ಬೆಂಗಳೂರು: ಇಂದು ನಾಡಿನೆಲ್ಲೆಡೆ ನಾನಾ ಸಾಧನೆ ಮಾಡಿದ ಸಾಧಕರ, ಹೋರಾಟಗಾರ ಪ್ರತಿಮೆಯಿದೆ. ಅಂತಹ ಪ್ರತಿಮೆಗಳಲ್ಲಿ ಬೆಂಗಳೂರಿನ ಯಶವಂತಪುರದ ಮೆಟ್ರೋ ಸೇತುವೆ ಸಮೀಪವಿರುವ ಪೋರ್ಚುಗೀಸರ ವಿರುದ್ಧ ಹೋರಾಡಿದ ತುಳುನಾಡಿನ ದಿಟ್ಟ ಮಹಿಳೆ ಉಳ್ಳಾಲದ ಅಬ್ಬಕ್ಕ ರಾಣಿಯದ್ದು ಒಂದಾಗಿದೆ.
ಸರ್ಕಾರವೇನೂ ಬಹಳಷ್ಟು ಮುತುವರ್ಜಿ ವಹಿಸಿ ರಾಣಿ ಅಬ್ಬಕ್ಕನ ಪ್ರತಿಮೆಯನ್ನು ನಿರ್ಮಾಣ ಮಾಡಿತ್ತು. ಆದರೆ ಸೂಕ್ತ
ನಿರ್ವಹಣೆಯಿಲ್ಲದೆ ಅಬ್ಬಕ್ಕನ ಪ್ರತಿಮೆ ಸುತ್ತ ಮರಗಳ ರೆಂಬೆಕೊಂಬೆಗಳು ಬೆಳೆದು ಪ್ರತಿಮೆ ಕಾಣದಂತಾಗಿತ್ತು. ಹೀಗೆ ಮರದ ಗೆಲ್ಲುಗಳಿಂದ ಮರೆಯಾಗಿದ್ದ ವೀರ ಮಹಿಳೆ ಅಬ್ಬಕ್ಕ ರಾಣಿಯ ಪ್ರತಿಮೆಯನ್ನು ತುಳುನಾಡಿನ ಹೆಮ್ಮೆಯ ಪುತ್ರ ಮಂಜುನಾಥ ಅಡಪ ಅವರು ತೆರವುಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮಂಜುನಾಥ ಅಡಪರು ಏಕಾಂಗಿಯಾಗಿ ಪ್ರತಿಮೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಿ, ಅಡ್ಡಲಾಗಿದ್ದ ಮರದ ರೆಂಬೆ-ಕೊಂಬೆಗಳನ್ನು ಸರಿಸಿ ಪ್ರತಿಮೆಯನ್ನು ಕಾಣುವಂತೆ ಮಾಡಿದ್ದಾರೆ. ಸೃಷ್ಠಿ ಕಲಾಭೂಮಿಯ ಮಂಜುನಾಥ ಅಡಪರ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ರವಿರಾಜ್ ಶೆಟ್ಟಿ ಕಟೀಲು