ಡಾ.ಹರ್ಷಕುಮಾರ ರೈ ನಿರ್ಮಾಣದ “ಭಾರತ್ ಮಾತಾ ಕೀ ಜೈ” ಅಗಸ್ಟ್ 15ಕ್ಕೆ ನವದೆಹಲಿಯಲ್ಲಿ ಬಿಡುಗಡೆ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಡಾ.ಹರ್ಷಕುಮಾರ ರೈ ನಿರ್ಮಾಣದ “ಭಾರತ್ ಮಾತಾ ಕೀ ಜೈ” ಅಗಸ್ಟ್ 15ಕ್ಕೆ ನವದೆಹಲಿಯಲ್ಲಿ ಬಿಡುಗಡೆ

Share This
BUNTS NEWS, ಪುತ್ತೂರು: ಜನ್ಮ ಕ್ರಿಯೇಷನ್ಸ್ ಮೂಲಕ ಡಾ.ಹರ್ಷಕುಮಾರ ರೈ ಮಾಡಾವು ನಿರ್ಮಾಣದ ದೇಶಭಕ್ತಿ ಆಧಾರಿತ ಹಿಂದಿ ಕಿರುಚಿತ್ರ “ಭಾರತ್ ಮಾತಾ ಕೀ ಜೈ” ಅಗಸ್ಟ್ 15ರ ಸ್ವಾತಂತ್ರ್ಯ ದಿನದಂದು ನವದೆಹಲಿಯಲ್ಲಿ ಬಿಡುಗಡೆಗೊಳ್ಳಲಿದೆ.
ಪ್ರಮಿತ್’ರಾಜ್ ಕಟ್ಟತ್ತಾರ್ ಇವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇರುವ ಈ ಕಿರುಚಿತ್ರವನ್ನು ಮುಸ್ಸಂಜೆ ಮಾತು ಖ್ಯಾತಿಯ ನವೀನ್ ನೇರಳ್ತೋಡಿ ನಿರ್ದೇಶನ ಮಾಡಿದ್ದು, ಪುತ್ತೂರಿನ ಅರುಣ್ ರೈ ಛಾಯಾಗ್ರಾಹಣವಿದೆ ಮತ್ತು ಸಂಕಲನದ ಜವಾಬ್ದಾರಿಯನ್ನು ಶಿವಂ ಕ್ರಿಯೇಷನ್ಸ್ ಕುಂಬ್ಲೆ ವಹಿಸಿರುತ್ತಾರೆ.

ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ ಹುಟ್ಟಿ ಬೆಳೆದು ಬಂದ ನಮಗೆ ಭಾರತಮಾತೆಗೆ ಎಲ್ಲಿಯಾದರೂ ಹಾನಿವುಂಟಾದಾಗ ನಮ್ಮಲ್ಲಿರುವ ಶಾಂತಿ, ಸಹನೆ ಹಾಗೂ ಪ್ರೀತಿ ಎಲ್ಲವೂ ಕ್ರಾಂತಿ ರೂಪ ತಳೆದು ಹೋರಾಟದ ಹಾದಿ ಹಿಡಿಯಲು ಹಿಂಜರಿಯುವುದಿಲ್ಲ ಎನ್ನುವುದೇ ಈ ಕಿರುಚಿತ್ರದ ಸಾರಾಂಶ.

ಚಿತ್ರದಲ್ಲಿ ಮಾ.ಆಯುಷ್, ಕು.ಕಾರ್ತಿಕಾ ರೈ ಪ್ರದಾನ ಪಾತ್ರದಲ್ಲಿ ನಟಿಸಿರುವ ಈ ಕಿರುಚಿತ್ರದಲ್ಲಿ ಕಲಾವಿದರಾದ ನರೇಶ್ ಕುಲಾಲ್, ಶೋಭಿತ್ ಶೆಟ್ಟಿ, ಬಾಲಕೃಷ್ಣ, ಕೀರ್ತಿರಾಜ್ ಸೇರಿದಂತೆ ಹಲವಾರು ಮಂದಿ ಅಭಿನಯಿಸಿದ್ದಾರೆ. ಮಂಗಳೂರಿನ ಸುತ್ತಮುತ್ತಲು ಚಿತ್ರೀಕರಣ ಮಾಡಿರುವ ದೇಶಾಭಿಮಾನದ ಈ ಕಿರುಚಿತ್ರ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pages