ಬೆಂಗಳೂರು ಬಂಟರ ಸಂಘದ ಚುನಾವಣೆ : ಟೀಂ ಚಂದ್ರಹಾಸ ರೈ ಬಳಗಕ್ಕೆ ಗೆಲುವು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ ಚುನಾವಣೆ : ಟೀಂ ಚಂದ್ರಹಾಸ ರೈ ಬಳಗಕ್ಕೆ ಗೆಲುವು

Share This
BUNTSNEWS,ಬೆಂಗಳೂರು: ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಚಂದ್ರಹಾಸ ರೈ ಡಿ ಅವರ ಬಳಗವು ಜಯಶಾಲಿಯಾಗಿದ್ದು ಚಂದ್ರಹಾಸ ರೈ ಅವರು ಬಂಟರ ಸಂಘದ ಮುಂದಿನ ಅಧ್ಯಕ್ಷರಾಗಿದ್ದಾರೆ.
ಚಂದ್ರಹಾಸ ರೈ : ಸದಾ ಮಂದಹಾಸದ ಸರಳ ಜೀವನದ, ಸಜ್ಜನ ವ್ಯಕ್ತಿತ್ವದವರು.ಜನರಿಗಾಗಿ ಸದಾ ಸ್ವಂದಿಸುವವರು, ಎಲ್ಲಕ್ಕಿಂತ ಹೆಚ್ಚಾಗಿ ಜನಪರ ಕಾರ್ಯಗಳಿಗೆ ತೊಡಗುವ ಉತ್ಸಾಹವಿದೆ ಮಾತ್ರವಲ್ಲ ಜನರಿಗಾಗಿ ಧಾರಾಳ ಸಮಯ ನೀಡುತ್ತಾರೆವರ್ತಮಾನದ ವಾಸ್ತವ ಅಗತ್ಯ ಅದೇ - ಕೈ ತುಂಬ ಹಣ ಕೊಡುವರಿಗಿಂತ , ಸಮಯ ಕೊಡುವವರು ನೂರುಪಾಲು ಉತ್ತಮರು.
ಜಪ್ತಿ ಸಂತೋಷ ಶೆಟ್ಟಿ :  ನೇರ ನಿಷ್ಠುರವಾದಿ , ಅನ್ಯಾಯಗಳನ್ನು ಯಾವ ಮುಲಾಜಿಲ್ಲದೆ ಖಂಡಿಸುವವರು . ಬಂಟ್ಸ್ ಸಂಘಕ್ಕೆ ಅಗತ್ಯವಾಗಿ ಇವರ ಸೇವೆ ಅವಶ್ಯವಿದೆವ್ಯವಸ್ಥೆಯೊಂದು ಸುವ್ಯವಸ್ಥಿತವಾಗಿ ನಡೆಯುವಲ್ಲಿ, ಅವ್ಯವಹಾರಗಳಿಗೆ ಎಚ್ಚರಿಕೆಯ ಕರೆಗಂಟೆಯಂತೆ ಇವರ ಅಮೂಲ್ಯ ಸೇವೆ ಅವಶ್ಯಕವಿದೆ .ಹಲವಷ್ಟು ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಯೋಗ್ಯವಾಗಿ ಅಲಂಕರಿಸಿ, ಸಂಘಟಿಸಿದ ಸಂಘಟನಾಶೀಲರು . ಸಂಘಟನಾ ಶಕ್ತಿ ,ಜೊತೆಯಲ್ಲಿರುವವರನ್ನು ಹುರಿದುಂಬಿಸುವ ಪ್ರೇರಪಣೆ ಹುಟ್ಟಿನಿಂದಲೇ ಬಂದ ವರ. ಇವರನ್ನು ನೀವು ಆರಿಸುವುದರಿಂದ ಬಂಟ್ಸ್ ಸಂಘಕ್ಕೆ ಒಂದು ಕಾಂತ್ರಿಕಾರಿ ಹೆಜ್ಜೆಯಾಗುವುದು.
ಬಾಲಚಂದ್ರ ಶೆಟ್ಟಿ : ಇವರು ಎಲ್ಲರನ್ನು ಆತ್ಮೀಯತೆಯಿಂದ ಕಾಣುವ, ಯಕ್ಷಗಾನವನ್ನು ಪ್ರೀತಿಸುವ ಬಹಳ ಸೌಮ್ಯ ಸ್ವಭಾವದ ನಿಗರ್ವಿ. ಕಷ್ಟಗಳನ್ನು ಕಂಡು ಬೆಳೆದು ಬಂದವರು ಹಾಗಾಗಿ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಇದೆ.
ಆನಂದರಾಮ ಶೆಟ್ಟಿ: ಎಲ್ಲರನ್ನು ಬಹಳ ಪ್ರೀತಿಯಿಂದ ಮಾತಾಡಿಸುವ ಸದಾ ಚಟುವಟಿಕೆಯಲ್ಲಿರುವವರು. ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿತ್ವದವರು. ಸಮಾಜಕ್ಕೆ ಕೈಲಾದ ಕೊಡುಗೆ ನೀಡುವ ತುಡಿತ ಹೊಂದಿರುವವರು. ಯಾವುದೇ ಕಾರ್ಯವಿರಲಿ ಅದನ್ನು ಎಲ್ಲಿ, ಹೇಗೆ ಮಾಡಿಸಿಕೊಂಡು ಬರಬೇಕು ಎನ್ನುವುದನ್ನು ತಿಳಿದಿರುವ, ತಿಳಿದು ವ್ಯವಹರಿಸುವ ಮಿತ ಭಾಷಿ - ಚುರುಕು ಕಾಯಕದವರು.
ಕಾಂತಿ ಶೆಟ್ಟಿ : ಬಹುಮುಖಿಯಾಗಿ ಕ್ರಿಯಾಶೀಲತೆ ಮೈಗೂಡಿಸಿಕೊಂಡವರು. ಸಾಂಸ್ಕೃತಿಕ, ರಾಜಕೀಯವ್ಯವಹಾರಿಕ ಇವೆಲ್ಲ ಕ್ಷೇತ್ರಗಳನ್ನು ತನನ್ನು ತೊಡಗಿಸಿಕೊಂಡು ಹಲವಷ್ಟು ಆಶೊತ್ತರಗಳನ್ನು ಹೊಂದಿರುವ ದಿಟ್ಟ ಮಹಿಳೆ. ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಸ್ಪಂದಿಸುವ, ಕಾರ್ಯಕ್ರಮ ಆಯೋಜನೆಗಲ್ಲೂ ಸೈ ಎನಿಸಿಕೊಂಡಿರುವ ವಿರಳ ವ್ಯಕ್ತಿತ್ವದವರು.

ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಗೆಲುವು ಪಡೆದು ಬಂಟರ ಸಂಘದ ಮುಂದಿನ ಅಧ್ಯಕ್ಷರಾಗಿರುವ ಚಂದ್ರಹಾಸ ರೈ ಡಿ ಹಾಗೂ ಅವರ ಬಳಗಕ್ಕೆ ಬಂಟ್ಸ್ ನ್ಯೂಸ್.ಕಾಂ ಅಭಿನಂದಿಸುತ್ತದೆ. ಚಂದ್ರಹಾಸ ರೈ ಡಿ ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಬಂಟರ ಸಂಘವು ಅನೇಕ ಮಹತ್ವದ ಕಾರ್ಯಗಳನ್ನು ಮಾಡುವ ಮೂಲಕ ಮತಷ್ಟು ಬಂಟ ಸಮಾಜದ ಅಭಿವೃದ್ಧಿ ಮಾಡಲೀ ಎಂದು ಹಾರೈಸುತ್ತಿದೆ. www.buntsnews.com 
[ಪ್ರೀಯ ಬಂಟ ಬಾಂದವರೇ, ಟೀ ಚಂದ್ರಹಾಸ ರೈ ಅವರಿಗೆ ಹಾಗೂ ಅವರ ಬಳಗಕ್ಕೆ ಶುಭಕೋರುವ ಜಾಹೀರಾತನ್ನು ಬಂಟ್ಸ್ ನ್ಯೂಸ್.ಕಾಂ'ಗೆ ನೀಡಬಹುದು. ಪ್ರಕಟಿಸಲಾಗುವುದು. ಸಂಪರ್ಕಿಸಿ - 9743112517]

Pages