ವಿರಾರ್ ಪೂರ್ವದ ಶ್ರೀ ಕಡಲ್ದ ಅಪ್ಪೆ ಲಕ್ಷ್ಮೀ ಮಂತ್ರದೇವತೆ - ಕೊರಗಜ್ಜ ಸಾನಿಧ್ಯದ ಕೊರಗಜ್ಜ ಹಾಗೂ ಮಂತ್ರದೇವತೆ ಕೋಲ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿರಾರ್ ಪೂರ್ವದ ಶ್ರೀ ಕಡಲ್ದ ಅಪ್ಪೆ ಲಕ್ಷ್ಮೀ ಮಂತ್ರದೇವತೆ - ಕೊರಗಜ್ಜ ಸಾನಿಧ್ಯದ ಕೊರಗಜ್ಜ ಹಾಗೂ ಮಂತ್ರದೇವತೆ ಕೋಲ

Share This
ಮುಂಬೈ: ಪ್ರಶಾಂತ್ ಶೆಟ್ಟಿಯವರ ವಿರಾರ್ ಪೂರ್ವದ ಶ್ರೀ ಕಡಲ್ದ ಅಪ್ಪೆ ಲಕ್ಷ್ಮೀ ಮಂತ್ರದೇವತೆ ಕೊರಗಜ್ಜ ಸಾನಿಧ್ಯದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಯಿತು. ಸನ್ನಿಧಾನಕ್ಕೆ ಬಂದಾಗ ಇಲ್ಲಿನ ಕಲೆ, ಕಾರ್ಣಿಕ ಕಂಡು ಮೂಕವಿಸ್ಮಿತನಾದೆ. ಇತಿಹಾಸ ನುಡಿದಂತೆ ಕಾಂತು ಬೈದನಿಗೆ ದೈವ ಒಲಿದ ಸ್ಥಿತಿ ಕಲಿಯುಗದಲ್ಲಿ ತುಳುನಾಡಿಂದ ವಾಣಿಜ್ಯ ನಗರಕ್ಕೆ ಪ್ರಶಾಂತ್ ಶೆಟ್ಟಿಯವರು ಬಂದು ನೆಲೆಸಿದ ಜಾಗಕ್ಕೆ ದೈವ ಒಲಿದು ಬಂದಿದೆ ಎಂದು ಶ್ರೀ ಕೊರಗಜ್ಜ ಸಾನಿದ್ಯದ ಧರ್ಮದರ್ಶಿ ಜನಾರ್ಧನ ಕುಪ್ಪೆಪದವು ಅಭಿಪ್ರಾಯಪಟ್ಟರು.
ವಿರಾರ್ ಪೂರ್ವ ರೈಲು ನಿಲ್ದಾಣದ ಸಮೀಪ, ಮನ್ವೆಲ್ಪಾಡಾ ರಸ್ತೆ, ಮೋರ್ಯ ನಗರ್ ವಾಸ್ತು ಶಿಲ್ಪಾ ಅಪಾರ್ಟ್ಮೆಂಟ್ ಇಲ್ಲಿನ ಶ್ರೀ ಕಡಲ್ದ ಅಪ್ಪೆ ಲಕ್ಷ್ಮಿ ಮಂತ್ರ ದೇವತೆ ಕೊರಗಜ್ಜ ಸಾನಿಧ್ಯದಲ್ಲಿ ಜು. 3 ರಂದು ಸಾನ್ನಿಧ್ಯದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಸ್ವಾಮಿ ಕೊರಗಜ್ಜ ದೈವದ ಕೋಲ ನಂತರ ಶ್ರೀ ಮಂತ್ರದೇವತೆ ದೈವದ ಕೋಲ ಭಕ್ತಿಪೂರ್ವಕವಾಗಿ ವಿಜ್ರಂಭಣೆಯಿಂದ ನಡೆಯಿತು. 

ಮಂತ್ರದೇವತೆಯ ನರ್ತಕರೂ ಆದ ಜನಾರ್ಧನ ಕುಪ್ಪೆಪದವು ತನ್ನ ಅನುಭವವನ್ನು ವ್ಯಕ್ತಪಡಿಸುತ್ತಾ ಪ್ರಶಾಂತ್ ಶೆಟ್ಟಿ ಯವರು ನೆಲೆಸಿದ ಈ ಜಾಗಕ್ಕೆ ಸಾಗರದಲ್ಲಿ ಕಲ್ಲಿನ ರೂಪದಲ್ಲಿ ದೈವ ದೊರಕಿದ್ದು ಹುಣ್ಣೆಮೆ ದಿನ ಕನಸಿನಲ್ಲಿ ಮಂತ್ರದೇವತೆ ಬಂದು ಒಲಿಯುತ್ತೇನೆ ಎಂದು ಅಭಯವನ್ನು ನೀಡಿದರು. ಆ ಕಲ್ಲನ್ನು ಇದೀಗ ಆರಾದಿಸಿಕೊಂಡು ಬರುತ್ತಿದ್ದು ಈ ಕ್ಷೇತ್ರವು ಮುಂಬಯಿ ಯ ಎಲ್ಲಾ ತುಳು ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ತುಳುನಾಡಿನ ಜನರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಕಷ್ಟಕ್ಕೆ ಹರಕೆ ಹೊತ್ತು ಪರಿಹಾರ ಪಡೆಯುತ್ತಿರುವರು. ಪ್ರತೀ ಸಂಕ್ರಮಣ ಸೇವೆ ಹಾಗೂ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ನಡೆಯುತ್ತಿದ್ದು ಮುಂದೆ ಹರಕೆಯ ರೀತಿಯಲ್ಲಿ ಇಲ್ಲಿ ನೇಮೋತ್ಸವ ನಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದರು.

ಮಧ್ಯಾಹ್ನ ಭಂಡಾರ ಆಗಮನ ನಂತರ ಕ್ಷೇತ್ರದ ಪ್ರಮುಖರಾದ ಪ್ರಶಾಂತ್ ಶೆಟ್ಟಿಯವರ ನೇತೃತ್ವದಲ್ಲಿ ಲಿಂಗಪ್ಪ ಗೌಡ ವಿಟ್ಲ ಮತ್ತು ಹರೀಶ್ ಪೂಜಾರಿ ಪಂಜ ಇವರ ಸಹಕಾರದಿಂದ ಮಧ್ಯಾಹ್ನದಿಂದ ತಡರಾತ್ರಿ ತನಕ ಸ್ವಾಮಿ ಕೊರಗಜ್ಜ ಹಾಗೂ ಮಂತ್ರದೇವತೆ ಕೋಲವು ವಾದ್ಯವೃಂದ ಬಳಗದವರಾದ ರಾಧಾಕೃಷ್ಣ ಮೊಗ್ರ ಮನೆ, ದೇವಪ್ಪ ಸಂಪ್ಯಾಡಿ ತೀರ್ಥಪ್ರಸಾದ ಸಂಪ್ಯಾಡಿ, ಪುರುಷೋತ್ತಮ ಮರ್ದಾಳ ಇವರ ಚೆಂಡೆ ವಾದ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು.

ಕೊರಗಜ್ಜ ದೈವ ನರ್ತಕರಾಗಿ ಸತೀಷ್ ನಕ್ರೆ ಕಾರ್ಕಳ ಮತ್ತು ನಿತೀಷ್ ಕಾರ್ಕಳ ಅತ್ತೂರು, ನಿತಿನ್ ಕಾರ್ಕಳ ಅತ್ತೂರು, ಸಂಜೀವ ಪುತ್ಲಾರ್ ದೈವದ ಸಹಾಯಕ ವೃಂದದವರಾಗಿದ್ದರು.

ಈ ಧಾರ್ಮಿಕ ಸಮಾರಂಭದಲ್ಲಿ ವಿರಾರ್ ಹಾಗೂ ಪರಿಸರದ ಮತ್ತು ಮುಂಬಯಿ ಮಹಾನಗರದ ವಿವಿಧ ಭಾಗಗಳಿಂದ ಅನೇಕ ಜಾತೀಯ ಹಾಗೂ ತುಳು ಕನ್ನಡ ಸಂಘಟನೆಗಳ ಪ್ರಮುಖರು, ಉದ್ಯಮಿಗಳು ಹಾಗೂ ಇತರ ಭಕ್ತಾಭಿಮಾನಿಗಳು ಗಾಳಿ ಮಳೆಯನ್ನು ಲೆಕ್ಕಿಸದೆ ಸಾವಿರಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಗಂಧ ಪ್ರಸಾದ ನಂತರ ಅನ್ನ ಪ್ರಸಾದ ವಿತರಿಸಲಾಯಿತು.

Pages