ಕ್ಯಾ. ಕೃತಿ ಐ.ಆರ್ ಶೆಟ್ಟಿ "ಬಂಟ ಸಮಾಜದ ಪ್ರಪ್ರಥಮ ಮಹಿಳಾ ಕಮಾಂಡರ್" - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕ್ಯಾ. ಕೃತಿ ಐ.ಆರ್ ಶೆಟ್ಟಿ "ಬಂಟ ಸಮಾಜದ ಪ್ರಪ್ರಥಮ ಮಹಿಳಾ ಕಮಾಂಡರ್"

Share This
ಬಂಟ್ಸ್ ನ್ಯೂಸ್,ಮುಂಬೈ: ಇಂದು ಅನೇಕ ಕ್ಷೇತ್ರಗಳಲ್ಲಿ ಬಂಟರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಅತಂಹ ಸಾಧಕರಲ್ಲಿ ಕ್ಯಾಪ್ಟನ್ ಕೃತಿ ಐ.ಆರ್ ಶೆಟ್ಟಿ ಅವರು ಒಬ್ಬರಾಗಿದ್ದಾರೆ. ಇವರು ಮಂಗಳೂರಿನ ಇನ್ನಾಗುತ್ತು ರವೀಂದ್ರ ಶೆಟ್ಟಿ ಮತ್ತು ಕೊಡಿಯಲ್ ಗುತ್ತು ಕವಿತಾ ಶೆಟ್ಟಿ ದಂಪತಿಯ ಪುತ್ರಿ.

ಕ್ಯಾ. ಕೃತಿ ಶೆಟ್ಟಿ ಅವರು ಭಾರತ, ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ವಿಮಾನ ಸೇವಾ ತರಬೇತಿ ಪಡೆದು ಏಕಯಂತ್ರ ಮತ್ತು ಬಹುಯಂತ್ರಗಳ ವಿಮಾನ ಚಲಾವಣೆಯಲ್ಲೂ ಪರಿಣಿತಿಯನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದರು.
ತಮ್ಮ 19ನೇ ವಯಸ್ಸಿನಲ್ಲಿಯೇ ಕಮರ್ಶಿಯಲ್ ಪೈಲಟ್ ಲೈಸನ್ಸ್(CPL) ಪಡೆದಿದ್ದ ಇವರು ತಮ್ಮ ಚಾಣಕ್ಷತೆ ಮತ್ತು ದಕ್ಷ ಸೇವಾ ಕಾರ್ಯದಿಂದ ಎಲ್ಲರ ಗಮನ ಸೆಳೆದಿದ್ದರು. ಮುಂದೆ 2013ರ ಮೇ.3ರಂದು ಇಂಡಿಗೋ ಏರ್ ಬಸ್-320ರಲ್ಲಿ ಕಮಾಂಡರ್ ಹುದ್ದೆಯನ್ನು ಅಲಂಕರಿಸುವ ಮೂಲಕ "ಬಂಟ ಸಮಾಜದ ಪ್ರಪ್ರಥಮ ಮಹಿಳಾ ಕಮಾಂಡರ್" ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ಯಾ, ಕೃತಿ ಐ.ಆರ್ ಶೆಟ್ಟಿ ಅವರಿಗೆ ಇಂಡಿಗೋ ಏರ್ಲೈಸ್ನ ಉನ್ನತಾಧಿಕಾರಿ ಕ್ಯಾ.ಎಸ್.ಕೆ.ಭಲ್ಲಾ ಅವರು Four Stripe Aplets ‘ ಕಮಾಂಡರ್ ’ ಪದವಿಯನ್ನು ನೀಡಿ ಗೌರವಿಸಿದ್ದಾರೆ.

ಬಾಲ್ಯದಲ್ಲಿ ಪ್ರತಿಭಾನ್ವಿತೆಯಾಗಿದ್ದ ಕ್ಯಾಪ್ಟನ್ ಕೃತಿ ಅವರು ಅಂಧೇರಿಯ ಎನ್ಎಂ ಕಾಲೇಜಿನಲ್ಲಿ ಎಂ.ಕಾಂ ಪದವಿಯನ್ನು ಪಡೆದಿದ್ದಾರೆ. ಕೃತಿ ಅವರ ತಂದೆ ಐ.ಆರ್ ಶೆಟ್ಟಿ ಅವರು ಮುಂಬಯಿ ಬಂಟರ ಸಂಘದ ನಾನಾ ಹುದ್ದೆಗಳನ್ನು ಅಲಂಕರಿಸಿದ್ದರು. ಮಾತ್ರವಲ್ಲದೇ  ಎಸ್ಎಮ್ ಶೆಟ್ಟಿ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತ ಸಂಘದ ಸಲಹೆಗಾರರಾಗಿಯು ಸೇವೆ ಸಲ್ಲಿಸಿದ್ದಾರೆ.
- www.buntsnews.com

Pages