BUNTS NEWS, ಮಂಗಳೂರು: ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವು ಸಮಾಜ ಬಾಂಧವರ ಸಹಕಾರದೊಂದಿಗೆ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಈ ಪ್ರಯುಕ್ತ ಶಿಲಾನ್ಯಾಸ ಸಮಾರಂಭವು ಮೇ.12ರಂದು ಸಂಜೆ 4ಕ್ಕೆ ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ಜರಗಿತು.
ಬಂಟ ಸಮಾಜ ಬಾಂಧವರು ಪರಿವರ್ತಿತ ಕಾಲಘಟ್ಟದಲ್ಲಿ ಪರಿವರ್ತನೆಗೆ ತಕ್ಕಂತೆ ಹೊಂದಿಕೊಂಡು ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸನ್ನು ಪಡೆದವರು. ಸ್ವಾತಂತ್ರ್ಯಪೂರ್ವದಲ್ಲಿ ವಿದ್ಯೆ, ಉದ್ಯೋಗ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಅಮೂಲಾಗ್ರವಾದ ಬದಲಾವಣೆಗಳು ಆಗುತ್ತವೆ ಎಂಬುವುದನ್ನು ಮನವರಿಕೆ ಮಾಡಿಕೊಂಡ ದೂರದರ್ಶಿಗಳಾದ ಬಂಟ ಸಮಾಜದ ಹಿರಿಯರು ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡು ಬಂಟ ಸಮಾಜವನ್ನು ಉಳಿಸುವ, ಬೆಳೆಸುವ ಹಾಗೂ ಒಗ್ಗೂಡಿಸುವ ಸದುದ್ದೇಶ, ಒಂದು ವಿದ್ಯಾವಂತ, ಸುಸಂಸ್ಕೃತ, ಸದೃಢ ಸಮಾಜವನ್ನು ನಿರ್ಮಿಸುವ ಮಹಾಸಂಕಲ್ಪದೊಂದಿಗೆ ಬಂಟರ ಯಾನೆ ನಾಡವರ ಮಾತೃ ಸಂಘವನ್ನು ಶತಮಾನದ ಹಿಂದೆ ಸ್ಥಾಪಿಸಿ ಇಡೀ ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣೀಭೂತರಾದರು. ನಮ್ಮ ಉನ್ನತಿಗೆ ದಾರಿದೀಪಗಳಾದ ನಮ್ಮ ಹಿರಿಯರಿಂದ ಪ್ರೇರಿತವಾದ ಜಗತ್ತಿನಾದ್ಯಂತ ಇರುವ ಬಂಟ ಬಾಂಧವರು ನಂತರದ ದಿನಗಳಲ್ಲಿ ಅಲ್ಲಲ್ಲಿ ಬಂಟರ ಸಂಘಗಳನ್ನು ಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ವಿಗಳಾದರು.
ಶತಮಾನದ
ಹಿಂದೆ ನಮ್ಮ ಹೆಚ್ಚಿನ ಸಮಾಜ ಬಾಂಧವರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ವಿದ್ಯಾರ್ಜನೆ ಮಾಡುವ ಯಾವುದೇ ಸೌಲಭ್ಯಗಳಿರಲಿಲ್ಲ. ನಮ್ಮ ಸಮಾಜ ಬಾಂಧವರಿಗೆ ಮತ್ತು ಇತರರಿಗೆ ವಿದ್ಯಾರ್ಜನೆ
ಮಾಡುವ ಅವಕಾಶವನ್ನು ಒದಗಿಸುವ, ಅನುಕೂಲವನ್ನು ಕಲ್ಪಿಸುವ ಸಲುವಾಗಿ ನಮ್ಮ ಹಿರಿಯರು ತಾವು ಸಂಪಾದಿಸಿದ
ಹಣದಿಂದ ಮೂರು ಜಿಲ್ಲೆಗಳಲ್ಲಿ ಭೂಮಿಗಳನ್ನು ಖರೀದಿಸಿ ಹಾಸ್ಟೆಲ್‍ಗಳನ್ನು ನಿರ್ಮಿಸಿ ನಮ್ಮ ಜಿಲ್ಲೆಯ
ಜನರು ವಿದ್ಯಾವಂತರಾಗುವುದಕ್ಕೆ ಕಾರಣೀಭೂತರಾದರು.
ವಿದ್ಯೆಯೊಂದಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ವಿಜಯಾ ಬ್ಯಾಂಕ್, ಸಿನಿಮಾ ಥಿಯೇಟರ್‍ಗಳು,
ವಾಣಿಜ್ಯ ಸಂಸ್ಥೆಗಳನ್ನು ಸ್ಥಾಪಿಸಿದರು. ನಂತರದ ದಿನಗಳಲ್ಲಿ
ಸಾವಿರಾರು ಮಂದಿ ನಮ್ಮ ಸಮಾಜ ಬಾಂಧವರಿಗೆ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ದೊರೆತುದ್ದಲ್ಲದೆ, ಅವರ
ನಂತರದ ಜನಾಂಗವು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಲು ನಮ್ಮ ಹಿರಿಯರು ಅವಕಾಶ ಮಾಡಿಕೊಟ್ಟಿದ್ದರು. ನಮ್ಮವರ ಸಭೆ ಸಮಾರಂಭಗಳಿಗೆ ಅವಶ್ಯಕವಾದ ಸೌಲಭ್ಯಗಳನ್ನು
ಒದಗಿಸಲು ಹಾಗೂ ಸಂಘಟನಾ ದೃಷ್ಟಿಯಿಂದ ನಮ್ಮವರನ್ನು ಒಗ್ಗೂಡಿಸುವ ಉದ್ದೇಶದಿಂದ ಸಭಾಭವನಗಳನ್ನು ಸಂಘದ
ವತಿಯಿಂದ ನಿರ್ಮಿಸಲಾಯಿತು. ಬದಲಾಗುತ್ತಿರುವ ಸನ್ನಿವೇಶಗಳಿಗೆ
ಹಾಗೂ ಈಗಿನ ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಸಭಾಭವನಗಳಲ್ಲಿ, ಕಟ್ಟಡಗಳಲ್ಲಿ ಆಧುನಿಕ ಸೌಲಭ್ಯಗಳು
ಇಲ್ಲದೆ ಇರುವ ಕಾರಣ ನಮ್ಮ ಕಟ್ಟಡಗಳಿಂದ ನಮ್ಮ ಭೂಮಿಯ ಬೆಲೆಗೆ ಅನುಗುಣವಾಗಿ ಆದಾಯ ಬರುತ್ತಿಲ್ಲ. ಈ ಕಟ್ಟಡಗಳನ್ನು ತೆಗೆದು ನಮ್ಮ ಸಮಾಜದ ಗೌರವ, ಘನತೆಗಳಿಗೆ
ಮತ್ತು ಸಮಯದ ಅವಶ್ಯಕತೆಗಳಿಗೆ ಅನುಗುಣವಾದ ಹೊಸ ಸಭಾಭವನಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ
ಮಾಡಿದರೆ ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಸಂಘಕ್ಕೆ ಬರುತ್ತದೆ. ಈ ಆದಾಯವನ್ನು ಸಂಘವನ್ನು ಸ್ಥಾಪಿಸಿದ ದ್ಯೇಯೋದ್ದೇಶಕ್ಕೆ
ಅನುಗುಣವಾಗಿ ವಿದ್ಯಾಭ್ಯಾಸ, ಆರೋಗ್ಯ, ವಿವಾಹ, ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ, ಪ್ರಾಕೃತಿಕ ವಿಕೋಪ ಮುಂತಾದ ಕಾರಣಗಳಿಂದ ನೊಂದವರಿಗೆ ಹಾಗೂ
ಇತರ ಯಾವುದೇ ಸಹಾಯ, ಸಹಕಾರದ ಅಗತ್ಯವಿರುವವರಿಗೆ ನೀಡುವ ಉದ್ದೇಶವನ್ನು ಸಂಘವು ಹೊಂದಿದೆ.
ಶತಮಾನೋತ್ಸವ ಕಟ್ಟಡದ ವಿಶೇಷತೆಗಳು: ಸಮಾಜದ
ಶ್ರೇಯೋಭಿವೃದ್ದಿಯನ್ನು ಮಾಡುವ ಸದುದ್ದೇಶದಿಂದ ಹಾಗೂ ಸಂಘವು ಶತಮಾನೋತ್ಸವವನ್ನು ಪೂರೈಸಿದ ಸವಿನೆನಪಿಗಾಗಿ
ನಿರ್ಮಿಸುವ ಶತಮಾನೋತ್ಸವ ಕಟ್ಟಡಗಳಲ್ಲಿ 2000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, ಸಭೆ, ಸಮಾರಂಭಗಳನ್ನು
ಏರ್ಪಡಿಸಲು ಎರಡು ಸಭಾಭವನಗಳು, 1250ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ, ಮೂರು ಪ್ರತ್ಯೇಕ
ಲಾಬಿಗಳು, 4ನೇ ಮಹಡಿಯಲ್ಲಿ 50,000 ಚದರ ಅಡಿಯಷ್ಟು ಓಪನ್ ಟೆರೆಸ್, ಸುಮಾರು 6 ಲಕ್ಷ ಚದರ ಅಡಿ ವಾಣಿಜ್ಯ
ಸಂಕೀರ್ಣ ಹಾಗೂ ವಿಶ್ವ ದರ್ಜೆಯ ಜಿಮ್ ಮತ್ತು ಕ್ಲಬ್ ಮೊದಲಾದವುಗಳನ್ನು ಒಳಗೊಂಡಿರುವ ಮಾತೃಸಂಘದ ಶತಮಾನೋತ್ಸವ
ಕಟ್ಟಡಗಳ ಸಂಕೀರ್ಣವನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ.