ಸಾಯುವವರೆಗೂ ಸಮಾಜದ ಕೆಲಸ ಮಾಡುವೆನೆಂಬ ಐಕಳರ ಮಾತು ನಮಗೆಲ್ಲಾ ಸ್ಪೂರ್ತಿ : ಪ್ರೊ. ಸುಬ್ರಹ್ಮಣ್ಯ ಎಡಪಡಿತ್ತಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಾಯುವವರೆಗೂ ಸಮಾಜದ ಕೆಲಸ ಮಾಡುವೆನೆಂಬ ಐಕಳರ ಮಾತು ನಮಗೆಲ್ಲಾ ಸ್ಪೂರ್ತಿ : ಪ್ರೊ. ಸುಬ್ರಹ್ಮಣ್ಯ ಎಡಪಡಿತ್ತಾಯ

Share This

ಮುಂಬೈ ವಿವಿಯಲ್ಲಿ ಐಕಳ ಹರೀಶ್ ಶೆಟ್ಟಿಯವರ 'ಸಾರ್ವಭೌಮ' ಗೌರವಗ್ರಂಥ ಲೋಕರ್ಪಣೆ

ಮುಂಬೈ: ಎಲ್ಲರಿಗೂ ನಾಯಕತ್ವವನ್ನು ನೀಡುವುದು ಕಷ್ಟ. ಕುಶಲ ಸಂಘಟಕ ಹಾಗೂ ತನ್ನ ಕಾರ್ಯವನ್ನು ಸಾಧಿಸಿದ ಕೆಲಸ ಮಾಡುವ ಐಕಳರ ಸೇವೆ ಅಪರಿಮಿತ. ಸಮಾಜದ ಎಲ್ಲರನ್ನೂ ಉತ್ತಮ ಪಡಿಸುವ ಚಿಂತನೆ ಮೊದಲು ಮಾನವನಾಗು ಎಂಬ ಸೂಕ್ತಿಗೆ ಅನುಗುಣವಾಗಿ ಎಲ್ಲಾ ಸಮಾಜದ ಜನರ ಕಣ್ಣೀರು ಒರೆಸುವ ಕೆಲಸವನ್ನು ಐಕಳ ಅವರು ಮಾಡಿದ್ದಾರೆ. ಒಳ್ಳೆಯ ಜನಪರ ಕೆಲಸಗಳಲ್ಲಿ ದೇವರನ್ನು ಕಂಡವರು. ಒಳ್ಳೆಯ ಕ್ರೀಡಾಪಟುವಾಗಿ. ವಿದ್ಯಾರ್ಥಿ ಯಾಗಿರುವಾಗಲೇ ನಾಯಕತ್ವವನ್ನು ಬೆಳೆಸಿಕೊಂಡವರು. ಹುಟ್ಟು ಹೋರಾಟಗಾರರು ಐಕಳ ಅವರು ಹೋರಾಟದ ದಿಸೆಯಲ್ಲಿ ಬಂದು ನಾನು ಸಾಯುವವರೆಗೂ ಸಮಾಜದ ಕೆಲಸ ಮಾಡುತ್ತೇನೆ ಎಂಬ ಮಾತು ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಿಪಡಿತ್ತಾಯ ನುಡಿದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರ 'ಸಾರ್ವಭೌಮ' ಗೌರವಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆ.10 ರಂದು ಶನಿವಾರ ವಿಶ್ವವಿದ್ಯಾಲಯದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಈ ಭವನದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಿಪಡಿತ್ತಾಯ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಐಕಳ ಅವರ ಸಾಮಾಜಿಕ ಸೇವೆಯ ಸಾಕ್ಷ್ಯ ಚಿತ್ರ ಕಂಡಾಗ ನನಗೆ ಕಣ್ಣೀರು ಬಂತು, ಅದರಲ್ಲಿ ಸಮಾಜದ ಕಷ್ಟದಲ್ಲಿರುವ ದೃಶ್ಯ ಗಳಿವೆ ಇಂಥವರಿಗೆ ಮಾಡಿದ ಸಹಾಯ ಒಂದು ಮೈಲಿಗಲ್ಲು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರು. ನಟ ಡಾ. ರಾಜ್ ಕುಮಾರ್ ನಟ ಸಾರ್ವಭೌಮ ಆಗಿದ್ದಾರೆ .ರಾಜ್ ಕುಮಾರ್ ಅವರು ಅಭಿಮಾನಿಗಳೇ ದೇವರು ಎನ್ನುತ್ತಾರೆ. ಆದರೆ ಐಕಳ ಅವರು ದಾನಿಗಳೆ ನನ್ನ ದೇವರು ಎಂದು ಹೇಳ್ತಾರೆ ಇವರು ಸಮಾಜ ಸಾರ್ವಭೌಮ. ಇನ್ನೊಬ್ಬರಿಗೆ ಗೌರವ ಕೊಟ್ಟು ತಾನು ಗೌರವ ಪಡೆದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇವರನ್ನು ಎಲ್ಲಾ ಸಮಾಜದದವರು ಪ್ರೀತಿಸಿದರು ಗೌರವಿಸಿದರು. ಐಕಳ ಹರೀಶ್ ಅವರ ಪ್ರತಿಷ್ಠೆಯನ್ನು ಕೆಲಸವನ್ನು ಕಂಡಾಗ ಬೇರೆ ಸಮುದಾಯದ ವರಿಗೂ ನಾನು ಇವರ ಒಡನಾಡಿಯಾಗಿ ಇರಬೇಕು ಎಂದು ಅನಿಸುತ್ತದೆ, ತಾನು ಗಳಿಸಿದ್ದನ್ನು ಹಿಂದೆ ಸಮಾಜಕ್ಕೆ ಕೊಡಬೇಕು ಎಂಬ ಮನಸಿದ್ದವರು ಬಹಳ ಎತ್ತರಕ್ಕೆ ಏರುತ್ತಾರೆ. ಇದಕ್ಕೆ ಐಕಳ ಹರೀಶ್ ಶೆಟ್ಟಿ ಯವರೂ ಉದಾಹರಣೆ ನಾವು ಹುಟ್ಟುವಾಗ ನಮಗೆ ಹೆಸರು ಇರುವುದಿಲ್ಲ. ಒಳ್ಳೆ ಕೆಲಸ ಮಾಡಿದರೆ ನಾವು ಹಿಂದೆ ಹೋಗುವಾಗ ನಮ್ಮ ಹೆಸರು ಉಳಿಯುತ್ತದೆ ಎಂದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಡಾ.ಜಿ.ಎನ್.ಉಪಾಧ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವ ಗ್ರಂಥ ಲೋಕಾರ್ಪಣೆಯ ಬಳಿಕ ಐಕಳ ಹರೀಶ್ ಶೆಟ್ಟಿ ಮತ್ತು ಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಯನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಂಸದ ಗೋಪಾಲ್ ಶೆಟ್ಟಿ. ಸದಾಶಿವ ಶೆಟ್ಟಿ ಕುಳೂರು, ಕನ್ಯಾನ (ಆಡಳಿತ ನಿರ್ದೇಶಕರು, ಹೇರಂಬ ಇಂಡಸ್ಟ್ರೀಸ್), ಆನಂದ ಶೆಟ್ಟಿ (ಆಡಳಿತ ನಿರ್ದೆಶಕರು, ಆರ್ಗಾನಿಕ್ ಕೆಮಿಕಲ್ಸ್ ) ಸುಧಾಕರ ಹೆಗ್ಡೆ (ಆಡಳಿತ ನಿರ್ದೆಶಕರು, ತುಂಗಾ ಗ್ರೂಪ್ ಆಪ್ ಹೊಟೇಲ್ಸ್ ), ಡಾ. ಸುನೀತಾ ಎಂ. ಶೆಟ್ಟಿ ( ಹಿರಿಯ ಸಾಹಿತಿ, ಮುಂಬಯಿ ), ಡಾ. ಸುರೇಶ್ ರಾವ್ (ಖ್ಯಾತ ವೈದ್ಯರು, ಸಂಜೀವಿನಿ ಆಸ್ಪತ್ರೆ, ಮುಂಬಯಿ), ಹರೀಶ್‌ .ಜಿ . ಅಮೀನ್ (ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್, ಮುಂಬಯಿ), ಸುರೇಶ್‌ ಕಾಂಚನ್‌ (ಗೌರವ ಅಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ, ಹೋಬಳಿ, ಮುಂಬಯಿ), ಉಮಾ ಕೃಷ್ಣ ಶೆಟ್ಟಿ (ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ಬಂಟರ ಸಂಘ ಮುಂಬಯಿ) ಮತ್ತು ಗ್ರಂಥದ ಪ್ರಧಾನ ಸಂಪಾದಕ. ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ್ ಪಾಲತ್ತಾಡಿ, ಸಂಪಾದಕಿ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ (ಸಹಪ್ರಾಧ್ಯಾಪಕಿ ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾನಿಲಯ) ಸಲಹೆ ಸಮಿತಿಯ ಸದಸ್ಯರುಗಳಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪ್ರವೀಣ್ ಬೋಜ ಶೆಟ್ಟಿ, ತುಳುಕುಟ ಫೌಂಡೇಶನ್ ನಾಲಸಪುರದ ಸಂಸ್ಥಾಪಕ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಬಂಟರ ಸಂಘ ಮುಂಬೈಯ ಮುಖವಾನಿ ಬಂಟರವಾನಿಯ ಕಾರ್ಯಧ್ಯಕ್ಷ ರವೀಂದ್ರನಾಥ್ ಭಂಡಾರಿ ಹಾಗೂ ಗೌರವ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಗಳಾದ ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ಕೊಲ್ಲಾಡಿ ಬಾಲಕೃಷ್ಣ ರೈ, ಡಾ. ದಿನೇಶ್ ಶೆಟ್ಟಿ ರೇಂಜಾಳ, ದಿನೇಶ್ ಕುಲಾಲ್ ಉಪಸ್ಥಿತರಿದ್ದರು.

ಡಾ. ಜಿ ಎನ್ ಉಪಾಧ್ಯ ಪ್ರಾಸ್ತಾವಿಕ ಮಾತುಗಳ್ನಾಡಿದರು. ಕರ್ನಿರೆ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ್ ಪಾಳೆತ್ತಾಡಿ ಗೌರವ ಗ್ರಂಥದ ಬಗ್ಗೆ ಮಾತನಾಡಿದರು. ಡಾ. ಪೂರ್ಣಿಮಾ ಶೆಟ್ಟಿ ಗ್ರಂಥ ಪರಿಚಯಿಸಿದರು. ಡಾ. ಆರ್ ಕೆ ಶೆಟ್ಟಿ ಗ್ರಂಥದ ಪರಿಚಯ ಮಾಡಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು ಉಳ್ತೂರು ಮೋಹನದಾಸ ಶೆಟ್ಟಿ ಧನ್ಯವಾದ ನೀಡಿದರು. 

ಪ್ರಾರಂಭದಲ್ಲಿ ಮುಂಬೈಯ ವಿವಿಧ ಸಂಘ ಸಂಸ್ಥೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಜಾನಪದ ಗೀತೆ ನಡೆದವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರವಿ ಎಸ್. ಶೆಟ್ಟಿ (ಆಡಳಿತ ನಿರ್ದೆಶಕರು, ಸಾಯಿ ಪ್ಯಾಲೇಸ್ ಗ್ರೂಪ್ ಆಪ್ ಹೊಟೇಲ್ಸ್), ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ನಗರದ ವಿವಿಧ ಜಾತಿಯ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಐಕಳ ಹರೀಶ್ ಶೆಟ್ಟಿ ಅವರ ಅಭಿಮಾನಿಗಳು ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನ ವಿಶ್ವವಿದ್ಯಾನಿಲದ ಪ್ರಧಾನ ದ್ವಾರದಿಂದ ಸಭಾಂಗಣದವರೆಗೆ ಚೆಂಡೆ ಕೊಂಬು ವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಐಕಳ ದಂಪತಿಯನ್ನು ಸಭಾಂಗಣಕ್ಕೆ ಬರಮಾಡಲಾಯಿತು. ಮುಂಬೈ ವಿವಿಯಲ್ಲಿ ಪ್ರಪ್ರಥಮ ಬಾರಿಗೆ ಕನ್ನಡಿಗರೊಬ್ಬರ ಅದ್ದೂರಿಯ ಕಾರ್ಯಕ್ರಮದೊಂದಿಗೆ ಗೌರವ ಗ್ರಂಥ ಲೋಕಾರ್ಪಣೆಗೊಂಡಿದೆ.

Pages