾ ಅನ್ನ ಸಂತರ್ಪಣೆ. ಅಪರಾಹ್ನ 3-30 ಕ್ಕೆ ವಿಸರ್ಜನಾ ಪೂಜೆ, ಭಜನಾ ಕಾರ್ಯಕ್ರಮ ಉದ್ಘಾಟನೆ, ದೀಪ ಪ್ರಜ್ವಲನೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ. ಶೋಭಾಯಾತ್ರೆಯು ಓಂಕಾರ ನಗರದಿಂದ ಬಂಟ್ಸ್ ಹಾಸ್ಟಲ್ ವೃತ್ತ, ಪಿವಿಎಸ್, ಡೊಂಗರಕೇರಿ, ನ್ಯೂಚಿತ್ರಟಾಕೀಸ್, ರಥಬೀದಿಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನವಾಗಿ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.

1. ಶ್ರೀ ಮಾಲಾಡಿ ಅಜಿತ್ ಕುಮಾರ್ ರೈ, ಮೇನೇಜಿಂಗ್ ಟ್ರಸ್ಟಿ
2. ಶ್ರೀ ಮಂಜುನಾಥ ಭಂಡಾರಿ ಶೆಡ್ಡೆ.
3. ಶ್ರೀ ರವಿರಾಜ ಶೆಟ್ಟಿ. ನಿಟ್ಟೆಗುತ್ತು.
4. ಶ್ರೀ ಕೃಷ್ಣಪ್ರಸಾದ ರೈ.ಬೆಳ್ಳಿಪ್ಪಾಡಿ.
5. ಶ್ರೀ ಕೆ.ಬಾಲಕೃಷ್ಣ ಶೆಟ್ಟಿ. ಬೆಳ್ಳಿಬೆಟ್ಟುಗುತ್ತು.
6. ಡಾ. ಆಶಾಜ್ಯೋತಿ ರೈ.
7. ಸಿ . ಶಾಂತಾರಾಮ ಶೆಟ್ಟಿ. ಶ್ರೀ ದಿವಾಕರ ಸಾಮಾ£ ಚೇಳ್ಯಾರುಗುತ್ತು.
8. ಶ್ರೀ ಕೃಷ್ಣರಾಜ ಸುಲಾಯ, ಅಡ್ಯಾರುಗುತ್ತು,
9. ಶ್ರೀ ಬಿ.ಶೇಖರ ಶೆಟ್ಟಿ.
10. ಶ್ರೀ ಶಶಿರಾಜ ಶೆಟ್ಟಿ ಕೊಳಂಬೆ,
11. ಶ್ರೀಮತಿ ಪ್ರತಿಮಾ ಆರ್ ಶೆಟ್ಟಿ
12. ಶ್ರೀಮತಿ ಮೀನಾ ಆರ್ ಶೆಟ್ಟಿ.
13. ಶ್ರೀ ಮನೀಷ್ ರೈ.
14. ಶ್ರೀ ಜಗದೀಶ್ ಶೆಟ್ಟಿ,
15. ಶ್ರೀ ಅಶ್ವತ್ಥಾಮ ಹೆಗ್ಡೆ ಅಲ್ತಾರ್,
16. ಶ್ರೀ ಜಯರಾಮ ಸಾಂತ,
17. ಶ್ರೀ ಕೆ. ಉಮೇಶ ರೈ ಪದವು ಮೇಗಿನ ಮನೆ,
18. ಉಲ್ಲಾಸ್ ಶೆಟ್ಟಿ ಪೆರ್ಮುದೆ
19.ಸುಂದರ್ ಶೆಟ್ಟಿ


ವರದಿ: ಜಗನ್ನಾಥ ಶೆಟ್ಟಿ ಬಾಳ

Pages