BUNTS NEWS, ಸುಳ್ಯ: ಸುಬ್ರಹ್ಮಣ್ಯದ ಹರಿಹರ ಪಾಲಾತಾಡ್ಕ ನಿವಾಸಿ ಕೃಷ್ಣ ರೈ ಅವರು
ಕಳೆದ 21 ವರ್ಷದಿಂದ ಹಾಸಿಗೆ ಹಿಡಿದಿದ್ದು ಸಮಸ್ತ
ಬಂಟ ಬಾಂಧವರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಉಡುಪಿ ಮೂಲದ ದುಬೈಯಲ್ಲಿ ಉದ್ಯೋಗದಲ್ಲಿರುವ
ಹರೀಶ್ ಶೆಟ್ಟಿ ಅವರು ತಮ್ಮಿಂದಾಗುವ ಧನಸಹಾಯ ಮಾಡಿದ್ದಾರೆ.
ಕಳೆದ 21 ವರ್ಷಗಳಿಂದ ಹಾಸಿಗೆಯಲ್ಲಿರುವ ಕೃಷ್ಣ ರೈ ಅವರಿಗೆ ಬಂಟರು ನೆರವಿನ ಸಹಾಯಹಸ್ತ
ನೀಡುವಂತೆ ಬಂಟ್ಸ್ ನ್ಯೂಸ್.ಕಾಂ ಸುದ್ದಿ ಮಾಡಿತ್ತು. ಈ ಹಿನ್ನೆಲ್ಲೆಯಲ್ಲಿ ಕೃಷ್ಣ ರೈ ಅವರಿಗೆ ಹರೀಶ್
ಶೆಟ್ಟಿ ದುಬೈ ಅವರು ತಮ್ಮಿಂದಾಗುವ ಸಹಾಯ ಮಾಡಿದ್ದಾರೆ. ಕೃಷ್ಣ ರೈ ಅವರ ಕಷ್ಟಕ್ಕೆ ಸ್ಪಂದಿಸಿದ ಪ್ರತಿಯೊಬ್ಬರ
ಮಾಹಿತಿಯನ್ನು ಬಂಟ್ಸ್ ನ್ಯೂಸ್ ನೀಡಲಿದೆ. ಈ ಮೂಲಕ ಮತ್ತಷ್ಟು ಬಂಟ ಬಾಂಧವರು ಕೃಷ್ಣ ರೈ ಅವರಿಗೆ ಸಹಾಯ
ಮಾಡಲು ಪ್ರೇರಣೆಯಾಗಲಿ ಎಂಬ ಆಶಯ ನಮ್ಮದು.
ಕೃಷ್ಣ ರೈ ಅವರು ತಮ್ಮ 21ನೇ ವಯಸ್ಸಿನಲ್ಲಿರುವಾಗ ಅಂದರೆ
1995ರಲ್ಲಿ ವಿದ್ಯುತ್ ಕಂಬದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ಸಂದರ್ಭ ಅವರ ದೇಹವು ಸ್ವಾದೀನ
ಕಳೆದು ಕೊಂಡಿದ್ದು ಅಂದಿನಿಂದ ಹಾಸಿಗೆಯಲ್ಲೇ ದಿನದೂಡುತ್ತಿದ್ದಾರೆ. ಹಾಸಿಗೆಯಲ್ಲೇ ಇರುವ ಕೃಷ್ಣ ರೈ
ಅವರನ್ನು ಅವರ ತಾಯಿ ಆರೈಕೆ ಮಾಡುತ್ತ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಕೃಷ್ಣ ರೈ ಅವರ
ತಾಯಿ ನಿಧನರಾಗಿದ್ದು ಇದೀಗ ಕೃಷ್ಣ ರೈ ಆರೈಕೆಯನ್ನು ಅವರ ಅಕ್ಕ ನೋಡಿಕೊಳ್ಳುತ್ತಿದ್ದಾರೆ.
ಕೃಷ್ಣ ರೈ ಅವರ ಅಕ್ಕ ಕಡು ಬಡತನದಲ್ಲಿದ್ದು ಜೀವನ ಸಾಗಿಸಲು
ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಈ ಬಡತನದ ನಡುವೆಯೂ ಹಾಸಿಗೆಯಲ್ಲಿರುವ ಕೃಷ್ಣ ರೈ ಅವರನ್ನು ನೋಡುವ
ಜವಾಬ್ದಾರಿ ಅವರ ಮೇಲಿದ್ದು ಕಷ್ಟದಿಂದ ಜೀವನ ನಿರ್ವಹಿಸುತ್ತಿದ್ದಾರೆ.
ಆತ್ಮೀಯ ಬಂಟ ಬಾಂಧವರೇ ಕಳೆದ 21 ವರ್ಷದಿಂದ ಹಾಸಿಗೆಯಲ್ಲಿರುವ
ಕೃಷ್ಣ ರೈ ಅವರ ಕುಟುಂಬಕ್ಕೆ ಸಮಾಸ್ತ ಬಂಟ ಬಾಂಧವರ ನೆರವಿನ ಹಸ್ತ ಬೇಕಾಗಿದೆ. ನಮ್ಮ ಸಮಾಜದಲ್ಲಿ ಅನೇಕ
ಪ್ರತಿಷ್ಠಿತ ಉದ್ಯಮಿಗಳಿದ್ದು ತಮ್ಮಿಂದಾಗುವ ಕಿರು ಸಹಾಯವನ್ನು ಕೃಷ್ಣ ರೈ ಅವರಿಗೆ ಮಾಡುವ ಮೂಲಕ ಅವರ
ಬದುಕಿನಲ್ಲಿ ಇನ್ನಾದರೂ ಬೆಳಕಿನ ಆಶಾಕಿರಣ ಮೂಡಿಸಬಹುದು. ಅಲ್ಲದೇ ಪ್ರತಿಯೊಬ್ಬ ಬಂಟರು ತಮ್ಮ ಮನಸೋಇಚ್ಛೆ
ಕಿರು ಸಹಾಯವನ್ನು ಕೃಷ್ಣ ರೈ ಅವರಿಗೆ ಮಾಡಬಹುದು.
ಕೃಷ್ಣ ರೈ ಅವರಿಗೆ ಸಹಾಯ ಮಾಡಬಯಸುವ ಬಂಟ ಬಾಂಧವರು ಸಂಪರ್ಕಿಸ ಬೇಕಾದ ಮೊಬೈಲ್ ಸಂಖ್ಯೆ:
9483446223
ಕೃಷ್ಣ ರೈ ಅವರ ಬ್ಯಾಂಕ್ ಖಾತೆ ವಿವರ
ಹೆಸರು: ಕೃಷ್ಣ ರೈ
ಬ್ಯಾಂಕು: ವಿಜಯ ಬ್ಯಾಂಕ್
ಖಾತೆ ಸಂಖ್ಯೆ: 131101010002384 ಕೊಲ್ಲಮೊಗ್ರು ಬ್ರಾಂಚ್
[ ಕೃಷ್ಣ ರೈ ಅವರಿಗೆ ಸಹಾಯ ಮಾಡಿದ ಬಂಟ ಬಾಂಧವರು ದಯವಿಟ್ಟು ನಿಮ್ಮ ವಿವರವನ್ನು
ಬಂಟ್ಸ್ ನ್ಯೂಸಿನೊಂದಿಗೆ ಹಂಚಿಕೊಳ್ಳಿ, ಇದರಿಂದ ಮತ್ತಷ್ಟು ಬಂಟ ಬಾಂಧವರಿಗೆ ಸಹಾಯ ಮಾಡಲು ಪ್ರೇರಣೆಯಾಗುತ್ತದೆ
- +919743112517 ]