ಮಂಗಳೂರು: ಬೆಂಗಳೂರಿನ ಪತ್ರಕರ್ತರ ವೇದಿಕೆಯ ಉಡುಪಿ-ದ.ಕ
ಜಿಲ್ಲಾ ಘಟಕದ 9ನೇ ವರ್ಷದ ಪತ್ರಿಕಾ ದಿನದ “ಹಿರಿಯರೆಡೆಗೆ ನಮ್ಮ ನಡಿಗೆ” ಕಾರ್ಯಕ್ರಮದ ಅಂಗವಾಗಿ ಹಿರಿಯ
ಪತ್ರಕರ್ತ ಮಲಾರ್ ಜಯರಾಮ ರೈ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಿತು.
ಮಲಾರ್ ಜಯರಾಮ ರೈಗಳ ಶಿರಿಯಾ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಟ ಪುನರೂರು ಅವರು ರೈಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಪತ್ರಕರ್ತರ ವೇದಿಕೆಯ ಉಡುಪಿ-ದ.ಕ ಘಟಕದ ಅಧ್ಯಕ್ಷ ಶೇಖರ ಅಜೆಕಾರು ವಹಿಸಿದ್ದರು.
ಆಕಾಶವಾಣಿ ಸಹಾಯಕ
ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ, ವಿಶ್ವ ತುಳುವೆರೆ ಆಯನೋ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್
ಆಳ್ವ, ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ, ಎಸ್. ಜಯರಾಂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.