ಬಂಟ್ಸ್ ನ್ಯೂಸ್, ಮಂಗಳೂರು: ಸುರತ್ಕಲ್ ಬಂಟರ ಸಂಘದ
ಮಹಿಳಾ ವೇದಿಕೆಯ 2016-18ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಕಲಾ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮಹಿಳಾವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.
ಉಪಾಧ್ಯಕ್ಷರಾಗಿ ಬೇಬಿ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯ ಭಾರತಿ
ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಚಿತ್ರಾ ಜೆ.ಶೆಟ್ಟಿ, ಕೋಶಾಧಿಕಾರಿಯಾಗಿ ಭವ್ಯಾ ಎ.ಶೆಟ್ಟಿ, ಸಂಘಟನಾ
ಕಾರ್ಯದರ್ಶಿಯಾಗಿ ವೀಣಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭಾರತಿ ಜಿ.ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ
ಶೈಲಾ ಎಸ್.ಶೆಟ್ಟಿ ಆಯ್ಕೆಯಾದರು.
ಇದೇ ವೇಳೆ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಗೆ ಸಂಬಂಧಿಸಿದಂತೆ
ವಲಯ ಸಂಚಾಲಕಿಯರ ನೇಮಕ ನಡೆಸಲಾಯಿತು. ಸುರತ್ಕಲ್ - ತಡಂಬೈಲ್ ವಲಯ ಸಂಚಾಲಕಿಯಾಗಿ ಜ್ಯೋತಿ ಶೆಟ್ಟಿ,
ಇಡ್ಯಾ-ಕಟ್ಲ ಸಂಚಾಲಕಿಯಾಗಿ ಸುಖಲತಾ ಶೆಟ್ಟಿ, ಕುಳಾಯಿ - ಹೊಸಬೆಟ್ಟು ಸಂಚಾಲಕಿ ಯಾಗಿ ಕೇಸರಿ ಎಸ್.
ಪೂಂಜಾ, ಕೃಷ್ಣಾಪುರ-ಕಾಟಿಪಳ್ಳ ಸಂಚಾಲಕಿಯಾಗಿ ಸುಜಾತ ಶೆಟ್ಟಿ, ಮದ್ಯ - ಮುಂಚಾರು ಸಂಚಾಲಕಿ ಯಾಗಿ
ವಜ್ರಾಕ್ಷಿ ಶೆಟ್ಟಿ, ಚೇಳಾರು ಸಂಚಾಲಕಿಯಾಗಿ ಚಂದ್ರಕಲಾ ಶೆಟ್ಟಿ, ಸೂರಿಂಜೆ-ಕುತ್ತೆತ್ತೂರು ಸಂಚಾಲಕಿಯಾಗಿ
ಶಶಿಕಲಾ ಶೆಟ್ಟಿ ಆಯ್ಕೆಯಾದರು.
ಸಭೆಯಲ್ಲಿ ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಆಶಾ ಆರ್. ಶೆಟ್ಟಿ,
ಮಾಜೀ ಅಧ್ಯಕ್ಷರಾದ ಪುಷ್ಪಾ ಬಿ.ಶೇಣವ, ಅಂಜನ ಶೆಟ್ಟಿ, ಮಮತಾ ಶೆಟ್ಟಿ ಹಾಗೂ ಬಂಟರ ಸಂಘದ ನಿರ್ದೇಶಕ
ಪುಷ್ಪರಾಜ್ ಶೆಟ್ಟಿ ಕುಡುಂಬೂರು ಉಪಸ್ಥಿತರಿದ್ದರು.
ವರದಿ: ಜಗನ್ನಾಥ ಶೆಟ್ಟಿ ಬಾಳ