ಮಂಗಳೂರು: ಕವಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಯವರು 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘವು ಬದಿಯಡ್ಕದಲ್ಲಿರುವ ಕಿಂಞಣ್ಣರೈಯವರ ಕವಿತಾ ಕುಟೀರದಲ್ಲಿ ಅವರನ್ನು ಸನ್ಮಾನಿಸಿದೆ.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈಯವರ ನೇತೃತ್ವದಲ್ಲಿ ಕವಿ ಕಯ್ಯಾರ ಕಿಂಞಣ್ಣ ರೈಯವರನ್ನು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಕಯ್ಯಾರ ಅವರನ್ನು ಕರ್ನಾಟಕ ಸರಕಾರದ ಪ್ರತಿಷ್ಟಿತ ಪಂಪ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಕಯ್ಯಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡುವಂತೆ ಬಂಟರ ಯಾನೆ ನಾಡವರ ಮಾತೃ ಸಂಘವು ಈಗಾಗಲೇ ಮನವಿ ಮಾಡಿದೆ. ಆ ಪುರಸ್ಕಾರವೂ ಕಯ್ಯಾರರಿಗೆ ಶೀಘ್ರದಲ್ಲೇ ದೊರೆಯಲಿ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.
ಕಯ್ಯಾರ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಡಾ.ಆಶಾಜ್ಯೋತಿ ರೈ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ. ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಸುಂದರ ಶೆಟ್ಟಿ, ಎಂ. ಕರುಣಾಕರ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ವಿಕಾಶ್ ಹೆಗ್ಡೆ, ಪತ್ರಕರ್ತ ರವೀಂದ್ರ ಶೆಟ್ಟಿ, ಪ್ರತಾಪ್ ಭಂಡಾರಿ, ನಿವೇದಿತಾ ಶೆಟ್ಟಿ, ಸಾರಿಕಾ ಭಂಡಾರಿ, ಕೋಟಿ ಪ್ರಸಾದ್ ಆಳ್ವ, ಸುಜಯ ಸೇಮಿತ, ಜಗದೀಶ್ ಶೆಟ್ಟಿ , ಅಶ್ವಥಾಮ ಹೆಗ್ಡೆ, ರವಿರಾಜ್ ಶೆಟ್ಟಿ, ರಘು ಪಡೀಲ್ ಕಾಸರಗೋಡು ತಾಲೂಕು ಸಮಿತಿಯ ಸಂಚಾಲಕ ಪದ್ಮನಾಭ ರೈ, ಸುಬ್ಬಯ್ಯ ರೈ, ಸತೀಶ್ ಅಡಪ ಮೊದಲಾದವರು ಉಪಸ್ಥಿತರಿದ್ದರು.