ಬಂಟರ ಮಾತೃ ಸಂಘದಿಂದ ನಿವ್ಯಾ ಪಿ.ಶೆಟ್ಟಿಗೆ ಸನ್ಮಾನ - BUNTS NEWS WORLD

ಬಂಟರ ಮಾತೃ ಸಂಘದಿಂದ ನಿವ್ಯಾ ಪಿ.ಶೆಟ್ಟಿಗೆ ಸನ್ಮಾನ

Share This
ಮಂಗಳೂರು: 2015ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 274ನೇ ರ್ಯಾಂಕ್ ಗಳಿಸಿದ ಕುಂದಾಪುರ ಶಿರೂರಿನ ನಿವ್ಯಾ ಪಿ.ಶೆಟ್ಟಿ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಜಿತ್ಕುಮಾರ್ರೈ ಮಾಲಾಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಿಟ್ಟೆ ವಿನಯ ಹೆಗ್ಡೆ, .ಜೆ. ಶೆಟ್ಟಿ, ಡಾ.ಮೋಹನ್ ಆಳ್ವ, ಉದ್ಯಮಿ ಪ್ರಕಾಶ್ ಶೆಟ್ಟಿ, ನಾಗರಾಜ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ಸಿಎ ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

Pages