ಬಂಟ್ಸ್ ಹಾಸ್ಟೆಲ್: ಶ್ರೀ ಗಣೇಶೋತ್ಸವ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ್ಸ್ ಹಾಸ್ಟೆಲ್: ಶ್ರೀ ಗಣೇಶೋತ್ಸವ ಉದ್ಘಾಟನೆ

Share This
ಮಂಗಳೂರು: ಶ್ರೀ ಗಣೇಶ ಚತುಥಿಹಬ್ಬವು ಪರಸ್ಪರ ಬಾಂಧವ್ಯ-ಸಾಮರಸ್ಯ ಬೆಸೆಯುವ ಹಬ್ಬವಾಗಿದ್ದುಜೀವನದ ಜಂಜಾಟಗಳಿಂದ ಮುಕ್ತರಾಗಲು ಇಂತಹ ಹಬ್ಬಗಳಿಂದ ಸಾಧ್ಯ ಎಂದು ಮಂಗಳೂರಿನ ಫಾ|ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ|ಜಯಪ್ರಕಾಶ್ ಆಳ್ವ ಅವರು ಅಭಿಪ್ರಾಯಪಟ್ಟರು.



ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾವ9ಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರನಗರದಲ್ಲಿ 3 ದಿನಗಳ ಕಾಲ ನಡೆಯುವ ಸಾವ9ಜನಿಕ ಶ್ರೀ ಗಣೇಶೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರುಧ್ವಜಾರೋಹಣ ನೆರವೇರಿಸಿದ ಕರ್ನಲ್ .ಜೆ.ಭಂಡಾರಿ ಅವರು ಮಾತನಾಡಿದೇಶಸೇವೆಯೇ ಈಶಸೇವೆಯಾಗಿದ್ದುಅಪೂರ್ವ ನಾಯಕತ್ವದ ಗುಣ ಹಾಗೂ ಅಸಾಮಾನ್ಯ ಧೈರ್ಯ ಹೊಂದಿರುವ ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ಮಿಲಿಟರಿ ಸೇವೆಗೆ ಸೇರುವಂತಾಗಬೇಕು ಎಂದರು.

ತೆನೆವಿತರಣೆ ಮಾಡಿದ ನಿವೃತ್ತ ಇಂಜಿನಿಯರ್ ಬೆಳಿಯೂರುಗುತ್ತು ವಿಠಲ ರೈ ಅವರು ಮಾತನಾಡಿಮೂಲತಕೃಷಿಕರಾಗಿರುವ ಬಂಟರು ಗಣೇಶೋತ್ಸವದ  ಸಂದಭ9ದಲ್ಲಿ ಸಾವ9ಜನಿಕರಿಗೆ ತೆನೆ ವಿತರಣೆ ಮಾಡಿರುವುದು ಸ್ತುತ್ಯರ್ಹವಾಗಿದ್ದು ಸಂದಭಕೂಡು ಕುಟುಂಬದ ಜೀವನವನ್ನು ನೆನಪಿಸುತ್ತಿದೆ ಎಂದರು.

ಯಶೋಧಾ ಜೆ.ಭಂಡಾರಿಸುರೇಖಾ ಜೆ.ಆಳ್ವಬೆಳ್ಳಿಪ್ಪಾಡಿ ರತ್ನಸಭಾ ವಿ.ರೈಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿಕೋಶಾಧಿಕಾರಿ ಕೃಷ್ಣರಾಜ ಸುಲಾಯಟ್ರಸ್ಟಿ ರವಿರಾಜ ಶೆಟ್ಟಿಬಂಟರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿಕಾರ್ಯದರ್ಶಿ ಮೇಘನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸ್ವಾಗತಿಸಿಪ್ರಸ್ತಾವನೆಗೈದರು.  ಶರತ್ ಶೆಟ್ಟಿ ಪಡುಪಳ್ಳಿ ಹಾಗೂ ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್ ಕಾರ್ಯಕ್ರಮ ನಿರ್ವಹಿಸಿದರು.  ಸಮಿತಿಯ ಜೊತೆ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಕೊಳಂಬೆ ವಂದಿಸಿದರು.

Pages