ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ 1 ಲಕ್ಷ ರೂ. ನೆರವು - BUNTS NEWS WORLD

 

ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ 1 ಲಕ್ಷ ರೂ. ನೆರವು

Share This


ಮಂಗಳೂರು: ಬಂಟರ ಯಕ್ಷಗಾನ ಕಲಾವೇದಿಕೆ ಮುಂಬಯಿ ಇವರು ಯಕ್ಷಾಂಗಣ ಮಂಗಳೂರು ಇವರೊಂದಿಗೆ ತೀವ್ರ ಅಸೌಖ್ಯದಲ್ಲಿರುವ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಬಂಟ್ವಾಳ ಅಜ್ಜಿಬೆಟ್ಟು ನಿವಾಸಕ್ಕೆ ತೆರಳಿ ಒಂದು ಲಕ್ಷ ರೂ.ವನ್ನು ಚಿಕಿತ್ಸೆಗಾಗಿ ನೀಡಿದರು.
ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರ್ ಬಾಲಕೃಷ್ಣ ಶೆಟ್ಟಿ ಅವರು ಸಿದ್ಧಕಟ್ಟೆಯವರಿಗೆ ನೆರವು ನಿಧಿ ಹಸ್ತಾಂತರಿಸಿದರು. ಈ ಸಂದರ್ಭ ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಉದ್ಯಮಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಅಶೋಕ್ ಮಾಡ, ಲಕ್ಷ್ಮೀನಾರಾಯಣ ರೈ ಹರೇಕಳ, ಸುಭಾಷ್ ರೈ ಕರ್ನೂರು ಹಾಗೂ ಸಿಧ್ಧಕಟ್ಟೆ ಕುಟುಂಬ ಉಪಸ್ಥಿತರಿದ್ದರು.
ಮಾಹಿತಿ ಕೃಪೆ: ಭಾಸ್ಕರ ರೈ ಕುಕ್ಕುವಳ್ಳಿ

Pages