ಮಂಜೇಶ್ವರ: ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದ ನಾರಾಯಣ ಶೆಟ್ಟಿ ಪಾವೂರು (79) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಶ್ರೀಯುತರು ತನ್ನ ಸ್ವಕ್ಷೇತ್ರ ಪಾವೂರು ಶ್ರೀ ಪೊಯ್ಯೆ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಮಾತ್ರವಲ್ಲದೆ, ಕುಂಜತ್ತೂರು, ಮಹಾಲಿಂಗೇಶ್ವರ ದೇವಸ್ಥಾನ, ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಂತಾದೆಡೆ ಯಕ್ಷಗಾನ ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಯಕ್ಷಗಾನದ ಅಭ್ಯುದಯಕ್ಕೆ, ಕಾರಣರಾಗಿದ್ದರು. ಪೌರಾಣಿಕ ಕಥಾನಕಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಇವರು ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು. ಅತ್ತ್ಯುತ್ತಮ ಕೃಷಿಕನಾಗಿ, ಸಮಾಜ ಸೇವಕನಾಗಿ ಜನಾನುರಾಗಿಯಾಗಿದ್ದರು.
ಶ್ರೀಯುತರು ತಮ್ಮ ಧರ್ಮಪತ್ನಿ ಹಾಗೂ ಮುಂಬಯಿ ಯಕ್ಷಗಾನ, ನಾಟಕರಂಗದ ಖ್ಯಾತ ಕಲಾವಿದ ಕರುಣಾಕರ್ ಶೆಟ್ಟಿ ಪಾವೂರು ಸೇರಿದಂತೆ, ಮೂರು ಗಂಡು, ಒಂದು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.