BUNTS NEWS,ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ,
ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಬಂಟರ ಮಂಗಳೂರು ತಾಲೂಕು ಪ್ರತಿನಿಧಿ ಸಭೆ ಬಂಟ್ಸ್‍ಹಾಸ್ಟೆಲ್‍ನ
ಗೀತಾ ಎಸ್.ಎಂ.ಶೆಟ್ಟಿ ಸಭಾ ಭವನದಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ
ಅಜಿತ್‍ಕುಮಾರ್ ರೈ ಮಾಲಾಡಿ ಮಾತನಾಡಿ 'ಗ್ರಾಮೀಣ ಮಟ್ಟದಲ್ಲಿ ಸಮಾಜವನ್ನು ಬಲಪಡಿಸುವ ಉದ್ದೇಶದಿಂದ
ಇಂತಹ ಸಭೆಯನ್ನು ಆಯೋಜಿಸಲಾಗಿದೆ. ಸಮಾಜದಲ್ಲಿರುವ ದುರ್ಬಲ ಮತ್ತು ಹಿಂದುಳಿದವರಿಗೆ ಸಹಾಯ ಮಾಡಲು ಸರಕಾರದಿಂದ
ಸಿಗುವಂತಹ ಸವಲತ್ತು ಮತ್ತು ಪ್ರಯೋಜನವನ್ನು ಅವರಿಗೆ ತಲುಪಿಸಲು ಇಂತಹ ಕಾರ್ಯಕ್ರಮ ಅವಶ್ಯವಾಗಿದೆ'
ಎಂದರು.
ಹಿರಿಯರ ಆದರ್ಶವನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕು. ಎಲ್ಲರೂ ಸಮಾಜ ಮುಖಿಯಾಗಿ ಚಿಂತನೆ ಮಾಡಬೇಕು, ನಾವು ಇತರ ಸಮಾಜದವರೊಂದಿಗೆ ಸೌಹಾರ್ದಯುತವಾಗಿ ಬಾಳಬೇಕು ಎಂದು ಮಾಲಾಡಿ ಅಜಿತ್‍ಕುಮಾರ್ ರೈ ಸಲಹೆ ನೀಡಿದರು.
ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ ಸ್ವಾಗತಿಸಿ ಪ್ರಸ್ತಾವಿಕ
ಮಾತುಗಳನ್ನಾಡಿದರು. ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ
ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಡಾ.ಆಶಾ ಜ್ಯೋತಿ
ರೈ ಉಪಸ್ಥಿತರಿದ್ದರು. ತಾಲೂಕುಸಮಿತಿಯ ಸಹ ಸಂಚಾಲಕ ಕೆ.ಉಮೇಶ್ ರೈ ವಂದಿಸಿದರು. ಸುಖೇಶ್ ಚೌಟ ಕಾರ್ಯಕ್ರಮ
ನಿರ್ವಹಿಸಿದ್ದರು. ಸಭೆಯಲ್ಲಿ ಮಂಗಳೂರು ತಾಲೂಕಿನ 100ಕ್ಕೂ ಮಿಕ್ಕಿದ ಗ್ರಾಮದ ಪ್ರತಿನಿಧಿಗಳು ಭಾಗವಹಿಸಿ
ಸಂಘಟನೆಯನ್ನು ಬಲಪಡಿಸುವ ಉದ್ದೇಶದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಗ್ರಾಮೀಣ ಭಾಗದ ಜನರ ಸಂಕಷ್ಟಗಳನ್ನು
ಸಭೆಯಲ್ಲಿ ತಿಳಿಸಿದರು.