ಮಂಗಳೂರು: ಬಂಟ ಸಮಾಜದವರು ಕ್ರಿಯಾಶೀಲರು, ಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದು. ಜಿಲ್ಲೆಯ ಸರ್ವರಿಗೂ ಶ್ರೀ ಗಣಪತಿಯ ಆಶೀರ್ವಾದ ಇರಲಿ. ಯುವಜನತೆ ಹಿರಿಯರ ಆಶೀರ್ವಾದ ಪಡೆದರೆ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಜಿಲ್ಲೆ ಮಾತ್ರವಲ್ಲ ಬಂಟರು ಮುಂಬಾಯಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ಹಾಸ್ಟೆಲ್ನ ಓಂಕಾರ ನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇವರ ಪೂಜೆಯಲ್ಲಿ ಶ್ರದ್ಧಾ ಭಕ್ತಿ, ಮುಖ್ಯ. ಕಷ್ಟ ಕಾರ್ಪಣ್ಯ ನಿವಾರಣೆಗೆ ದೇವರ ಅನುಗ್ರಹ ಅಗತ್ಯ ಎಂದು ಕ್ರೀಡಾ ಯುನಜನ ಇಲಾಖೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ತಿಳಿಸಿದರು. ಗಣೇಶೋತ್ಸವ ಭಾವೈಕ್ಯತೆಯ ಸಂಕೇತ. ಈ ಹಬ್ಬವನ್ನು ಜಾತಿ ಮತ ಭೇದ ಇಲ್ಲದೆ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಮೊಯ್ದೀನ್ ಬಾವ, ರೆ.ಡಾ.ಹನಿಬಾಲ್ ಕಬ್ರಾಲ್, ಶ್ರೀಮತಿ ಉರ್ಮಿಳಾ ರಮೇಶ್, ಕೊಂಜಾಲುಗುತ್ತು ಪ್ರಭಾಕರ ಶೆಟ್ಟಿ, ಪಾಲ್ಗೊಂಡು ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ವಿಧಾನಪರಿಷತ್ ಸದಸ್ಯ ಐವನ್ ಡಿ'ಸೋಜ, ಶ್ರೀಮತಿ ಜಾನಕಿ ಬ್ರಹ್ಮಾವರ, ಆರೂರು ಪ್ರಭಾಕರ್ ರಾವ್, ಡಾ.ವಿದ್ಯಾಧರ ಶೆಟ್ಟಿ, ಶ್ರೀಮತಿ ನಿರ್ಮಲಾ ಕಾಮತ್, ಡಾ.ಅತುಲ್ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ರೋಹಿತ್ ಕುಮಾರ್ ಕಟೀಲು, ಚಂದ್ರಹಾಸ ರೈ ಬೋಳ್ನಾಡುಗುತ್ತು ಅವರನ್ನು ಸನ್ಮಾನಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಕೋಶಾಧಿಕಾರಿ, ಕೃಷ್ಣರಾಜ ಸುಲಾಯ, ಶಶಿರಾಜ್ ಶೆಟ್ಟಿ ಕೊಳಂಬೆ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಎನ್ ರವಿರಾಜ ಶೆಟ್ಟಿ, ಸಿ.ಎ.ಮನಮೋಹನ್ ಶೆಟ್ಟಿ . ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಬಂಟ್ಸ್ಹಾಸ್ಟೆಲ್ ಓಂಕಾರನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜ್ನ ಆಡಳಿತ ನಿರ್ದೇಶಕ ಡಾ.ಎಂ.ಮೋಹನ್ ಆಳ್ವರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಡಾ.ಮೋಹನ್ ಆಳ್ವರವರನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈಯವರು ಗೌರವಿಸಿದರು. ಡಾ.ಆಶಾಜೋತ್ಯಿರೈ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟರ ಮಾತೃ ಸಂಘದ `ನಮ್ಮ ಸಂಪರ್ಕ' ಮಾಸ ಪತ್ರಿಕೆ ಹೊಸ ವಿನ್ಯಾಸದಲ್ಲಿ ಪ್ರಕಟಗೊಂಡಿದ್ದು, ಅದನ್ನು ಸಚಿವ ಕೆ.ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು. ಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಬಂಟರ ಮಾತೃ ಸಂಘದ ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು. ಅಶ್ವತ್ಥಾಮ ಹೆಗ್ಡೆ ವಂದಿಸಿದರು.