BUNTSNEWS: ದೇವರ ನಾಡೆಂದೇ ಪ್ರಖ್ಯಾತಿ ಪಡೆದಿರುವ ತುಳುನಾಡು
ಹಲವು ಆಚಾರ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ತವರೂರಾಗಿದೆ. ಇಂತಹ ಹಲವು ಸಂಪ್ರದಾಯವಿರುವ ತುಳುನಾಡಿನಲ್ಲಿ
ಆಷಾಡ ಮಾಸದ ಸಂದರ್ಭದಲ್ಲಿ ಆಟಿ ಕಳಂಜನು ಮನೆ ಮನೆಗೆ ಬರುವುದು ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ.
ಆಟಿ ಕಳಂಜನೆಂದರೆ ಯಾರು...? ತುಳುನಾಡಿನಲ್ಲಿ ಆಷಾಡ ಮಾಸವನ್ನು ತುಳು ಭಾಷೆಯಲ್ಲಿ 'ಆಟಿ' ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ತುಳುನಾಡಿನ ಜನಪದ ಪ್ರಕಾರಗಳಲ್ಲಿ ಒಂದಾಗಿರುವ
'ಆಟಿ ಕಳೆಂಜ' ವೇಷಧಾರಿಯು ತುಳುನಾಡಿನ ಮನೆ ಮನೆಗೆ ಭೇಟಿ ಕೊಟ್ಟು ನೃತ್ಯ ಮಾಡುತ್ತಾನೆ. ಈ ಮೂಲಕ ಊರಿನ
ಮಾರಿಯನ್ನು (ಸಂಕಷ್ಟ) ಹೊಡೆದೊಡಿಸುತ್ತಾನೆ ಎಂಬ ನಂಬಿಕೆಯು ತುಳುನಾಡಿನಲ್ಲಿದೆ. ಈ ನೃತ್ಯವು ಆಷಾಡಮಾಸದಲ್ಲಿ
ನಡೆಸುವುದರಿಂದ ನೃತ್ಯಗಾರನಿಗೆ 'ಆಟಿ ಕಳಂಜ' ಎಂದು ಕರೆಯುತ್ತಾರೆ.'ಕಳೆಂಜ' ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ದೂರ ಮಾಡುವ ಮಾಂತ್ರಿಕ ಎಂಬ ಅರ್ಥವಿದೆ. ಆಟಿ ಕಳಂಜ ವೇಷವನ್ನು ನಲಿಕೆ, ಪಾಣಾರ ಇನ್ನಿತರ ಜನಾಂಗದವರು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಈ ಸಂದರ್ಭ ಆಟಿ ಕಳಂಜ ವೇಷಧಾರಿಯು ಕೈಯಲ್ಲಿ ತಾಳೆಗರಿಯ ಕೊಡೆ ಹಿಡಿದಿರುತ್ತಾನೆ. ಆತನ ನೃತ್ಯಕ್ಕೆ ಪೂರಕವಾದ ಪಾಡ್ದನವವನ್ನು 'ತೆಂಬರೆ'ಯೆಂಬ ವಾದ್ಯದ ಸಹಾಯದಿಂದ ವ್ಯಕ್ತಿಯೋರ್ವನು ಹಾಡುತಿರುತ್ತಾನೆ. ಆಟಿ ಕಳೆಂಜನ ತನ್ನ ಸೊಂಟದ ಸುತ್ತಲೂ ತೆಂಗಿನ ಗರಿ, ಕಾಲಿಗೆ ಗಗ್ಗರ, ದೇಹ, ಮುಖಕ್ಕೆ ಬಣ್ಣ, ಹೂವಿನಿಂದ ಸಿಂಗರಿಸಿದ ಅಡಿಕೆ ಹಾಳೆ ಟೊಪ್ಪಿ ಧರಿಸಿತ್ತಾನೆ.
ಕಳಂಜ ಹುಟ್ಟಿದ್ದು ಹೇಗೆ...? ಕಳಂಜನು ಶಿವನ ಬಲ ಕಾಲಿನ ಉಂಗುಷ್ಟದಲ್ಲಿ ಜನಿಸಿದನೆಂದು
ಹೇಳಾಲಗುತ್ತದೆ. ಕಳಂಜನನ್ನು ಶಿವನು ಆಷಾಡ ಮಾಸದಲ್ಲಿ ಊರಿಗೆ ಬುರುವ ಮಾರಿಯನ್ನು ಓಡಿಸಲು ಭೂಮಿಗೆ
ಕಳುಹಿಸಿದನೆಂದು ಹೇಳಾಗುತ್ತಿದೆ. ಇನ್ನೊಂದು ಕತೆಯಲ್ಲಿ ಗಂಧ ಬೂಳ್ಯ ಹಾಕುವ ಸಮಯದಲ್ಲಿ ಕಳಂಜಿಕಾಯಿ
ಗಾತ್ರದ ಕಸವೊಂದು ಗಂಧದಲ್ಲಿ ಕಂಡ ನಾಗಬ್ರಹ್ಮರು ಬಿಸಾಡಿದಾಗ ಕಳಂಜ ಜನ್ಮಕ್ಕೆ ತಾಳುತ್ತಾನೆ ಎನ್ನಲಾಗಿದೆ.
ಹಾಗಾಗಿ ಕಳಂಜನನ್ನು ನಾಗಬ್ರಹ್ಮರ ಮಾನಸ ಪುತ್ರನೆಂದು ಹೇಳಾಗುತ್ತಿದೆ.
ತುಳುನಾಡಿನಲ್ಲಿ
ಆಟಿ ತಿಂಗಳು ಎಂಬುದು ಬರಗಾಲದ ತಿಂಗಳೆಂಬ ನಂಬಿಕೆಯಿದೆ. ಈ ತಿಂಗಳಲ್ಲಿ ಎಡೆಬಿಡದೆ ಮಳೆ ಸುರಿಯುವುದರಿಂದ
ಜನರು ಸಂಕಷ್ಟ ಎದುರಿಸುತ್ತಾರೆ. ಅಲ್ಲದೇ ಯಾವುದೇ ರೀತಿಯ ಕೃಷಿ ಸಂಬಂಧಿತ ಕೆಲಸ ಮಾಡಲಾಗದೇ ಕಷ್ಟ ಪಡುತ್ತಾರೆ. ಈ ತಿಂಗಳಿನಲ್ಲಿ ಊರಿಗೆ ಮಾರಿ ಅತಿಕ್ರಮಿಸುವ ನಂಬಿಕೆಯಿದ್ದು
ಮಾರಿಯನ್ನು ಓಡಿಸುವ ದೃಷ್ಠಿಯಿಂದ ಆಟಿ ಕಳಂಜನ್ನು ಕುಣಿಸುತ್ತಾರೆ. ಅಲ್ಲದೇ ತುಳುನಾಡಿನಲ್ಲಿ ಆಷಾಡ
ಮಾಸದಲ್ಲಿ ಹೊಸದಾಗಿ ಮದವೆಯಾಗಿರುವ ಸೊಸೆ ಅತ್ತೆ ಮನೆಯಲ್ಲಿರುವುದಿಲ್ಲ. ಆಷಾಡ ಮಾಸದಲ್ಲಿ ಹೊಸದಾಗಿ
ಮದುವೆಯಾಗಿರುವ ಸೊಸೆಯರು ಅತ್ತೆಯನ್ನು ನೋಡಬಾರದೆಂಬ ನಂಬಿಕೆಯಿದ್ದು ಸೊಸೆಯನ್ನು ಅವಳ ತವರಿಗೆ ಕಳುಹಿಸಲಾಗುತ್ತದೆ.