ಕುಂದಾಪುರ: ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಸಹಕಾರ ಸಂಘ(ರಿ), ತೆಕ್ಕಟ್ಟೆ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ, ಇದರ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇವರು ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು.ಇವರ ಸೇವಾ ಅವಧಿಯಲ್ಲಿ ಶಾಲೆಗೆ ಅಂಗವಿಕಲರ ಸಮನ್ವಯ ಶಿಕ್ಷಣಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿದೆ.
ಇವರು ಅನೇಕ ಪ್ರಶಸ್ತಿ, ಪುರಸ್ಕಾರವನ್ನು ಪಡೆದಿರುವರು. ಉತ್ತಮ ವಾಗ್ಮಿ, ಸಂಘಟನಾ ಚತುರ, ಆಡಳಿತಗಾರ, ಸಾಹಿತಿ. ಅನೇಕ ಪುಸ್ತಕಗಳನ್ನು ಬರೆದಿರುವರು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾರೆ.
ಅನೇಕ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಕಾಶವಾಣಿ, ದೂರದರ್ಶನ ಹಾಗೂ ಖಾಸಗಿ ಟಿ ವಿ ಯಲ್ಲಿ ಶಿಕ್ಷಣ ತಜ್ಞರಾಗಿ ಭಾಗವಹಿಸಿದ್ದಾರೆ.