ಪ್ರಾಮಾಣಿಕತೆ ಮೆರೆದ ಆಟೋ ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಅವರಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರಾಮಾಣಿಕತೆ ಮೆರೆದ ಆಟೋ ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಅವರಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ

Share This
BUNTS NEWS, ಮಂಗಳೂರು: ತನ್ನ ರಿಕ್ಷಾದಲ್ಲಿ ಪ್ರಯಾಣಿಕರೋರ್ವರು ಬಿಟ್ಟು ಹೋದ 5 ಲಕ್ಷ ಮೌಲ್ಯದ ಚಿನ್ನಾಭರಣದ ಬ್ಯಾಗನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದ ಪ್ರತಾಪ್ ಶೆಟ್ಟಿ ಅವರನ್ನು ಬಂಟರ ಮಾತೃ ಸಂಘ ಸನ್ಮಾನಿಸಿ ಗೌರವಿಸಿದೆ.
ಬಂಟರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಅವರು ಪ್ರತಾಪ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಪ್ರತಿಭಾನ್ವಷಣೆ  ಸಮಿತಿಯ ಸಂಚಾಲಕಿ ಡಾ. ಆಶಾಜ್ಯೋತಿ ರೈ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ  ದಿವಾಕರ ಸಾಮಾನಿ ಚೇಳಾೈರ್ ಗುತ್ತು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಪ್ರತಾಪ್ ಶೆಟ್ಟಿ ಅವರ ಆಟೋದಲ್ಲಿ ಬೆಂಗಳೂರು ಮೂಲದ ಪ್ರಯಾಣಿಕರೋರ್ವರು ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ನಗರದ ಕೆಎಸ್ಆರ್ಟಿಸಿಯಿಂದ ಕುಳಾಯಿವರೆಗೆ ಪ್ರಯಾಣಿಸಿದ್ದರು. ಕುಳಾಯಿಯಲ್ಲಿ ರಿಕ್ಷಾದಿಂದ ಇಳಿಯುವ ಸಂದರ್ಭ ತಮ್ಮ ಜತೆಗಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಮರೆತು ರಿಕ್ಷಾದಲ್ಲಿ ಬಿಟ್ಟಿದ್ದರು ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಪ್ರತಾಪ್ ಶೆಟ್ಟಿ ಅವರಿಗೆ ರಿಕ್ಷಾದಲ್ಲಿ ಚಿನ್ನಾಭರಣದ ಬ್ಯಾಗ್ ಇರುವುದು ಅರಿವಿಗೆ ಬಂದಿದ್ದು ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಬ್ಯಾಗ್ ನೀಡಿದ್ದಾರೆ. ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಅವರ ಪ್ರಾಮಾಣಿಕತೆಗೆ ಮೆಚ್ಚಿದ ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ ಅವರು 5 ಸಾವಿರ ರೂ ಬಹುಮಾನ ನೀಡಿ ಗೌರವಿಸಿದ್ದಾರೆ.

ಜಪ್ಪು ಕುಡುಪಾಡಿಯ ಪ್ರತಾಪ್ ಶೆಟ್ಟಿ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಾಪ್ ಅವರು ಬಳ್ಳಾಲ್ ಫ್ರೆಂಡ್ಸ್ ಹಾಗೂ ಗುರ್ಜಿ ದಿಪೋತ್ಸವ ಸಮಿತಿಯ ಸದಸ್ಯರು ಆಗಿದ್ದಾರೆ. 

Pages