ಮಂಗಳೂರು: ಕಾವೂರಿನ ರಕ್ಷಿತಾ ಭಾನುಪ್ರಸಾದ್ ಶೆಟ್ಟಿ ದಂಪತಿಗಳ 1 ವರ್ಷ 8 ತಿಂಗಳ ಮಗು ರಾಹಿತ್ಯ ಬಿ ಶೆಟ್ಟಿ ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ಸ್ಥಾನ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಪುಟ್ಟ ಕಂದ ರಾಹಿತ್ಯಳ ಈ ಸಾಧನೆ ಹುಟ್ಟೂರಿಗೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಹೆಮ್ಮೆಯನ್ನು ತಂದಿದೆ. 60 ಕ್ಕೂ ಹೆಚ್ಚು ಬಗೆಯ ಡೋಮೆಸ್ಟಿಕ್ ವಸ್ತುಗಳ, 13 ವಿವಿಧ ಬಗೆಯ ಆಹಾರಗಳ, 10ಕ್ಕೂ ಹೆಚ್ಚು ಬಗೆಯ ಹಣ್ಣು ಹಂಪಲುಗಳು,10 ಕ್ಕೂ ಹೆಚ್ಚು ತರಕಾರಿಗಳ, ಇಂಗ್ಲೀಷ್ ಆಲ್ಫಾಬೆಟ್ A to Z, ಪಬ್ಲಿಕ್ ಫಿಗರ್ (ಗಾಂಧಿ, ನೆಹರು, ಅಂಬೇಡ್ಕರ್, ಪ್ರಧಾನಿ ಮೋದಿ, ಸಾಲುಮರದ ತಿಮ್ಮಕ್ಕ) ನಮ್ಮ ದೇಶದ ರಾಷ್ಟ್ರ ಧ್ವಜ, ಮುಖಭಾವ (ಅಳುವುದು, ನಗುವುದು, ದುಃಖ, ಫೊಟೋ ಫೋಸ್, ಕ್ಯೂಟ್ ಇತ್ಯಾದಿ)10ಕ್ಕೂ ಹೆಚ್ಚು ದೇಹದ ಅಂಗಾಂಗಗಳ ಗುರುತಿಸುವಿಕೆ, 15ಕ್ಕೂ ಹೆಚ್ಚು ಕುಟುಂಬ ಸದಸ್ಯರ ಹಾಗೂ 10 ದೇವರ ಗುರುತುಗಳನ್ನು ಕಂಡು ಹಿಡಿಯುವ ಈ ಪುಟಾಣಿಯ ಸ್ಮರಣ ಶಕ್ತಿಯು ಎಂತವರನ್ನೂ ನಿಬ್ಬೆರಗುಗೊಳಿಸುತ್ತದೆ.
ಅಲ್ಲದೆ ಒಂಟಿಯಾಗಿ, ಯಾರ ಸಹಾಯವೂ ಇಲ್ಲದೆ ಏಣಿಯನ್ನು ಹತ್ತಿ ಇಳಿಯುವ ಸಾಹಸವನ್ನು ಕೂಡ ರಾಹಿತ್ಯ ಸಲೀಸಾಗಿ ಮಾಡಬಲ್ಲಳು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ಪದಕ, ಬ್ಯಾಡ್ಜ್ ಹಾಗೂ ಪ್ರಮಾಣ ಪತ್ರಗಳು ಪುಟಾಣಿ ರಾಹಿತ್ಯಾಳಿಗೆ ಸಿಕ್ಕಿದೆ.