BUNTSNEWS, ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ
2014-15ನೇ ಸಾಲಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ 2
ಚಿನ್ನದ ಪದಕ ಪಡೆದಿರುವ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು ಅವರ ಅನನ್ಯ ಸಾಧನೆ ಗುರುತಿಸಿ
ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು ರಾಜ್ಯಶ್ರೀ ಅವರನ್ನು ಸನ್ಮಾನಿಸಿದೆ.
ಇತ್ತಿಚೇಗೆ ನಡೆದ ಸಹೋದರ ಯುವಕ ಸಂಘ (ರಿ) ಬಾರೆಬೆಟ್ಟು
ಇದರ 26ನೇ ವಾರ್ಷಿಕೋತ್ಸವದಲ್ಲಿ ಸ್ವರ್ಣ ಪದವಿ ಪಡೆದ ರಾಜ್ಯಶ್ರೀ ಅಡ್ಯಂತಾಯ ಅವರನ್ನು ಸನ್ಮಾನಿಸಿ
ಅಭಿನಂದಿಸಿಲಾಯಿತು. ಈ ಸಂದರ್ಭ ಊರ ಪ್ರಮುಖರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪದವಿಯಲ್ಲಿ 2 ಸ್ವರ್ಣ ಪದಕ ವಿಜೇತ ವಿದ್ಯಾರ್ಥಿನಿ ರಾಜ್ಯಶ್ರೀ ಅಡ್ಯಂತಾಯ ಬಾರೆಬೆಟ್ಟು
ಅವರಿಗೆ ಬಂಟ್ಸ್ ನ್ಯೂಸ್.ಕಾಂ ಅಭಿನಂದಿಸುತ್ತಿದೆ. ಮುಂದೆ ರಾಜ್ಯಶ್ರೀ ಅಡ್ಯಂತಾಯ ಅವರು ಮತ್ತಷ್ಟು
ಸಾಧನೆ ಮಾಡಲೆಂದು ಹಾರೈಸುತ್ತಿದೆ. www.buntsnews.com