Bunts News, ಹುಬ್ಬಳ್ಳಿ: ಸಿರಿಯನ್ನು ಬಚ್ಚಿಡದೆ ಒಳ್ಳೆ ಕಾರ್ಯಕ್ಕೆ ನೀಡಿದರೆ ದೇವರು ಇನ್ನಷ್ಟು ಸಂಪತ್ತನ್ನು ಕೊಡುತ್ತಾರೆ ಎಂಬ ಅಚಲ ನಂಬಿಕೆ ಇಟ್ಟ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಇದರ ಸಿಎಂಡಿ ರಾಜೇಂದ್ರ ವಿ ಶೆಟ್ಟಿ ಅವರು 10 ಲಕ್ಷ ರೂಪಾಯಿಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಮಹಾಪೋಷಕರಾಗಿ ಒಕ್ಕೂಟದ ಸಮಾಜಕಲ್ಯಾಣ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.
ಈ ಸಂದರ್ಭ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹಾಗೂ ಬೆಳಗಾವಿಯ ಉದ್ಯಮಿ ವಿಠಲ ಹೆಗ್ಡೆ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್ ಬಿ ಶೆಟ್ಟಿ, ಸತೀಶ್ ಶೆಟ್ಟಿ, ಸಿಎ ಬಿ.ಸಿ ಶೆಟ್ಟಿ, ಶ್ರೀಧರ ಶೆಟ್ಟಿ ಮಂತ್ರ ರೆಸಿಡೆನ್ಸಿ, ಅಶೋಕ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಅಶೋಕ್ ಶೆಟ್ಟಿ, ಮಹೇಶ ಶೆಟ್ಟಿ ಅಧ್ಯಕ್ಷರು ಹೋಟೆಲ್ ಅಸೋಸಿಯೇಷನ್ ಹುಬ್ಬಳ್ಳಿ, ಧಾರವಾಡ, ಪ್ರಸನ್ನ ಶೆಟ್ಟಿ ಹುಬ್ಬಳ್ಳಿ, ತ್ಯಾಗರಾಜ ಶೆಟ್ಟಿ ಕೋಲಾಪೂರಾ ಬಂಟರ ಸಂಘದ ಅಧ್ಯಕ್ಷರು, ಮಟ್ಟಾರು ರತ್ನಾಕರ ಹೆಗ್ಡೆ, ತೋನ್ಸೆ ಮನೋಹರ್ ಶೆಟ್ಟಿ ಅಧ್ಯಕ್ಷರು ತೋನ್ಸೆ ಬಂಟರ ಸಂಘ, ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಬಂಟವಾಳದ ಬಂಟರ ಸಂಘ, ವಿಶ್ವನಾಥ ಶೆಟ್ಟಿ ಹುಬ್ಬಳ್ಳಿ, ಸುರೇಶ್ ಶೆಟ್ಟಿ ಹುಬ್ಬಳ್ಳಿ, ಮೋಹನ್ ಶೆಟ್ಟಿ ಉಡುಪಿ, ಮಹೇಶ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಇಂದ್ರಾಳಿ ಜಯಕರ್ ಶೆಟ್ಟಿ ಕಾರ್ಯದರ್ಶಿ, ಉಳ್ತೂರು ಮೋಹನದಾಸ ಶೆಟ್ಟಿ ಕೋಶಾಧಿಕಾರಿ ಉಪಸ್ಥಿತರಿದ್ದರು.