ಬೆಂಗಳೂರು: ಅತ್ಮೀಯರೇ, ನಿಮಗೆಲ್ಲ ತಿಳಿದಿರುವಂತೆ ಬಂಟರ ಸಂಘದ ಚುನಾವಣೆ ಸನ್ನಿಹಿತವಾಗಿದೆ. ಇಲ್ಲಿ ಎಲ್ಲರೂ ನಮ್ಮ ಜಾತಿ ಬಾಂಧವರೇ ಆದರೆ ಅದರಲ್ಲಿ ಸಮಾಜಕ್ಕಾಗಿ ಶ್ರಮಿಸುವ , ತಮ್ಮ ಅಮೂಲ್ಯ ಸಮಯ ನೀಡುವ , ಅನ್ಯಾಯ ವಿರುದ್ಧ ದ್ವನಿಯಾಗುವ, ಹಮ್ಮ ಬಿಮ್ಮಿಲ್ಲದ ವ್ಯಕ್ತಿತ್ವದ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ.
ಚಂದ್ರಹಾಸ ರೈ : ಸದಾ ಮಂದಹಾಸದ ಸರಳ ಜೀವನದ, ಸಜ್ಜನ ವ್ಯಕ್ತಿತ್ವದವರು.ಜನರಿಗಾಗಿ ಸದಾ ಸ್ವಂದಿಸುವವರು, ಎಲ್ಲಕ್ಕಿಂತ ಹೆಚ್ಚಾಗಿ ಜನಪರ ಕಾರ್ಯಗಳಿಗೆ ತೊಡಗುವ ಉತ್ಸಾಹವಿದೆ ಮಾತ್ರವಲ್ಲ ಜನರಿಗಾಗಿ ಧಾರಾಳ ಸಮಯ ನೀಡುತ್ತಾರೆ. ವರ್ತಮಾನದ ವಾಸ್ತವ ಅಗತ್ಯ ಅದೇ - ಕೈ ತುಂಬ ಹಣ ಕೊಡುವರಿಗಿಂತ , ಸಮಯ ಕೊಡುವವರು ನೂರುಪಾಲು ಉತ್ತಮರು.
ಜಪ್ತಿ ಸಂತೋಷ ಶೆಟ್ಟಿ : ನೇರ ನಿಷ್ಠುರವಾದಿ , ಅನ್ಯಾಯಗಳನ್ನು ಯಾವ ಮುಲಾಜಿಲ್ಲದೆ ಖಂಡಿಸುವವರು . ಬಂಟ್ಸ್ ಸಂಘಕ್ಕೆ ಅಗತ್ಯವಾಗಿ ಇವರ ಸೇವೆ ಅವಶ್ಯವಿದೆ. ವ್ಯವಸ್ಥೆಯೊಂದು ಸುವ್ಯವಸ್ಥಿತವಾಗಿ ನಡೆಯುವಲ್ಲಿ, ಅವ್ಯವಹಾರಗಳಿಗೆ ಎಚ್ಚರಿಕೆಯ ಕರೆಗಂಟೆಯಂತೆ ಇವರ ಅಮೂಲ್ಯ ಸೇವೆ ಅವಶ್ಯಕವಿದೆ .ಹಲವಷ್ಟು ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಯೋಗ್ಯವಾಗಿ ಅಲಂಕರಿಸಿ, ಸಂಘಟಿಸಿದ ಸಂಘಟನಾಶೀಲರು . ಆ ಸಂಘಟನಾ ಶಕ್ತಿ ,ಜೊತೆಯಲ್ಲಿರುವವರನ್ನು ಹುರಿದುಂಬಿಸುವ ಪ್ರೇರಪಣೆ ಹುಟ್ಟಿನಿಂದಲೇ ಬಂದ ವರ. ಇವರನ್ನು ನೀವು ಆರಿಸುವುದರಿಂದ ಬಂಟ್ಸ್ ಸಂಘಕ್ಕೆ ಒಂದು ಕಾಂತ್ರಿಕಾರಿ ಹೆಜ್ಜೆಯಾಗುವುದು.
ಬಾಲಚಂದ್ರ ಶೆಟ್ಟಿ : ಇವರು ಎಲ್ಲರನ್ನು ಆತ್ಮೀಯತೆಯಿಂದ ಕಾಣುವ, ಯಕ್ಷಗಾನವನ್ನು ಪ್ರೀತಿಸುವ ಬಹಳ ಸೌಮ್ಯ ಸ್ವಭಾವದ ನಿಗರ್ವಿ. ಕಷ್ಟಗಳನ್ನು ಕಂಡು ಬೆಳೆದು ಬಂದವರು ಹಾಗಾಗಿ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಇದೆ.
ಆನಂದರಾಮ ಶೆಟ್ಟಿ: ಎಲ್ಲರನ್ನು ಬಹಳ ಪ್ರೀತಿಯಿಂದ ಮಾತಾಡಿಸುವ ಸದಾ ಚಟುವಟಿಕೆಯಲ್ಲಿರುವವರು. ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿತ್ವದವರು. ಈ ಸಮಾಜಕ್ಕೆ ಕೈಲಾದ ಕೊಡುಗೆ ನೀಡುವ ತುಡಿತ ಹೊಂದಿರುವವರು. ಯಾವುದೇ ಕಾರ್ಯವಿರಲಿ ಅದನ್ನು ಎಲ್ಲಿ, ಹೇಗೆ ಮಾಡಿಸಿಕೊಂಡು ಬರಬೇಕು ಎನ್ನುವುದನ್ನು ತಿಳಿದಿರುವ, ತಿಳಿದು ವ್ಯವಹರಿಸುವ ಮಿತ ಭಾಷಿ - ಚುರುಕು ಕಾಯಕದವರು.
ಡಿಂಪಲ್ ಶೆಟ್ಟಿ: ಜನಪರ ಕಾಳಜಿ ಹೊಂದಿರುವ ಚಟುವಟಿಕೆಶೀಲರು. ಜವಬ್ದಾರಿಯುತ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಂತರು .
ಕಾಂತಿ ಶೆಟ್ಟಿ : ಬಹುಮುಖಿಯಾಗಿ ಕ್ರಿಯಾಶೀಲತೆ ಮೈಗೂಡಿಸಿಕೊಂಡವರು. ಸಾಂಸ್ಕೃತಿಕ, ರಾಜಕೀಯ, ವ್ಯವಹಾರಿಕ ಇವೆಲ್ಲ ಕ್ಷೇತ್ರಗಳನ್ನು ತನನ್ನು ತೊಡಗಿಸಿಕೊಂಡು ಹಲವಷ್ಟು ಆಶೊತ್ತರಗಳನ್ನು ಹೊಂದಿರುವ ದಿಟ್ಟ ಮಹಿಳೆ. ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಸ್ಪಂದಿಸುವ, ಕಾರ್ಯಕ್ರಮ ಆಯೋಜನೆಗಲ್ಲೂ ಸೈ ಎನಿಸಿಕೊಂಡಿರುವ ವಿರಳ ವ್ಯಕ್ತಿತ್ವದವರು.
"EXECUTIVE
COMMITTEE MEMBER"
Sl No- *2, 3, 7, 10, 12, 13,15, 16, 17, 20, 22, 25, 26 & 27*
ಬಂಟ್ಸ್ ಸಂಘದಲ್ಲಿನ ಅಮೂಲಾಗ್ರ ಬದಲಾವಣೆಗೆ ಇವರೆಲ್ಲರನ್ನೂ ವಿಜೇತರನ್ನಾಗಿಸುವ ಅವಶ್ಯಕವಿದೆ. ತನ್ಮೂಲಕ ಬಂಟ್ಸ್ ಸಂಘದಲ್ಲಿ ಒಂದು ಕಾಂತ್ರಿಕಾರಿ ಬದಲಾವಣೆಯ ಪರ್ವ ಆರಂಭಿಸಬೇಕಿದೆ. ಆಯ್ಕೆ ನಿಮ್ಮ ಮುಂದಿದೆ ,ಈ ಬಾರಿ ನೀವೂ ಯಾವ ಆಮಿಷಗಳಿಗೆ ಬಲಿಯಾಗದೆ, ಯೋಗ್ಯರನ್ನು ಆಯ್ಕೆಮಾಡುವ ನಂಬಿಕೆ ನಮಗಿದೆ. ಯೋಚಿಸಿ - ಮತಚಲಾಯಿಸಿ - ನಿಮ್ಮ ಆತ್ಮೀಯರಿಗೂ ಬಂಧುಗಳಿಗೂ ತಿಳಿಹೇಳಿ ಎಂಬ ವಿನಂತಿಯೊಂದಿಗೆ - TEAM DCR