ಉಡುಪಿ: ರೈನ್ ಬೋ ಬುಡಾಕಾನ್ ಕರಾಟೆ ಅಕಾಡೆಮಿ ಯಡ್ತೆರೆ ಬೈಂದೂರು ಇಲ್ಲಿ ನಡೆದ 9ನೇ 'ರೈನ್ ಬೋ ಕಪ್' 22-23ರ ಕಪ್ ಕರಾಟೆ ಸ್ಪರ್ಧೆಯಲ್ಲಿ ಕಟ ಮತ್ತು ಕುಮೆಟೆ ಎರಡು ವಿಭಾಗಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು 5ನೇಯ ಬಾರಿ ರಾಷ್ಟ ಮಟ್ಟದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯುವಲ್ಲಿ ಹಾವಂಜೆ ಗ್ರಾಮದ ಕೀಳಂಜೆಯ ರಿಯಾ ಜಿ, ಶೆಟ್ಟಿ ಯಶಸ್ವಿಯಾಗಿದ್ದಾರೆ.
ಉಡುಪಿಯ ವಳಕಾಡು ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿನಿಯಾಗಿದ್ದು ಹಾವಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆ ಹಾಗೂ ಜಯಲಕ್ಷ್ಮಿ ಜಿ. ಶೆಟ್ಟಿಯವರ ಪುತ್ರಿಯಾಗಿದ್ದು ಪರ್ಕಳದ ಕರಾಟೆ ಪಟು ಪ್ರವೀಣ್ ರವರ ಶಿಷ್ಯೆಯಾಗಿದ್ದು ಪರ್ಕಳದ ಪಿಕೆಸಿ ತಂಡದ ಸದಸ್ಯೆ ಆಗಿದ್ದಾರೆ.