ಆತ್ಮಸ್ಥೆರ್ಯ, ಸನ್ನಡತೆ ಶ್ರೇಷ್ಠತೆಯಡೆ ಕೊಂಡೊಯ್ಯತ್ತದೆ: ಅಜಿತ್ ಕುಮಾರ್ ರೈ ಮಾಲಾಡಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆತ್ಮಸ್ಥೆರ್ಯ, ಸನ್ನಡತೆ ಶ್ರೇಷ್ಠತೆಯಡೆ ಕೊಂಡೊಯ್ಯತ್ತದೆ: ಅಜಿತ್ ಕುಮಾರ್ ರೈ ಮಾಲಾಡಿ

Share This
ಬಂಟ್ಸ್ ನ್ಯೂಸ್, ಮಂಗಳೂರು: ಆತ್ಮಸ್ಥೆರ್ಯ, ಸದೃಡತೆ, ಸನ್ನಡತೆ ನಮ್ಮನ್ನು ಶ್ರೇಷ್ಠೆತೆಯಡೆಗೆ ಕೊಂಡೊಯ್ಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನುಡಿದರು.
ಅವರು ಸುರತ್ಕಲ್ ಬಂಟರ ಸಂಘದ ವತಿಯಿಂದ ಸುರತ್ಕಲ್ ಬಂಟರ ಭವನದಲ್ಲಿ ಅಭಿನಂದನ ಸಮಾರಂಭ ಮತ್ತು  ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೊರೆತ ಅವಕಾಶವನ್ನು ಸದುಪಯೋಗಪಡಿಸಿ ಅತ್ಯಂತ ಕ್ರಿಯಾಶೀಲ   ವ್ಯಕ್ತಿತ್ವನ್ನು ಮೈಗೂಡಿಸಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ತಮ್ಮ  ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿರಿ ಹಾಗೂ ಸದ್‍ಭವಿಷ್ಯದ ಚಿಂತಕರಾಗಿ  ಎಂದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿ ಬಂಟರ ಸಂಘದ ಸಮಾಜಪರ ಚಿಂತನೆಗಳನ್ನು ವಿವರಿಸಿ ಶುಭ ಹಾರೈಸಿದರು.  ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ. ಗ್ರೂಪ್‍ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ದಿನಕರ ಶೆಟ್ಟಿ ಪಡ್ರೆ, ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷ ಚಂದ್ರಕಲಾ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜಾ, ಕಾರ್ಯದರ್ಶಿ ಸೀತಾರಾಮ ರೈ,  ಜೊತೆ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ,   ಉಪಸ್ಥಿತರಿದ್ದರು.   ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಪೂರ್ಣಿಮಾ ಯತೀಶ್ ರೈ, ಸಂಜಾನ ಎಸ್ ಶೆಟ್ಟಿ, ಮೇಘಾ ವಿ ಶೆಟ್ಟಿಯವರನ್ನು ಗೌರವಿಸಲಾಯಿತು.  ಸ್ಥಳೀಯ ಸಂಸ್ಥೆಗಳಲ್ಲಿ ವಿಜೇತ ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಪ್ರತಿಭಾ ಶೆಟ್ಟಿ, ಶಶಿಕಲಾ ಶೆಟ್ಟಿ, ಸುಪ್ರೀತಾ ಶೆಟ್ಟಿ, ಜ್ಯೋತಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ವಿಧವೆಯರು, ಭಿನ್ನ ಸಾಮಥ್ರ್ಯದವರು ಮತ್ತು ಅಂಗವಿಕಲರಿಗೆ ಸಹಾಯಧನ ನೀಡಲಾಯಿತು.  ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್ ಸಿಯಲ್ಲಿ 600ಕ್ಕಿಂತ ಹೆಚ್ಚು ಹಾಗೂ ದ್ವಿತೀಯ ಪಿಯುಸಿಯಲ್ಲಿ 575ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.  ಸುಮಾರು 1 ಲಕ್ಷದ 10 ಸಾವಿರ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ಜರಗಿತು.
ವರದಿ: ಜಗನ್ನಾಥ ಶೆಟ್ಟಿ ಬಾಳ

Pages