ಬಂಟ್ಸ್
ನ್ಯೂಸ್, ಮಂಗಳೂರು: ದುಬೈ ಯುಎಇ ಘಟಕದವರು ಸಮಾನ ಮನಸ್ಕರಿಂದ ಸಂಗ್ರಹಿಸಿದ ದೇಣಿಗೆ ರೂ. 30 ಲಕ್ಷವನ್ನು ಯುಎಇ ಘಟಕದ
ಪರವಾಗಿ
ಪೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ ಮಾಲಕರಾದ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಮಂಗಳೂರಿನ ಗೋಲ್ಡ್
ಫಿಂಚ್ ಇಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ
ಕೇಂದ್ರ ಸಮಿತಿಗೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಂದಿನ ಯೋಜನಾ ಪರಿಕಲ್ಪನೆಯಾದ
" ಪಟ್ಲ ಯಕ್ಷಾಶ್ರಯ - ಕಲಾಗ್ರಾಮ " ಇದರ ಕಾಲ್ಪನಿಕ ಚಿತ್ರದ ನಕಾಶೆಯನ್ನು ಎಕ್ಕಾರು ಘಟಕದ ಅಧ್ಯಕ್ಷರಾದ ಗಿರೀಶ್ ಶೆಟ್ಟಿಯವರು ( ಶ್ರೀ ಡೆವಲಪರ್ಸ್ ) ತಯಾರಿಸಿದ್ದು, ಅದರ ಮಾದರಿಯನ್ನು ಸಭೆಗೆ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟ್
ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಸುದೇಶ್ ಕುಮಾರ್ ರೈ, ಪುರುಷೋತ್ತಮ ಭಂಡಾರಿ, ಗೋಲ್ಡ್
ಫಿಂಚ್ ನಿರ್ದೇಶಕ ಪ್ರಸಾದ್ ಶೆಟ್ಟಿ, ರಾಜೀವ ಪೂಜಾರಿ ಕೈಕಂಬ, ಫ್ರೋ. ಮನು ರಾವ್
ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮಾಹಿತಿ ಕೃಪೆ: ರವಿ ಶೆಟ್ಟಿ www.buntsnews.com
ಮಾಹಿತಿ ಕೃಪೆ: ರವಿ ಶೆಟ್ಟಿ www.buntsnews.com