ವಾಯುಸೇನಾ ವಿಮಾನ ನಾಪತ್ತೆ ಘಟನೆ: ಬೆಳ್ತಂಗಡಿ ಯೋಧ ಏಕನಾಥ ಶೆಟ್ಟಿ ಕಣ್ಮರೆ - BUNTS NEWS WORLD

 

ವಾಯುಸೇನಾ ವಿಮಾನ ನಾಪತ್ತೆ ಘಟನೆ: ಬೆಳ್ತಂಗಡಿ ಯೋಧ ಏಕನಾಥ ಶೆಟ್ಟಿ ಕಣ್ಮರೆ

Share This
ಬಂಟ್ಸ್ ನ್ಯೂಸ್, ಬೆಳ್ತಂಗಡಿ: ಶುಕ್ರವಾರ ಮುಂಜಾನೆ ಕಣ್ಮರೆಯಾಗಿರುವ ವಾಯುಸೇನೆಯ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಯೋಧ ಏಕನಾಥ ಶೆಟ್ಟಿ ಅವರು ಕೂಡ ಇದ್ದಿರುವುದಾಗಿ ಶಂಕಿಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
ಘಟನಾ ವಿವರ: ಶುಕ್ರವಾರ ಬೆಳಗ್ಗೆ ವಾಯುಸೇನೆಯ ಎಎನ್‌-32ರಲ್ಲಿ  ಚೆನ್ನೈ ಯಿಂದ ಅಂಡಮಾನ್ ಪೋರ್ಟ್ಬ್ಲೇರ್ಗೆ ಪ್ರಯಾಣಿಸುತ್ತಿದ್ದ ಸಂದರ್ಭ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿತ್ತು. ಇದರಲ್ಲಿ ವಾಯುಸೇನೆಯ ಒಟ್ಟು 29 ಜನ ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪ್ರಯಾಣಿಕರಲ್ಲಿ ಕರ್ನಾಟಕದ ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಯೋಧ ಏಕನಾಥರು ಒಬ್ಬರಾಗಿದ್ದಾರೆ. ಯೋಧ ಏಕನಾಥರು ಈ ಹಿಂದೆ ಭೂ ಸೇನೆಯಲ್ಲೂ ಸೇವೆ ಸಲ್ಲಿಸಿದ್ದರು.

Pages