ಆಳ್ವಾಸ್’ನಲ್ಲಿ 24 ಸಾವಿರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಭ್ರಮ: ಡಾ.ಬಿ.ಆರ್. ಶೆಟ್ಟಿ ಗೌರವ ಉಪಸ್ಥಿತಿ - BUNTS NEWS WORLD

ಆಳ್ವಾಸ್’ನಲ್ಲಿ 24 ಸಾವಿರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಭ್ರಮ: ಡಾ.ಬಿ.ಆರ್. ಶೆಟ್ಟಿ ಗೌರವ ಉಪಸ್ಥಿತಿ

Share This
BUNTS NEWS, ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಅಗಸ್ಟ್ 15ರಂದು 24 ಸಾವಿರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಬೃಹತ್ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆಯಲಿದೆ.
ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪ, ಪುತ್ತಿಗೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಮಂಗಳೂರು ಧರ್ಮಾಧ್ಯಕ್ಷರಾದ ಪರಮಪೂಜ್ಯ ಅಲೋಶೀಯಸ್ ಪೌಲ್ ಡಿಸೋಜಾ ಹಾಗೂ ಅಬುದಾಬಿ ಯುಎಇ ಎಕ್ಷ್’ಚೆಂಜ್ ಸಿಇಒ, ಎನ್.ಎಂ.ಸಿ ಆಗಿರುವ ಡಾ.ಬಿ.ಆರ್.ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿ ಸಾಧಕರಿಗೆ ಗೌರವ ಸನ್ಮಾನವು ನಡೆಯಲಿದೆ.

Pages