ಬಂಟ ಕ್ರೀಡೋತ್ಸವ: ಪುತ್ತೂರು, ಎಕ್ಕಾರು ತಂಡಗಳಿಗೆ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ ಕ್ರೀಡೋತ್ಸವ: ಪುತ್ತೂರು, ಎಕ್ಕಾರು ತಂಡಗಳಿಗೆ ಪ್ರಶಸ್ತಿ

Share This
BUNTS NEWS, ಮಂಗಳೂರು: ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ಹಾಸ್ಟೆಲ್ನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೆಲ್ನಲ್ಲಿ ಶ್ರೀರಾಮಕೃಷ್ಣ ಮೈದಾನದಲ್ಲಿ ನಡೆದ ಬಂಟ ಕ್ರೀಡೋತ್ಸವದ ಹಗ್ಗ ಜಗ್ಗಾಟ ಪಂದ್ಯಾಟದ ಪುರುಷರ ವಿಭಾಗದಲ್ಲಿ ಪುತ್ತೂರು ಬಂಟ್ಸ್ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆಯಿತುಮಹಿಳೆಯರ ವಿಭಾಗದಲ್ಲಿ ಎಕ್ಕಾರು ಬಂಟರ ಸಂಘ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗಳಿಸಿತು.
ಪುರುಷರ ವಿಭಾಗದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮಂಜೇಶ್ವರ ಬಂಟರ ಸಂಘ ದ್ವಿತೀಯ ಸ್ಥಾನಿಯಾದರೆ, ಮಹಿಳೆಯರ ವಿಭಾಗದಲ್ಲಿ ಜಪ್ಪು ಬಂಟರ ಸಂಘ ದ್ವಿತೀಯ ಸ್ಥಾನಿಯಾಗಿ ಪ್ರಶಸ್ತಿ ಪಡೆದುಕೊಂಡಿತು.

ಪ್ರಶಸ್ತಿ ವಿತರಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಿಜೇತರನ್ನು ಅಭಿನಂದಿಸಿದರು ಸಂದರ್ಭದಲ್ಲಿ ಪಂದ್ಯಾಟದ ತೀರ್ಪುಗಾರರನ್ನು ಗೌರವಿಸಲಾಯಿತುಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ|ಆಶಾಜ್ಯೋತಿ ರೈ, ಎಂ.ಸುಂದರ ಶೆಟ್ಟಿ, ಕರುಣಾಕರ ಶೆಟ್ಟಿ, ಜಯರಾಮ ಸಾಂತ, ಉಮೇಶ್ ರೈ, ಮಾತೃ ಸಂಘದ ಪದಾಧಿಕಾರಿಗಳು ಹಾಗೂ ಬಂಟರ ವಿವಿಧ ವಲಯದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಅವರು ಸ್ವಾಗತಿಸಿದರುಸುಕೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರುಕ್ರೀಡಾ ಸಮಿತಿಯ ಸಂಚಾಲಕ ಕಿರಣ್ ಪಕ್ಕಳ ವಂದಿಸಿದರು.


ವರದಿ: ಜಗನ್ನಾಥ ಶೆಟ್ಟಿ ಬಾಳ

Pages