ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ

Share This

ಬಂಟರ ಭವನದಲ್ಲಿ ನೆರವೇರಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಾರ್ಷಿಕ ವಿಶ್ವ ಸಮ್ಮಿಲನ

ಮುಂಬಯಿ: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ ಗುಣಧರ್ಮವಾಗಿದೆ ಆದುದರಿಂದ ಕನ್ನಡನಾಡು ಕಟ್ಟಲು ಮುಂಬಯಿವಾಸಿ ಬಂಟರ ಶಕ್ತಿ ಪಡೆಯಲು ಬಯಸುತ್ತಿದ್ದೇನೆ. ಜಗತ್ತಿನಲ್ಲಿ ಅತೀ ಹೆಚ್ಚು ಗೌರವವುಳ್ಳ ಬಂಟರು ಬಾಂಧವ್ಯಕ್ಕೆ ಬಲಿಷ್ಠರು. ಸದಾ ಭೃಹತ್ವತ್ವವನ್ನು ಯೋಚಿಸುವ ಬಂಟರು ಸಹೃದಯಿಗಳಾಗಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು.
ಅವರು ಕುರ್ಲಾದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ (ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್') ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ವಿಶ್ವ ಬಂಟರ ಸಮ್ಮಿಲನ-2022ರ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.

ನಳೀನ್‍ ಕುಮಾರ್ ಕಟೀಲ್ ಮಾತನಾಡಿ, ಉದ್ಯಮಶೀಲರಾಗಿ ಸಾಧಕರಾದ ಬಂಟರು ವಿಶ್ವ ಸುಂದರಿಯಿಂದ ವಿಶ್ವನಾಯಕರಾಗಿ ಬೆಳೆದವರಾಗಿದ್ದಾರೆ. ನಮ್ಮೂರ ಉದ್ಧಾರಕ್ಕೆ ಮುಂಬಯಿ ಬಂಟರ ಪಾತ್ರ ಮಹತ್ತರವಾದ ದು. ಅಖಂಡ ಸಮಾಜಕ್ಕೆ ಉಪಕಾರ ಸಲ್ಲಿಸುವ ಬಂಟರು ಸರ್ವ ಶ್ರೇಷ್ಠರು ಎಂದರು.

ಈ ಸಂದರ್ಭದಲ್ಲಿ ಕನ್ಯಾನ ಸದಾಶಿವ ಕೆ.ಶೆಟ್ಟಿ ಮತ್ತು ಸುಜಾತಾ ಎಸ್.ಶೆಟ್ಟಿ ದಂಪತಿ (ಮಕ್ಕಳಾದ ಶ್ರೇಯಾ ಮೇಘರಾಜ್ ಶೆಟ್ಟಿ ಮತ್ತು ಶ್ರೀರಾಜ್ ಎಸ್.ಶೆಟ್ಟಿ, ಡಾ| ಪ್ರಕೃತಿ ಶೆಟ್ಟಿ ಅವರನ್ನೊಳಗೊಂಡು) ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಫ್ಯಾಮಿನಾ ಮಿಸ್ ಇಂಡಿಯ ವರ್ಲ್ಡ್ ವಿಜೇತೆ ಕು| ಸಿನಿ ಸದಾನಂದ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಅವರು ಗೌರವಿಸಿದರು. 

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಭೂಮಂಡಲದಲ್ಲಿನ ಬಂಟರ ಐಕ್ಯತೆಯೇ ನಮ್ಮ ಧೇಯವಾಗಿದೆ. ಬಂಟರ ಸಾಂಘಿಕತೆಗೆ ಇಂತಹ ಸಮ್ಮೇಳನಗಳು ಪೂರಕವಾಗಿದ್ದು ಈ ಮೂಲಕ ಎಲ್ಲಾ ಬಂಟರನ್ನು ಸ್ಪಂದಿಸುವಲ್ಲಿ ಶ್ರಮಿಸಲಿದ್ದೇವೆ. ನಮ್ಮ ಫೆಡರೇಶನ್‍ನಲ್ಲಿ ಹಣದ ಕೊರತೆ ಉಂಟು. ನಾವೂ ಮಹಾದಾನಿಗಳಿಂದ ಹಣವನ್ನು ತೆಗೆದು ಆಥಿರ್ಕವಾಗಿ ಹಿಂದುಳಿದ ಸಮಾಜದ ಎಲ್ಲಾ ಬಾಂಧವರಿಗೆ ಶಿಕ್ಷಣ ನೆರವು, ವೈವಾಹಿಕ ನೆರವು, ವಸತಿ ನಿರ್ಮೂಲನ, ವೈದ್ಯಕೀಯ ಕಷ್ಟಗಳಿಗೆ ಸ್ಪಂದಿಸುತ್ತೇವೆ. ನಮ್ಮ ಧ್ಯೇಯ ಎಂದರೆ ಇದ್ದವರಿಂದ ತಗೊಂಡು ಇಲ್ಲದವರಿಗೆ ಕೊಡುವುದು ಎಂದರು.

ಅತಿಥಿ ಅಭ್ಯಾಗತರುಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಂಸದ ಹಾವೇರಿ ಸಂಸದ ಶಿವಕುಮಾರ್ ಉದಶಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ, ಹೇರಾಂಭಾ ಇಂಡಸ್ಟ್ರೀಸ್‍ನ ಕಾರ್ಯಾಧ್ಯಕ್ಷ ಕುಳೂರು ಸದಾಶಿವ ಕೆ.ಶೆಟ್ಟಿ, ಎಂಆರ್‍ಜಿ ಹಾಸ್ಪಿಟಾಲಿಟಿ ಎಂಡ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಆಗ್ರ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ತೋನ್ಸೆ ಆನಂದ ಎಂ.ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಭೋಜ ಶೆಟ್ಟಿ, ಕರುಣಾಕರ್ ಎಂ.ಶೆಟ್ಟಿ (ಮೆಕೊೈ), ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ (ಬರೋಡಾ), ರಘುರಾಮ ಕೆ.ಶೆಟ್ಟಿ (ಹೇರಾಂಭಾ), ಅಶೋಕ್ ಎಸ್.ಶೆಟ್ಟಿ (ಮೆರಿಟ್), ಉಮಾ ಕೃಷ್ಣ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ರಾಜೇಂದ್ರ ವಿ.ಶೆಟ್ಟಿ (ಪಂಜುರ್ಲಿ), ಸುರೇಶ್ ಜಿ.ಶೆಟ್ಟಿ ಎರ್ಮಾಳ್ (ನೆರೂಲ್), ಮುನಿಯಾಲು ಉದಯ ಕೃಷ್ಣ ಶೆಟ್ಟಿ, ಮುರಳೀ ಎಂ.ಶೆಟ್ಟಿ, ಅರವಿಂದ್ ಎ.ಶೆಟ್ಟಿ (ಭಯಂದರ್), ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಗೌ| ಪ್ರ| ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಗೌ| ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್ ಬೋಜ ಶೆಟ್ಟಿ ಬಂಟರ ವಿಶ್ವ ಸಮ್ಮೇಳನದ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ (ಬಂಟ್ಸ್ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ), ಬಂಟರ ಸಂಘ ಮುಂಬಯಿ ಪದಾಧಿಕಾರಿಗಳು ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಪದ್ಮನಾಭ ಪಯ್ಯಡೆ, ಮಹೇಶ್ ಶೆಟ್ಟಿ ಬಾಬಾಸ್, ಬಿ. ವಿವೇಕ್ ಶೆಟ್ಟಿ, ಅಶೋಕ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮಂಜುನಾಥ ಶೆಟ್ಟಿ, ಸಚಿನ್ ಶೆಟ್ಟಿ, ಜಯಕರ ಶೆಟ್ಟಿ, ಉಪೇಂದ್ರ ಶೆಟ್ಟಿ ಬೆಂಗಳೂರು, ಅರವಿಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಶಾಂತಾರಾಮ ಶೆಟ್ಟಿ, ಹರೀಶ್ ಶೆಟ್ಟಿ, ಜೆ.ವಿ ಶೆಟ್ಟಿ, ಅಶೋಕ್ ಶೆಟ್ಟಿ, ಸತೀಶ್ ಶೆಟ್ಟಿ, ಶರತ್ ಶೆಟ್ಟಿ, ಅಜಿತ್ ಶೆಟ್ಟಿ, ಹರೀಶ್ ಶೆಟ್ಟಿ, ಜಗನ್ನಾಥ ರೈ, ವಿಶ್ವನಾಥ ಶೆಟ್ಟಿ ಮೂಡುಶೆಡ್ಡೆ, ವೇಣುಗೋಪಾಲ್ ಶೆಟ್ಟಿ, ರವೀಂದ್ರ ಶೆಟ್ಟಿ, ವಾಸು ಶೆಟ್ಟಿ ಭಿವಂಡಿ, ಶಾಂತಾರಾಮ ಶೆಟ್ಟಿ, ವಸಂತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಶ್ಮೀರ, ಭಾಸ್ಕರ್ ಶೆಟ್ಟಿ ಖಾಂದೇಶ್, ಸಂತೋಷ್ ಶೆಟ್ಟಿ ಕುದಿ, ಸುಧಾಕರ ಶೆಟ್ಟಿ ಕುದಿ, ಸುಭಾಷ್ ಶೆಟ್ಟಿ, ಸತೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ನವೀನ್‍ಚಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಸಂತೋಷ್ ಶೆಟ್ಟಿ, ರವೀಂದ್ರನಾಥ ಎಂ.ಭಂಡಾರಿ, ಮನೋರಮ ಎನ್.ಶೆಟ್ಟಿ, ಲತಾ ಜಯರಾಮ ಶೆಟ್ಟಿ, ಚಿತ್ರಾ ಆರ್.ಶೆಟ್ಟಿ, ರಜನಿ ಸುಧಾಕರ ಶೆಟ್ಟಿ, ಲತಾ ಪಿ.ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು. 

ಅಪರಾಹ್ನ ನಡೆಸಲ್ಪಟ್ಟ ಸಭಾಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಮಹಾರಾಷ್ಟ್ರ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಉತ್ತರ-ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಉಪಸ್ಥಿತರಿದ್ದರು. ಫಡ್ನಾವಿಸ್ ಅವರು ಐಕಳ ಹರೀಶ್ ಶೆಟ್ಟಿ ಗ್ರಂಥ ಗೌರವ 'ಸಾರ್ವಭೌಮ' ಬಿಡುಗಡೆ ಗೊಳಿಸಿದರು. ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ದಂಪತಿಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು. 

ದೇವೇಂದ್ರ ಫಡ್ನಾವಿಸ್ ಮಾತನಾಡಿ, ಜಗತ್ತಿನಲ್ಲಿ ಬಂಟರು ಇಲ್ಲದ ಕ್ಷೇತ್ರಗಳಿಲ್ಲ. ಕಾರಣ ಬಂಟರು ಸಂಸ್ಕಾರ, ವ್ಯವಹಾರ, ಭಾಷೆ, ಸಂಸ್ಕೃತಿಯನ್ನು ಹಾಲಿನಲ್ಲಿ ಸಕ್ಕರೆ ಸೇರಿಸಿಕೊಳ್ಳುವಂತೆ ಬೆರೆಸಿಕೊಳ್ಳುವ ಸ್ವಾಭಾವದವರು ಆಗಿದ್ದಾರೆ. ಆದ್ದರಿಂದಲೇ ಬಂಟರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಧಕರೆಣಿಸುತ್ತಿದ್ದಾರೆ ಎಂದರು.

ದೇಶ ವಿದೇಶಗಳಲ್ಲಿನ ಬಂಟರ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪೋಷಕರು, ಸದಸ್ಯರನೇಕರು, ಪಾಲ್ಗೊಂಡಿದ್ದು ಬೆಳಿಗ್ಗೆ ಬಂಟರ ಸಂಘದ ಹೊರ ಆವರಣದಲ್ಲಿ ನಿರ್ಮಿತ ಕೊರಂಗ್ರಪಾಡಿ ದೊಡ್ಡಮನೆ ಆಶಾ ಪ್ರಕಾಶ್ ಶೆಟ್ಟಿ ಗುತ್ತಿನ ಮನೆಯನ್ನು ಕುಳೂರು ಸದಾಶಿವ ಕೆ.ಶೆಟ್ಟಿ ಉದ್ಘಾಟಿಸಿದ್ದು ಬಂಟರ ಒಕ್ಕೂಟದ ಮಹಾ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ ಹಾಗೂ ಶಶಿರೇಖಾ ಆನಂದ ಶೆಟ್ಟಿ ದಂಪತಿ ದೀಪ ಪ್ರಜ್ವಲಿಸಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಹಿಂಗಾರ ಅರಳಿಸಿ ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಠಲ್ ನಾಯಕ್ ಕಲ್ಲಡ್ಕ ತಂಡವು ಸಂಗೀತ, ಸಾಹಿತ್ಯ ಸಂಭ್ರಮವನ್ನು ಪ್ರಸ್ತುತ ಪಡಿಸಿದರು. ಅಂತೆಯೇ ವಿವಿಧ ಬಂಟರ ಸಂಘಗಳ ಮತ್ತು ಬಂಟರ ಸಂಘ ಮುಂಬಾಯಿ ಇದರ ಪ್ರಾದೇಶಿಕ ಸಮಿತಿಗಳ ತಂಡಗಳು ನೃತ್ಯಾವಳಿಗಳನ್ನು ಸಾದರ ಪಡಿಸಿದರು. ಕರ್ನೂರು ಮೋಹನ್ ರೈ ಮತ್ತು ಡಾ| ಪ್ರಿಯಾ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ಬಂಟಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹೇಮಲತಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕಿಶೋರ್ ಶೆಟ್ಟಿ ಮಧುವನ್ನಾಡಿದರು. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕರ್ನಿರೆ ವಿಶ್ವನಾಥ ಶೆಟ್ಟಿ ಒಕ್ಕೂಟದ ಮಾಹಿತಿಯನ್ನಾಡಿದರು. ಪುರುಷೋತ್ತಮ ಭಂಡಾರಿ ಸನ್ಮಾನಿತರನ್ನು ಪರಿಚಯಿಸಿದರು. ಕದ್ರಿ ನವನೀತ್ ಶೆಟ್ಟಿ ಮತ್ತು ಅಶೋಕ್ ಪಕ್ಕಳ, ಜಯ ಎ.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಉಳ್ತೂರು ಮೋಹನ್‍ದಾಸ್ ಶೆಟ್ಟಿ ವಂದನಾರ್ಪಣೆಗೈದರು.

Pages