ಸುರತ್ಕಲ್ ಬಂಟರ ಸಂಘದಲ್ಲಿ `ಆಟಿದ ಪೊರ್ಲು' ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುರತ್ಕಲ್ ಬಂಟರ ಸಂಘದಲ್ಲಿ `ಆಟಿದ ಪೊರ್ಲು' ಸಂಭ್ರಮ

Share This
BUNTSNEWS,ಸುರತ್ಕಲ್: ತುಳು ಭಾಷೆಯೊಂದಿಗೆ ತುಳುವ  ಸಂಸ್ಕøತಿ, ಸಂಸ್ಕಾರ ಬೆಸೆದುಕೊಂಡಿದೆ  ನಾವು ಉನ್ನತ ಸ್ಥಾನಕ್ಕೆ ಏರಿದಂತೆ ಸಂಸ್ಕಾರವಂತರಾಗಿ ಸಮಾಜದ ಸರ್ವರನ್ನು ಉನ್ನತಿ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಬಂಟರ  ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರ ಮಹಿಳಾ ವಿಭಾಗದ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ನುಡಿದರು.
ಸುರತ್ಕಲ್ ಬಂಟರಭವನದಲ್ಲಿ ಆಯೋಜಿಸಿದ್ದ ಬಂಟರ ಸಂಘ(ರಿ)ಮತ್ತು ಮಹಿಳಾ ವೇದಿಕೆ  ಇವರ ಸಂಯುಕ್ತಾಶ್ರಯದಲ್ಲಿ ನಡೆದ ಆಟಿದ ಪೊರ್ಲು  ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯು ಸಂಸ್ಕಾರಯುತವಾಗಿ ಬೆಳವಣಿಗೆ ಹೊಂದಲು ಸುಸಂಸ್ಕøತ ವ್ಯಕ್ತಿತ್ವವೇ ತಳಹದಿ.  ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು, ಸಮಯದ ಸದ್ವಿವಿನಿಯೋಗದೊಂದಿಗೆ ಸಮಾಜದ ಏಳಿಗೆಯಲ್ಲಿ ಬಂಟ ಸಮುದಾಯದವರು ಬದ್ದರಾಗಬೇಕು, ಆಟಿ ತಿಂಗಳ ಪ್ರತಿಯೊಂದು ಆಚರಣೆಯು  ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಂಡಿದ್ದು ಅದರ ಹಿಂದಿನ ಕಾರ್ಯಕಾರಣಗಳನ್ನು ಅರಿತುಕೊಳ್ಳಬೇಕು  ಎಂದರು.
ಬಂಟರ ಸಂಘದ ನಿವೇಶನ ನಿಧಿಗೆ ಚಾಲನೆ ನೀಡಿ ಮಾತನಾಡಿದ ಮುಂಬೈಯ ಉದ್ಯಮಿ  ಕುಶಲ ಭಂಡಾರಿ ಐಕಳ ಬಾವ  ಮಾತನಾಡಿ ಭೂ ಒಡೆತನದ ಕಾರ್ಯ ಶ್ರೇಷ್ಠಕರವಾಗಿದೆ. ಸಾಮಾಜಿಕ ಸಂಘಟನೆಗಳ ಶಕ್ತಿಯುತ ಸಾಂಘಿಕ ಪ್ರಯತ್ನಗಳಿಂದ ಸಮುದಾಯದ ಅಭ್ಯುದಯ ಸಾಧ್ಯವಾಗುತ್ತದೆ ಎಂದರು.


ಕಾಪುವಿನ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪರಂಪರೆಯ ಕೂಡುಕುಟುಂಬದ ಸೊಗಸುಗಾರಿಕೆಯ ಸಮಾಜ ಪದ್ದತಿ ವಿಶ್ವಮಾನ್ಯವಾಗಿದ್ದು ನಮ್ಮಲ್ಲಿ ಇಂದು ಕಣ್ಮರೆಯಾಗುತ್ತಿರುವುದು ವಿಷಾದನೀಯ, ಸತಿಪತಿ ಮಕ್ಕಳ ಸೀಮಿತ ಚೌಕಟ್ಟಿನಲ್ಲಿ ಬದುಕಬಯಸುವ ಅಧುನಿಕ ಮನೋಭಾವ ಬದಲಾಗಬೇಕಾಗಿದ್ದು ಅವಿಭಕ್ತ ಕುಟುಂಬ ಪದ್ದತಿ ಮುಂದುವರಿಯುವ ಅವಶ್ಯಕತೆ ಇದೆ ಎಂದರು.
ಅರ್ಥಿಕ ನೆರವು ಕೋರಿಕೆ: ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಮಾತನಾಡಿ ಸುರತ್ಕಲ್ ಬಂಟರ ಭವನದ ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಯೋಜನೆ ರೂಪಿಸಿದ್ದು ಈ ಯೋಜನೆಗೆ ನಿವೇಶನದ ಅತ್ಯಗತ್ಯವಿದ್ದು ಈ ನಿವೇಶನ ಖರೀದಿಗೆ  ಉದಾರ ಚರಿತರಾದ ಸಮುದಾಯದ ಬಂದುಗಳಿಂದ ಅರ್ಥಿಕ ನೆರವನ್ನು ಕೋರಿದರು.
ಸಹಕಾರಿ ಕ್ಷೇತ್ರದ ಕೆ ದಾಮೋದರ ಶೆಟ್ಟಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಿ ಸಾದುಪೂಜಾರಿ, ಕೃಷಿ ಬಾಲಕೃಷ್ಣ ಶೆಟ್ಟಿ ಕುತ್ತೆತ್ತೂರು,ಕಲೆ ಪದ್ಮನಾಭ  ಶಾರದಾ ಅರ್ಟ್, ಶಿಕ್ಷಣ ಮೀರಾ ಸತೀಶ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಖಾದ್ಯಗಳನ್ನು ಮಹಿಳಾ ಸದಸ್ಯರು ತಯಾರಿಸಿದ್ದು ತುಳುನಾಡಿವ ತಾಜಾ ಊಟವನ್ನು ಬಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಲಯನ್ಸ್  ಸಂಸ್ಥೆಯ ಕಿಶೋರ್ ಡಿ ಶೆಟ್ಟಿ, ಡಿಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ದೇವಾನಂದ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಬಿ. ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಸುಧಾಕರ ಪೂಂಜಾ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ,   ಜೊತೆ ಕಾರ್ಯದರ್ಶಿ ಜಯರಾಮ ಶೆಟ್ಟಿ, ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಜಯ ಭಾರತಿ ಶೆಟ್ಟಿ  ಉಪಸ್ಥಿತರಿದ್ದರು. ಕಾರ್ಯದರ್ಶಿ ಸೀತಾರಾಮ ರೈ ವಂದಿಸಿದರು, ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Pages